`ಎಲ್ಲ ವಾರ್ಡ್‌ಗಳ್ಲ್ಲಲೂ ಕೆಜೆಪಿ ಸ್ಪರ್ಧೆ'

7

`ಎಲ್ಲ ವಾರ್ಡ್‌ಗಳ್ಲ್ಲಲೂ ಕೆಜೆಪಿ ಸ್ಪರ್ಧೆ'

Published:
Updated:

ಬೀದರ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಗರಸಭೆಯ ಎಲ್ಲ ವಾರ್ಡ್‌ಗಳಲ್ಲಿ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಗಳನ್ನುಕಣಕ್ಕೆ ಇಳಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ತಿಳಿಸಿದರು.ನಗರದ ಮೈಲೂರಿನ ವಾರ್ಡ್ ಸಂಖ್ಯೆ 28 ಮತ್ತು 29 ರಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜನಾಭಿಪ್ರಾಯ ಆಧರಿಸಿ ಸೂಕ್ತ ಯುವಕರು, ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.ಪ್ರಸ್ತುತ ವಿವಿಧ ಸಮುದಾಯಗಳ ಜನರು ಕೆಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷ ಜಿಲ್ಲೆಯಲ್ಲಿಯೂ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಖುದ್ದು ಸ್ಪರ್ಧಿಸುವಂತೆ ಅನೇಕರು ನಾಗಮಾರಪಳ್ಳಿ ಅವರನ್ನು ಒತ್ತಾಯಿಸಿದರು. ಈ ಬಗೆಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಕಿರಣಕುಮಾರ್ ಚಂದಾ, ಪ್ರಮುಖರಾದ ಬಸವರಾಜ ರಾಜೋಳೆ, ವಿಜಯಕುಮಾರ್ ಎಸ್. ಪಾಟೀಲ್ ಗಾದಗಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry