ಭಾನುವಾರ, ಮೇ 9, 2021
27 °C

ಎಲ್ಲ ಕಾಲದ ಕಲಿಕೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ವಿದ್ಯಾರ್ಥಿಗಳ ಕಲಿಕೆ ಎಲ್ಲ ಕಾಲಕ್ಕೂ ನಡೆಯಬೇಕು. ಅದು ಕೇವಲ ಸೀಮಿತ ಅವಧಿಗೆ ಮೀಸ ಲಾಗಬಾರದು ಎಂದು ಡಿಡಿಪಿಐ ಗೋವಿಂದಯ್ಯ ಅಭಿಪ್ರಾಯ ಪಟ್ಟರು.ತಾಲ್ಲೂಕಿನ ಕಶೆಟ್ಟಿಪಲ್ಲಿ ಗ್ರಾಮದ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿ ವಾರ ಏರ್ಪಡಿಸಲಾಗಿದ್ದ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲಿಕೆ ಶಾಲೆಗಷ್ಟೇ ಸೀಮಿತವಾಗಿಲ್ಲ. ಶಾಲೆಯ ಹೊರಗೂ ಕಲಿಕೆ ಇದೆ. ಕತೆ, ಹಾಡು, ಕುಣಿತ ನಮ್ಮ ಜನಪದರ ಕೊಡುಗೆ. ಗ್ರಾಮೀಣ ವಿದ್ಯಾರ್ಥಿಗಳು ರಜಾ ಕಾಲದಲ್ಲಿ ಅವೆಲ್ಲವನ್ನೂ ಕಲಿಯಬೇಕು ಎಂದು ತಿಳಿಸಿದರು.`ಶಾಲಾಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಪ್ರಮುಖವಾದುದು ಎಂದು ಗೋವಿಂದಯ್ಯ ಹೇಳಿದರು.

ಕಾರ್ಯಕ್ರಮದ ಮಾರ್ಗದರ್ಶಿ ಕೆ.ಎನ್.ರಾಮ ಚಂದ್ರಪ್ಪ, ಶಿಕ್ಷಕ ಜಿ.ಎನ್.ಪ್ರವೀಣ್ ಕುಮಾರ್ ಮಾತನಾಡಿದರು.ವಿಷಯ ಪರಿವೀಕ್ಷಕರಾದ ವೆಂಕಟಸ್ವಾಮಿ, ಶಿವ ಮಾದಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಎನ್.ರಮಣಾರೆಡ್ಡಿ, ಉಪಾಧ್ಯಕ್ಷ ಕೆ.ವಿ. ರಮಣಾ ರೆಡ್ಡಿ, ಸದಸ್ಯ ಕೆ.ವಿ. ಮಂಜುನಾಥರೆಡ್ಡಿ,  ಹನುಮಾನ್ ಕೆಪಿಎಲ್ ಯುವಕ ಸಂಘದ ಗಣೇಶ, ಅಶೋಕ, ಭರತ್ ಕುಮಾರ್, ಲಕ್ಷ್ಮೀನಾರಾಯಣ, ಜಯಶೀಲನ್ ಸಮಾ ರಂಭದಲ್ಲಿ ಉಪಸ್ಥಿತರಿದ್ದರು.  ನಂತರ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು. ರಾಧಮ್ಮ ಸ್ವಾಗತಿಸಿದರು. ರಾಮರತ್ನ  ನಿರೂಪಿಸಿದರು. ಅನಸೂಯಮ್ಮ ವಂದಿಸಿದರು.ಮಿನಿ ಉದ್ಯೋಗ ಮೇಳ 9ರಂದು

 ಕೋಲಾರ:  ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ವತಿಯಿಂದ ಏ.9ರಂದು ಮಿನಿ ಉದ್ಯೋಗ ಮೇಳವನ್ನು ಕಚೇರಿ ಆವರಣದಲ್ಲಿ ಬೆಳಿಗ್ಗೆ 10ಕ್ಕೆ ನಡೆಯಲಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.  ಮೇಳದಲ್ಲಿ ಆರೆಂಜ್ ಟೆಕ್ ಸೆಲ್ಯೂಷನ್ಸ್, ಕಚಾರ್ ಬಿಪಿಒ, ಐಕ್ಯ ಗ್ಲೋಬಲ್ ಸೆಲ್ಯೂಷನ್ಸ್, ಪ್ರೇರಣಾ ಮೋಟಾರ್ಸ್‌, ಕನ್‌ಕಾರ್ಡ್ ಮೋಟಾರ್ಸ್‌ ಮೊದಲಾದ ಸಂಸ್ಥೆಗಳು ಪಾಲ್ಗೊಳ್ಳುತ್ತಿದ್ದು. ಪದವಿ ಶಿಕ್ಷಣವನ್ನು ಪೂರೈಸಿರುವ ಅಭ್ಯರ್ಥಿಗಳು ವೈಯಕ್ತಿಕ ವಿವರ ದಾಖಲೆಯೊಂದಿಗೆ ಪಾಲ್ಗೊಳ್ಳಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.