ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ

7

ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ

Published:
Updated:

ಬಾಗೇಪಲ್ಲಿ:  ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನು ವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಕಾರ್ಯಕ್ರಮ ಯಶಸ್ವಿ ಯಾಗಿ ನಡೆಯಿತು.ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಚಾಲನೆ ನೀಡಿ, `ಭಾರತ ದೇಶ     ಪೋಲಿಯೊ ಪೀಡಿತ ಮುಕ್ತ ರಾಷ್ಟ್ರ ವಾಗಬೇಕಾಗಿದೆ. 5ವರ್ಷ ದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ಹೇಳಿದರು.ಪಟ್ಟಣದ ವಾಲ್ಮೀಕಿ ದೇವಸ್ಥಾನ, ಯಂಗ್ ಇಂಡಿಯಾ ಶಾಲೆ, ಅಂಬೇ ಡ್ಕರ್ ನಗರ, ಅಂಗನವಾಡಿ ಬಿ ಕೇಂದ್ರ,  ಸರ್ಕಾರಿ ಮಾಧ್ಯಮಿಕ ಶಾಲೆ, ಫಾರೂಕ್ ಮಸೀದಿ, ಸರ್ಕಾರಿ ಆಸ್ಪತ್ರೆ, ಅಂಗನವಾಡಿ ಎ ಕೇಂದ್ರ, ಪುರಸಭಾ ಕಚೇರಿಯಲ್ಲಿ ಲಸಿಕೆ ಹಾಕಲಾಯಿತು.ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಯಲ್ಲಿ ಸುಮಾರು 21 ಬೂತ್‌ಗಳಲ್ಲಿ 5,282 ಮಕ್ಕಳ ಪೈಕಿ ಸುಮಾರು 4399 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಲಾಗಿದೆ. ಇದರಿಂದ ಮೊದಲ ದಿನ ಶೇ.83ರಷ್ಟಾಗಿದೆ.ಲಸಿಕೆಗಳ ಕೇಂದ್ರಗಳಿಗೆ ತಾಲ್ಲೂಕಿನ ಅನುಷ್ಠಾನ ಅಧಿಕಾರಿ ಸರ್ಕಾರಿ ವಾಹನ ಬಳಸಿಕೊಳ್ಳಲಾಯಿತು. 5 ವರ್ಷ ದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆಗೆ 2 ದಿನ ಕಾಲಾ ವಕಾಶ ಇದೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿರಾಜ್ ಮದಾನಿ `ಪ್ರಜಾವಾಣಿ~ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry