ಎಲ್ಲೆಡೆ ಮೊಳಗಿದ ಕನ್ನಡ ಕಹಳೆ-ಉಸಿರಾಗಲಿ ಕನ್ನಡ

7

ಎಲ್ಲೆಡೆ ಮೊಳಗಿದ ಕನ್ನಡ ಕಹಳೆ-ಉಸಿರಾಗಲಿ ಕನ್ನಡ

Published:
Updated:
ಎಲ್ಲೆಡೆ ಮೊಳಗಿದ ಕನ್ನಡ ಕಹಳೆ-ಉಸಿರಾಗಲಿ ಕನ್ನಡ

ಮಾಲೂರು: ದಾಸರು, ಶರಣರು, ಕವಿಗಳು ನಿರ್ಮಿಸಿದ ರಾಜ್ಯವು, ಗಡಿನಾಡು ಭಾಷಿಕರಲ್ಲಿ ಹೆಮ್ಮೆ ಮೂಡಿಸುತ್ತದೆ ಎಂದು ತಹಶೀಲ್ದಾರ್ ಎಚ್.ಅಮರೇಶ್ ಹೇಳಿದರು.ಮಂಗಳವಾರ ಪಟ್ಟಣದ ಬಾಲಕರ ಸರ್ಕಾರಿ ಆಟದ ಮೈದಾನದಲ್ಲಿ  ಹಮ್ಮಿಕೊಂಡಿದ್ದ 56ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಸಾಹಿತಿ ವೇಣುಗೋಪಾಲ ವಹ್ನಿ ಮಾತನಾಡಿ, ಇಂಗ್ಲಿಷ್ ವ್ಯಾಮೋಹಕ್ಕೆ ಸಿಲುಕಿದ ಇಂದಿನ ಪೀಳಿಗೆಗೆ ಸರ್ಕಾರ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ನಿಜಕ್ಕೂ ಖೇದಕರ ಸಂಗತಿ ಎಂದರು.ಪುರಸಭಾ ಅಧ್ಯಕ್ಷೆ ಗುಲಾಬ್‌ಜಾನ್, ಉಪಾಧ್ಯಕ್ಷ ಎ.ರಾಜಪ್ಪ, ಆರಕ್ಷಕ ವೃತ್ತ ನಿರೀಕ್ಷಕ ಕೇಶವಮೂರ್ತಿ, ಸಾಹಿತಿ ಮಾ.ವೆಂ.ತಮ್ಮಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಜಯರಾಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಮುನಿನಾರಾಯಣ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಇ.ದೇವರಾಜ್,  ಬಿಇಓ ವೆಂಕಟರಾಮರೆಡ್ಡಿ, ಪುರಸಭಾ  ಮುಖ್ಯಾಧಿಕಾರಿ ರುದ್ರಮುನಿ, ಪ್ರಾಂಶುಪಾಲರಾದ ಕೆ.ವೆಂಕಟೇಶಪ್ಪ, ಜಗದೀಶ್, ಉಪಪ್ರಾಂಶುಪಾಲ ಗೋವಿಂದೇಗೌಡ, ಶಿಕ್ಷಕ ಭದ್ರಪ್ಪ ಉಪಸ್ಥಿತರಿದ್ದರು.ಗೈರು: ಇದೇ ವೇಳೆ ಕನ್ನಡ ಉತ್ಸವಕ್ಕೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗೈರು ಹಾಜರಿ ಎದ್ದುಕಂಡಿತು.

`ಗಡಿನಾಡ ಅಭಿವೃದ್ಧಿಗೆ ಬೇಕಿದೆ ನೆರವು~

ಮುಳಬಾಗಲು: ಗಡಿನಾಡಿನಲ್ಲಿನ ಕನ್ನಡ ಭಾಷೆಯ ಅಭಿವೃದ್ಧಿಗೆ ಸರ್ಕಾರದ ಮನಸ್ಸು ಹಾಗೂ ಅನುದಾನ ಬೇಕಿದೆ ಎಂದು ಶಾಸಕ  ಎಂದು ಶಾಸಕ ಅಮರೇಶ್ ಹೇಳಿದರು.ಪಟ್ಟಣದ ಡಿವಿಜಿ ರಂಗಮಂದಿರದಲ್ಲಿ ಮಂಗಳವಾರ ನಡೆದ  ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡದ ಭಾಷೆ ಹಾಗೂ ಕನ್ನಡ ವಾತಾವರಣವನ್ನು ಎಲ್ಲೆಡೆ ಬೆಳೆಸಬೇಕು. ಭಾಷೆಯ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಒಟ್ಟಾಗಿಶ್ರಮಿಸಬೇಕು ಎಂದು ತಿಳಿಸಿದರು.ಡಾ.ಶಿವಪ್ಪ ರಚಿತ `ಕಾಡೇನಹಳ್ಳಿ ಗ್ರಾಮದ ಸಪ್ತಮಾತ್ರಿಕೆಯರು-ಒಂದು ನೋಟ- ಪುಸ್ತಕ ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ.ಶಿವಪ್ಪ, ಕನ್ನಿಕಾ ಮತ್ತು ರೇಷ್ಮೆ ಇಲಾಖೆಯ ಹನುಮಂತು ಅವರನ್ನು ಸನ್ಮಾನಿಸಲಾಯಿತು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ತ್ರಿವೇಣಮ್ಮ, ತಹಶೀಲ್ದಾರ್ ಪಿ.ಜಯಮಾಧವ, ಡಿವೈಎಸ್‌ಪಿ ಗೋವಿಂದಯ್ಯ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಡಾ.ವೆಂಕಟಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಆರ್.ಚಿಕ್ಕರೆಡ್ಡಪ್ಪಶೆಟ್ಟಿ, ಕನ್ನಡ ಭಟ ವೆಂಕಟಪ್ಪ ಪಾಲ್ಗೊಂಡಿದ್ದರು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕನ್ನಡ ಪಲ್ಲಕ್ಕಿಗಳು ಪಟ್ಟಣದಲ್ಲಿ ಸಂಚರಿಸಿದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.`ಕನ್ನಡ ಭಾಷೆ ಜನರ ಉಸಿರಾಗಲಿ~

ಶ್ರೀನಿವಾಸಪುರ: ಶಿಕ್ಷಕ ಸಮುದಾಯ ಹೆಚ್ಚಿನ ಶ್ರಮವಹಿಸಿ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕು. ಸಮುದಾಯ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಮೂಲಕ ಕನ್ನಡ ಕಾಳಜಿ ಪ್ರದರ್ಶಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.ಪಟ್ಟಣದ ಮಿನಿ ವಿಧಾನ ಸೌಧದ ಎದುರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ, ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಶ್ರೀನಿವಾಸಪುರ ಗಡಿ ತಾಲ್ಲೂಕಾದರೂ ಇಲ್ಲಿನ ಜನರಲ್ಲಿ ಕನ್ನಡ ಭಾಷೆಯ ಬಗ್ಗೆ ಗೌರವ ಹಾಗೂ ಅಭಿಮಾನಕ್ಕೆ ಕೊರತೆಯಿಲ್ಲ ಎಂದು ಹೇಳಿದರು.ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರೂ.15 ಕೋಟಿ ಖರ್ಚುಮಾಡಲಾಗಿದೆ. ರೂ.5 ಕೋಟಿ ವೆಚ್ಚದಲ್ಲಿ ಮುಸಾಫರ್ ಖಾನಾ ನಿವೇಶನದಲ್ಲಿ ವಿವಿಧ ಉದ್ದೇಶಗಳಿಗಾಗಿ ಕಟ್ಟಡ ನಿರ್ಮಿಸಲಾಗುವುದು. ಪಟ್ಟಣದಲ್ಲಿ ರೂ. 8 ಕೋಟಿ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಕನ್ನಡ ಶಾಲೆ ಮುಚ್ಚುವ ನಿರ್ಧಾರವನ್ನು ಸರ್ಕಾರ ಪುನರ್ ಪರಿಶೀಲಿಸಬೇಕು. 

ಶ್ರೀನಿವಾಸಪುರದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕನ್ನಡ ಭವನದ ಅಗತ್ಯವಿದೆ ಎಂದು ಹೇಳಿದರು.ತಹಶೀಲ್ದಾರ್ ಬಿ.ವಿ.ಪೂರ್ಣಿಮಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಚಂದ್ರಕಲಾ, ಆರ್.ವಿ.ಕುಲಕರ್ಣಿ, ಶ್ರೀನಿವಾಸಮೂರ್ತಿ, ಕೆ.ನರಸಿಂಹಮೂರ್ತಿ, ಕೆ.ವಿ.ನಾಗರಾಜ್, ರಾಜಾರೆಡ್ಡಿ, ಆರ್.ಚೌಡರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ. ಸದಸ್ಯ ಜಿ.ಕೆ.ನಾಗರಾಜ್, ತಾ.ಪಂ. ಅಧ್ಯಕ್ಷ ವೈದ್ಯಂ ವೆಂಕಟರೆಡ್ಡಿ, ಉಪಾಧ್ಯಕ್ಷ ಆಂಜಪ್ಪ, ಕಾರ್ಯ ನಿರ್ವಹಣಾಧಿಕಾರಿ ಡಾ. ಟಿ.ಜಯರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಮಹಮದ್ ಖಲೀ,  ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಬಿ.ವಿ.ವೆಂಕಟಾಚಲಪತಿ ಕಾರ್ಯಕ್ರಮ ನಿರೂಪಿಸಿದರು. ಶಿರಸ್ತೀದಾರ್ ಉಮಾರಮಣಯ್ಯ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ರಾಮಚಂದ್ರಪ್ಪ ವಂದಿಸಿದರು.ಮೆರವಣಿಗೆ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭುವನೇಶ್ವರಿ ಮೆರವಣಿಗೆ ಏರ್ಪಡಿಸಲಾಗಿತ್ತು. ಬೇರೆ ಬೇರೆ ಇಲಾಖೆಗಳು ನಿರ್ಮಿಸಿದ್ದ ನಾಡಿನ ಇತಿಹಾಸವನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು, ಮೂಕ ವೇಷಧಾರಿಗಳು ಹಾಗೂ ವಿದ್ಯಾರ್ಥಿಗಳು ಭುವನೇಶ್ವರಿ ರಥವನ್ನು ಹಿಂಬಾಲಿಸಿದರು. ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಹಾಗೂ ಕನ್ನಡಪರ ಸಂಘಟನೆಗಳು ನಿರ್ಮಿಸಿದ್ದ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಜನರ ಗಮನ ಸೆಳೆದವು.ಕನ್ನಡ ಭವನಕ್ಕೆ ಅನುದಾನ

ಕೆಜಿಎಫ್: ಇಲ್ಲಿನ ಕನ್ನಡ ಸಂಘದ ಆವರಣದಲ್ಲಿ ನಿರ್ಮಿಸಲಾಗುವ ಕನ್ನಡ ಭವನಕ್ಕೆ ನಗರಸಭೆಯಿಂದ ಧನ ಸಹಾಯ ಸಿಗಲಿದೆ ಎಂದು ನಗರಸಭೆ ಅಧ್ಯಕ್ಷ ಪಿ.ದಯಾನಂದ ಹೇಳಿದರು.ರಾಬರ್ಟ್‌ಸನ್‌ಪೇಟೆ ಕನ್ನಡ ಸಂಘದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ದ ಸ್ತಬ್ಧಚಿತ್ರಗಳ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.`ಗಡಿ ಪ್ರದೇಶದಲ್ಲಿರುವ ಇತರ ಭಾಷಿಕರು ಸಹ ಕನ್ನಡವನ್ನು ಕಡ್ಡಾಯವಾಗಿ  ಬಳಸಬೇಕು. ಗಡಿಭಾಗದ ಕನ್ನಡ ಭವನಕ್ಕೆ ಆರ್ಥಿಕ ಅನುದಾನಕ್ಕೆ ಪ್ರಯತ್ನಿಸಲಾಗುವುದು~ ಎಂದು ಶಾಸಕ ವೈ.ಸಂಪಂಗಿ ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ ಮಾತನಾಡಿ, ಅಭಿವೃದ್ಧಿಯಲ್ಲಿ ರಾಜ್ಯ ಮಂಜೂಣಿಯಲ್ಲಿದೆ ಎಂದರು.ಉತ್ಸವದಲ್ಲಿ ಶಾಲಾ

ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವೆಂಕಟಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭೀಮನೇಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್, ಕನ್ನಡ ಸಂಘದ ಅಧ್ಯಕ್ಷ ಶೇಖರಪ್ಪ ಹಾಜರಿದ್ದರು. ರಾಜ್ಯೋತ್ಸವದ ಅಂಗವಾಗಿ ವಿವಿಧ ಸಂಘಟನೆಗಳ ಸ್ತಬ್ಧಚಿತ್ರಗಳ ಆಕರ್ಷಕ ಮೆರವಣಿಗೆ ನಡೆಯಿತು.ಆಟೊ ಚಾಲಕರ ಸಂಘ: ಕೋಲಾರ ನಗರದ ಆಟೊ ರಿಕ್ಷಾ ವಿವಿಧೋದ್ದೇಶ ಸೌಹಾರ್ದ ಸಹಕಾರ ನಿಯಮಿತ, ಜಿಲ್ಲಾ ತ್ರಿಚಕ್ರ ವಾಹನ ಚಾಲಕರ ಸಂಘ, ರಾಜ್ಯ ಆಟೊ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ನಗರದ ಡೂಂಲೈಟ್ ವೃತ್ತದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಯೂನಿಯನ್ ಕಾರ್ಯಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಚಾಲನೆ ನೀಡಿದರು.  ಜೈ ಕೋಲಾರಮ್ಮ ಆಟೊ ನಿಲ್ದಾಣ ದಲ್ಲಿ  ಚಾಲಕರು ತಮ್ಮ ವಾಹನಗಳನ್ನು ಕನ್ನಡ ಧ್ವಜಗಳಿಂದ ಅಲಂಕರಿಸಿದ್ದರು. ಶ್ರೀರಾಮ ಕಾಫಿ ವಕ್ಸ್ನ ಶ್ರೀನಾಥ್ ಕನ್ನಡ ಬಾವುಟ ಹಾರಿಸಿದರು.  ಸಂಘಟನೆಯ ಮುಖಂಡರಾದ ಎನ್.ಅಮ್ಜದ್‌ಪಾಷಾ, ಮುಷ್ಟಾಕ್ ಅಹ್ಮದ್, ವಿ.ರಮೇಶ್, ಮುನಿವೆಂಕಟಸ್ವಾಮಿ, ಶ್ರೀನಿವಾಸ್, ಸಿ.ಎಸ್.ರವಿಕುಮಾರ್, ಅಲೆಕ್ಸಾಂಡರ್, ನಾಗರಾಜ, ಬಾಬು, ಬೆಗ್ಲಿ ಶ್ರೀನಿವಾಸ, ಮಂಜು, ರೇಣು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry