ಎಲ್ಲೆಲ್ಲು ಸೌಂದರ್ಯವೇ...

7

ಎಲ್ಲೆಲ್ಲು ಸೌಂದರ್ಯವೇ...

Published:
Updated:

‘ಲೈಫ್‍ ಈಸ್ ಬ್ಯೂತಿಪುಲ್’. ಈ ಸೊಗಸಾದ ಶೀರ್ಷಿಕೆಯಂತೆಯೇ ಚಿತ್ರದ ನಾಯಕನ ಬದುಕು ಕೂಡ ಸುಂದರವಾಗಿ ಇರಲಿದೆಯಂತೆ. ಚಿತ್ರದಲ್ಲಿ ಒಬ್ಬ ನಾಯಕನಿಗೆ ನಾಲ್ವರು ನಾಯಕಿಯರು! ಹೀಗಿರುವಾಗ  ನಾಯಕನ ಜೀವನ ಬ್ಯೂಟಿಪುಲ್ ಆಗದಿರಲು ಸಾಧ್ಯವೇ?ತೆಲುಗಿನಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ನಾಗೇಂದ್ರ ಅಶ್ವಥ್ ಅವರು ‘ಲೈಫ್‍ ಈಸ್ ಬ್ಯೂಟಿಫುಲ್’ ಮೂಲಕ ಸ್ವತಂತ್ರ ನಿರ್ದೇಶಕರಾಗು ತ್ತಿದ್ದಾರೆ. ‘ಬಾಲ್ಯದಲ್ಲಿ ಮಕ್ಕಳಿಗೆ ಬ್ಯೂಟಿಫುಲ್ ಎನ್ನುವ ಪದ ನಾಲಿಗೆಯಲ್ಲಿ ತಿರುಗುವುದಿಲ್ಲ, ಬ್ಯೂತಿಪುಲ್ ಎನ್ನುತ್ತಾರೆ ಆ ಕಾರಣಕ್ಕೆ ಈ ಶೀರ್ಷಿಕೆ’ ಎಂದವರು ಸ್ಪಷ್ಟಪಡಿಸಿದರು. ಜೀವನದ ಜರ್ನಿಯೇ ಕಥೆಗೆ ಮೂಲ.ಬಾಲ್ಯ, ಪ್ರೌಢ, ಯೌವನ– ಹೀಗೆ ವಿವಿಧ ಹಂತಗಳಲ್ಲಿ ಕಥೆ ಸಾಗುತ್ತದೆ. ನಿರ್ದೇಶಕರ ತಂದೆ ಹನುಮಪ್ರಸಾದ್ ಪಾಂಡುರಂಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತೆಲುಗಿನ 2 ಚಿತ್ರಗಳಲ್ಲಿ ಖಳನಾಯಕನ ಪೋಷಾಕು ತೊಟ್ಟಿದ್ದ ರಾಜೀವ್ ಇಲ್ಲಿ ನಾಯಕ. ಸಮತಾ, ಏಂಜಲ್,  ಭಾವನಾ, ಶರಣ್ಯ ಚಿತ್ರದ ನಾಯಕಿಯರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry