`ಎಲ್ಲ ಭಾಷೆಗಳಿಗೆ ವಚನಗಳ ಅನುವಾದ ಅಗತ್ಯ'

7

`ಎಲ್ಲ ಭಾಷೆಗಳಿಗೆ ವಚನಗಳ ಅನುವಾದ ಅಗತ್ಯ'

Published:
Updated:

ವಿಜಾಪುರ: ಬಸವ ತತ್ವ ಪರಿಪಾಲನೆ ಯಲ್ಲಿ ಜಿಡಗಾ-ಮುಗಳಖೋಡ ಮಠ ಮುಂಚೂಣಿಯಲ್ಲಿದ್ದು, ಸಮಾಜಕ್ಕೆ ಸಾಕಷ್ಟು ಅನುಕೂಲತೆ ಕಲ್ಪಿಸಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.ಇಲ್ಲಿಯ ಯಲ್ಲಾಲಿಂಗೇಶ್ವರ ಪುಣ್ಯಾ ಶ್ರಮದಲ್ಲಿ `ಸಿದ್ಧಶ್ರೀ' ಕಲ್ಯಾಣ ಮಂಟಪದ ಅಡಿಗಲ್ಲು ಹಾಗೂ ಪುರಾಣ ಮಂಗಲೋತ್ಸವ ಸಮಾರಂಭದಲ್ಲಿ ಮಾತನಾಡಿದರು.`ಶರಣರು 12ನೇ ಶತಮಾನ ದಲ್ಲಿಯೇ ಅನುಭವ ಮಂಟಪ ಸ್ಥಾಪಿ ಸುವ ಮೂಲಕ ಜಾತ್ಯತೀತ ನಿಲುವು ಪ್ರತಿಪಾದಿಸಿದ್ದಾರೆ. ಅವರ ವಚನಗಳು ಬೇರೆ ಭಾಷೆಗಳಿಗೆ ಅನುವಾದ ಗೊಂಡಿದ್ದರೆ ಬಸವ ತತ್ವ ವಿಶ್ವವ್ಯಾಪಿ ಯಾಗುತ್ತಿತ್ತು. ಆ ಕೆಲಸ ಇಂದು ತ್ವತರಿವಾಗಿ ನಡೆಯಬೇಕಿದೆ' ಎಂದರು.`ಜಲ ಸಂಪನ್ಮೂಲ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಉತ್ತರ ಕರ್ನಾಟಕದ ಜನತೆಯ ಆಶೋತ್ತರ ಗಳಿಗೆ ತಕ್ಕಂತೆ ಕಾರ್ಯ ನಿರ್ವಸು ತ್ತಿದ್ದೇನೆ. ಅವರ ಬೇಡಿಕೆಗಳನ್ನು ಈಡೇರಿ ಸುವಲ್ಲಿ ಉಳಿದ ನನ್ನ ಸಮಯ, ಅವಧಿ ಮೀಸಲಾಗಿಡುತ್ತೇನೆ' ಎಂದು ಹೇಳಿದರು.ಅತಿಥಿಯಾಗಿದ್ದ ಇಂಡಿ ಶಾಸಕ ಯಶ ವಂತ್ರಾಯಗೌಡ ಪಾಟೀಲ, `ಜಿಡಗಾ ಮಠದಲ್ಲಿ ಅಕ್ಷರ, ಅನ್ನ ದಾಸೋಹ ಇದೆ. ಸಾಮಾನ್ಯರ ಶ್ರೇಯೋಭಿವೃದ್ಧಿ ಗಾಗಿ ಮಾತೃ ಪ್ರೇಮದಿಂದ ನಡೆದು ಕೊಳ್ಳುತ್ತಿದೆ. ಸಿದ್ಧಶ್ರಿ     ಕಲ್ಯಾಣ ಮಂಟಪ ನಿರ್ಮಾಣಕ್ಕೆ ಭಕ್ತನಾಗಿ ರೂ. 5 ಲಕ್ಷ ದೇಣಿಗೆ ನೀಡುತ್ತೇನೆ' ಎಂದರು.ಸಾನಿಧ್ಯ ವಹಿಸಿದ್ದ ಉಡುಪಿ ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ, `ಮನುಷ್ಯ ಜಾತಿ ಒಂದೇ ಆಗಿದ್ದು, ವಿಶ್ವಮಾನವ ಪರಿಕಲ್ಪನೆ ಮೂಡಬೇಕಿದೆ. ಎಲ್ಲ ಮತ, ಪಂಥಗಳ ದಾರಿ ಒಂದೇ. ಬಡತನ-ಸಿರಿತನ ಶಾಶ್ವತವಲ್ಲ. ಪ್ರೀತಿ, ವಾತ್ಸಲ್ಯ ನಮ್ಮನ್ನು ಕಾಯುತ್ತವೆ' ಎಂದರು.`ದೇಹ ಸ್ನಾನ ಕಾಣದಿದ್ದರೆ ಕೊಳೆಯಾಗುವ ಹಾಗೆ ಮನಸ್ಸು ಸಹ ಆಗಾಗ ಕೊಳೆಯಾಗುತ್ತಿರುತ್ತದೆ. ಸಂತರ ಶರಣರ ವಾಣಿಯನ್ನು ಕೇಳುವುದರಿಂದ ಮನಸಿನ ಕೊಳೆ ತೊಳೆಯುತ್ತದೆ' ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮುಗಳ ಖೋಡ-ಜಿಡಗಾ ಮಠದ ಡಾ.ಮುರು ಘರಾಜೇಂದ್ರ ಸ್ವಾಮೀಜಿ, ಎಂ.ಎಸ್. ರುದ್ರಗೌಡರ ಮಾತನಾಡಿದರು.

ಪುರಾಣ ಹೇಳಿದ ಗದುಗಿನ ಕಲ್ಲಿನಾಥ ಶರಣರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯ ದೇಸಾಯಿ, ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಇತರರು ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry