ಎಲ್ಲ ರೈತರಿಗೂ ಭೂಮಿ ಸಿಗಲಿ: ಆಗ್ರಹ

ಶುಕ್ರವಾರ, ಜೂಲೈ 19, 2019
22 °C

ಎಲ್ಲ ರೈತರಿಗೂ ಭೂಮಿ ಸಿಗಲಿ: ಆಗ್ರಹ

Published:
Updated:

ಪಾಂಡವಪುರ: ಸುವರ್ಣ ಭೂಮಿ ಯೋಜನೆಗೆ ಅರ್ಜಿಸಲ್ಲಿಸಿದ ಎಲ್ಲಾ ರೈತರಿಗೆ ಸೌಲಭ್ಯ ಸಿಗುವಂತೆ  ಅವಕಾಶ ಕಲ್ಪಿಸಿಕೊಡಬೇಕೆಂದು ಶಾಸಕ ಸಿ.ಎಸ್. ಪುಟ್ಟರಾಜು ಸರ್ಕಾರವನ್ನು ಒತ್ತಾಯಿಸಿದರು.ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ ಆಯೋಜಿಸಿದ್ದ ಸುವರ್ಣ ಭೂಮಿ ಯೋಜನೆ 2011-12 ಕಾರ್ಯಕ್ರಮದ ಫಲಾನುಭವಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ  ಭಾಗವಹಿಸಿ ಅವರು ಮಾತನಾಡಿದರು.

 

ಸರ್ಕಾರದ ಆದೇಶದಂತೆ ತಾಲೂಕು ಆಡಳಿತ ಲಾಟರಿ ಪ್ರಕ್ರಿಯೆ ಮೂಲಕ ಸುವರ್ಣ ಭೂಮಿ ಯೋಜನೆ  ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದೆ. ಎಲ್ಲಾ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟು ರೈತರು ಜೀವನ ನಡೆಸಲು ಸರ್ಕಾರ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.ಉಪವಿಭಾಧಿಕಾರಿ ಜಿ. ಪ್ರಭು ಮಾತನಾಡಿ ರೈತರು ಕೃಷಿಯಲ್ಲಿ ಹೆಚ್ಚು ಲಘುಪೋಷಕಾಂಶ, ಸಾವಯವ ಗೊಬ್ಬರ ಬಳಸದೆ ರಾಸಾಯನಿಕಗೊಬ್ಬರ ಬಳಸಿ ಭೂಮಿಯ ಸತ್ವ ಕಡಿಮೆಯಾಗಿದೆ. ಈ ಯೋಜನೆಯಲ್ಲಿ  ರೈತರು ಅವುಗಳನ್ನು ಬಳಸಿ ಇಳುವರಿ ಹೆಚ್ಚಿಸಿ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕೆಂದು ಕರೆ ನೀಡಿದರು.ಸುವರ್ಣ ಭೂಮಿ ಯೋಜನೆಗೆ ಕೃಷಿ ಇಲಾಖೆಗೆ ಕಸಬಾ ಹೋಬಳಿಯಿಂದ 1544 ಅರ್ಜಿಗಳು ಇತರೆ ವರ್ಗದವರಿಂದ ಬಂದಿದ್ದು 350 ಜನ ರೈತ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.ಪ.ಜಾತಿ, ಪ.ವರ್ಗ ದಿಂದ ಬಂದಿದ್ದ 204 ಫಲಾನುಭವಿಗಳನ್ನು ಕೂಡ ಆಯ್ಕೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಸಿ. ಶಿವಾನಂದಾಮೂರ್ತಿ, ಜಿ.ಪಂ. ಸದಸ್ಯೆ ವಸಂತಪ್ರಕಾಶ್, ತಾ.ಪಂ. ಉಪಾಧ್ಯಕ್ಷ ಶಾಮಣ್ಣ, ಸದಸ್ಯೆ ಶೈಲಜ, ಪ.ಪಂ. ಅಧ್ಯಕ್ಷ ಎಸ್. ಸಿದ್ದೇಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಯ್ಯ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry