ಗುರುವಾರ , ಮೇ 13, 2021
22 °C

`ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ'

ಬೆಂಗಳೂರು: `ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಭ್ರಷ್ಟಾಚಾರದ ಕರಾಳ ಭೂತ ಆವರಿಸಿರುವುದರಿಂದ ರಾಜ್ಯದ ಭವಿಷ್ಯವು ಮಸುಕಾಗಿದೆ' ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.ಉದಯಭಾನು ಕಲಾಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ `ಭವಿಷ್ಯದ ಕರ್ನಾಟಕ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ರಾಜಕೀಯ ಮುಖಂಡರು ಪ್ರಜಾಸೇವಕರಂತೆ ವರ್ತಿಸದೇ ಅಧಿಕಾರಶಾಹಿ ಧೋರಣೆ ಮುಂದುವರಿಸಿದ್ದಾರೆ. ಇದರಿಂದ ರಾಜ್ಯದ ಭವಿಷ್ಯ ಅಧೋಗತಿಗೆ  ತಲುಪುತ್ತಿದೆ' ಎಂದರು.ರಂಗಕರ್ಮಿ ಡಾ.ಮಾಸ್ಟರ್ ಹಿರಣ್ಣಯ್ಯ, `ಹಗರಣಗಳ ಸತ್ಯಾಸತ್ಯತೆ ಅರಿಯಲು ಸಮಿತಿಗಳನ್ನು ರಚಿಸಲಾಗುತ್ತದೆ. ಈ ಸಮಿತಿಯ ಸ್ಥಾಪನೆ ಮತ್ತು ಪ್ರಕ್ರಿಯೆಯ ವೆಚ್ಚವೇ ಹಗರಣದ ಮೊತ್ತಕ್ಕೆ ಸಮನಾಗಿರುತ್ತದೆ' ಎಂದರು.`ಜಾತಿಯ ರಾಜಕಾರಣದಿಂದ ವ್ಯವಸ್ಥೆಯೇ ರೋಗಗ್ರಸ್ತವಾಗಿದೆ. ಹೀಗಿದ್ದೂ ಜಾತ್ಯತೀತ ರಾಷ್ಟ್ರವೆಂದೇ ಹೇಳಿಕೊಳ್ಳಲಾಗುತ್ತಿರುವುದು ವಿಡಂಬನೆಯೇ ಸರಿ. ಬುದ್ಧ, ಬಸವ, ಅಂಬೇಡ್ಕರ್‌ರಂತಹ ಮೇರು ವ್ಯಕ್ತಿತ್ವದ ದಾರ್ಶನಿಕರೆಲ್ಲರೂ ನಿರ್ದಿಷ್ಟ  ಜಾತಿಯ ಕೋಟೆಯಲ್ಲಿ ಬಂಧಿತರಾಗಿದ್ದಾರೆ' ಎಂದು ವಿಷಾದಿಸಿದರು.ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, `ಭ್ರಷ್ಟಾಚಾರದ ವಿರುದ್ಧ ದನಿ ಎತ್ತಲು ಅಣ್ಣಾ ಹಜಾರೆ ಮಲಗಿದ್ದವರನ್ನು ಎಬ್ಬಿಸಿದರು. ಮುಂದಿನ ಹೆಜ್ಜೆ ಇಡಲು ಮತ್ತೊಬ್ಬ ಹಜಾರೆಯ ನೆರವಿನ ಅಗತ್ಯವಿರುವಂತೆ ಕಾಣುತ್ತಿದೆ' ಎಂದರು.ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.