ಗುರುವಾರ , ಮೇ 19, 2022
23 °C

ಎಲ್ಲ ಸ್ತರದಲ್ಲೂ ನಾಯಕ ಜನಾಂಗ ಹೆಸರುವಾಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: “ಗುರು ಭಕ್ತಿಗೆ ಏಕಲವ್ಯ, ಧಾರ್ಮಿಕ ಭಕ್ತಿಗೆ ವಾಲ್ಮೀಕಿ ಮಹರ್ಷಿ, ದೇಶಭಕ್ತಿಗೆ ಸಿಂಧೂರ ಲಕ್ಷ್ಮಣ, ಸುರಪುರ ವೆಂಕಟಪ್ಪ ನಾಯಕ, ವೀರ ಮದಕರಿನಾಯಕ, ಹೀಗೆ ಸಮಾಜದ ಎಲ್ಲ ಸ್ತರಗಳಲ್ಲಿಯೂ ನಾಯಕ ಜನಾಂಗದ ವ್ಯಕ್ತಿಗಳು ಹೆಸರು ವಾಸಿ. ಅಂಥ ಜನಾಂಗಕ್ಕೆ ಸೇರಿದ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವನ್ನು ದೇಶದ ಎಲ್ಲ ಜನತೆಯೂ ಆರಾಧಿಸಿ,  ಅನುಸರಿಸುತ್ತಿದ್ದಾರೆ. ಅದು ಹಿಂದೂ ಧರ್ಮದ ಮಹಾನ್ ಕಾವ್ಯ, ಅದರಲ್ಲಿ ಎಲ್ಲ ಸಮಸ್ಯೆಗಳಿಗೂ ಉತ್ತರ ದೊರೆಯುತ್ತದೆ ಎಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ ಹೇಳಿದರು.ನಿಡಗುಂದಿಯ ವಾಲ್ಮೀಕಿ ಸಮಾಜ, ವಾಲ್ಮೀಕಿ ಯುವಕ ಸಂಘ ಜಂಟಿಯಾಗಿ ಏರ್ಪಡಿಸಿದ್ದ ವಾಲ್ಮೀಕಿ ಮಹರ್ಷಿಗಳ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕುಂಬಾರ, `ವಾಲ್ಮೀಕಿ ಬರೆದ ರಾಮಾಯಣ ಎಲ್ಲರಿಗೂ ಬೇಕಿದೆ. ಆದರೇ ಅದೇ ವಾಲ್ಮೀಕಿ ಮಹರ್ಷಿಗಳು ಯಾರಿಗೂ ಬೇಡವಾಗಿದ್ದಾರೆ. ಪ್ರತಿಯೊಬ್ಬರೂ ವಾಲ್ಮೀಕಿ ಬರೆದ ರಾಮಾಯಣವನ್ನು ಓದಬೇಕಾದ ಅವಶ್ಯಕತೆ ಇದೆ~ ಎಂದರು.ಗ್ರಾ.ಪಂ. ಅಧ್ಯಕ್ಷ ಶಿವಾನಂದ ಮುಚ್ಚಂಡಿ, ಗ್ರಾ.ಪಂ. ವತಿಯಿಂದ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ತಲಾ ರೂ. 10 ಸಾವಿರ  ತನಕ ಮತ್ತು ವಾಲ್ಮೀಕಿ ದಿನಾಚರಣೆಗಾಗಿ ಆಯಾ ಸಮಾಜದ ಬಾಂಧವರಿಗೆ ತಲಾ ರೂ. 5 ಸಾವಿರ ಅನುದಾನ ನೀಡುವುದಾಗಿ ಘೋಷಿಸಿದರು.ಬಿಜೆಪಿ. ಎಸ್.ಟಿ. ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಾಲಚಂದ್ರ ನಾಗರಾಳ ಅಧ್ಯಕ್ಷತೆ ವಹಿಸಿದ್ದರು.  ಪಿ.ಎಸ್.ಐಗಳಾದ ಎಸ್.ವೈ. ಮರಡಿ, ವೈ.ವೈ. ಸಂಶಿ, ಗ್ರಾ.ಪಂ. ಸದಸ್ಯರಾದ ಪ್ರಹ್ಲಾದ ಪತ್ತಾರ, ರೇಣುಕಾ ಗೊಳಸಂಗಿ, ಸಂಗಪ್ಪ ವಂದಾಲ, ಪರಶುರಾಮ ಕಾರಿ, ಹನುಮಂತ ಸುನಗದ, ಗುರುಸಿದ್ದಯ್ಯ ಪರಡಿಮಠ, ದಾನೇಶ್ವರ, ಪಿ.ಡಿ.ಓ ಪಿ.ಬಿ. ದೇವರಮನಿ, ಎಸ್.ವೈ. ನಾಯ್ಕೋಡಿ, ಕರಿಯಪ್ಪ ಮಾದರ, ಸುಭಾಸ ಧನಶೆಟ್ಟಿ, ಯಲ್ಲಪ್ಪ  ಬೆಳ್ಳಕ್ಕಿ, ಸೋಮಪ್ಪ ಓಲೇಕಾರ, ಹನುಮಂತ ನಾಯಕ, ಪಾಂಡು ನಾಯಕ, ನಾಗರಾಜ ಬೆಳ್ಳಕ್ಕಿ, ಶಾಂತಪ್ಪ ಓಲೇಕಾರ, ಮಹಾಂತೇಶ ಹಲಗಲಿ, ಅವಪ್ಪ ನಾಯಕ, ಹನುಮಂತ ಸಣಮನಿ, ಪರಮಾನಂದ ನಾಯಕ, ಸುಧೀರ ಓಲೇಕಾರ, ನಂದಪ್ಪ ನಾಯಕ, ಮುದಕಪ್ಪ ಓಲೇಕಾರ, ಪವಾಡೆಪ್ಪ ನಾಯಕ, ಸುಭಾಸ ನಾಯಕ, ಸಿದ್ದು ಗೊಳಸಂಗಿ, ಪ್ರಾಣೇಶ ಬಿರಾದಾರ ಇದ್ದರು. ದಾನೇಶ ಅವಟಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು.ಎಸ್.ಸಿ. ಸಣ್ಣಮನಿ ಸ್ವಾಗತಿಸಿದರು. ಲಕ್ಷ್ಮಣ ಆರ್. ನಾಯಕ ನಿರೂಪಿಸಿದರು. ಯಲಗೂರೇಶ ಓಲೇಕಾರ ವಂದಿಸಿದರು. ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣ, ದೇವಸ್ಥಾನ ನಿರ್ಮಾಣದ ಬಗ್ಗೆ, ಅದಕ್ಕೆ ಬೇಕಾದ ಹಣಕಾಸಿನ ಹೊಂದಾಣಿಕೆ ಬಗ್ಗೆ ಚರ್ಚಿಸಲಾಯಿತು.ಇದಕ್ಕೂ ಮೊದಲು ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸಲಾಯಿತು. ನೂರಾರು ಮಹಿಳೆಯರು, ಸಮಾಜದ ಹಿರಿಯರು ಪಾಲ್ಗೊಂಡಿದ್ದರು. ದೇವಲಾಪುರದಲ್ಲಿ: ದೇವಲಾಪುರದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಗ್ರಾ.ಪಂ. ಸದಸ್ಯೆ ರೇಣುಕಾ ಗೊಳಸಂಗಿ, ಸಿದ್ದು ಗೊಳಸಂಗಿ, ಪ್ರಾಣೇಶ ಬಿರಾದಾರ, ಸಿದ್ದು ಗುರಿಕಾರ ಮೊದಲಾದವರಿದ್ದರು.ಆರ್.ಎಸ್.ಎಸ್. ಶಿಬಿರಕ್ಕೆ ಚಾಲನೆ


ಆಲಮಟ್ಟಿ: ಸಮೀಪದ ಗೊಳಸಂಗಿಯ ಸರಕಾರಿ ಕ.ಗಂ.ಮ. ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಾಪುರ ಜಿಲ್ಲಾ ಮಟ್ಟದ ಪ್ರಾಥಮಿಕ ಶಿಕ್ಷಾ ವರ್ಗ ಪ್ರಾರಂಭಗೊಂಡಿದೆ.

ದೇವಾಂಗ ಸಮಾಜದ ಮುಖಂಡ ಈರಪ್ಪಣ್ಣ ತೆಳಗಡಿ ಡಾ. ಹೆಗಡೆವಾರಜಿ ಭಾವಚಿತ್ರದೆದುರು ದೀಪ ಬೆಳಗುವ ಮೂಲಕ ಶಿಕ್ಷಾ ವರ್ಗಕ್ಕೆ ಚಾಲನೆ ನೀಡಿದರು.ಬೌದ್ಧಿಕ ಪ್ರಮುಖ ಕೃಷ್ಣಾ ಕಾಮತ ಮಾತನಾಡಿ, ಶಿಬಿರಾರ್ಥಿಗಳೆಲ್ಲಾ ತಮ್ಮ ಮನಸ್ಸಿನ ಪಾತ್ರೆಯನ್ನು ದೊಡ್ಡದನ್ನಾಗಿಸಿದಾಗ ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದರು. ಇನ್ನೊಬ್ಬ ಪ್ರಮುಖ ಭೀಮನಗೌಡ ಪಾಟೀಲ ವೇದಿಕೆ ಮೇಲಿದ್ದರು.`ಭಾರತದಾ ಆಗಸದಿ ನವ ಸೂರ್ಯೋದಯವಾಗುತಿದೆ~ ಎಂಬ ದೇಶಭಕ್ತಿಗೀತೆಯೊಂದಿಗೆ ಸಂಗಮೇಶ ಪಾಟೀಲ ಕಾರ್ಯಕ್ರಮವನ್ನು ಆರಂಭಿಸಿದರು.ಇದೇ 8 ರಿಂದ ಆರಂಭವಾದ ಶಿಕ್ಷಾವರ್ಗವು ಅ. 16 ರವರೆಗೆ ನಡೆಯಲಿದೆ. ಅ. 15 ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಕರ್ಷಕ ಪಥಸಂಚಲನ ನಡೆಯಲಿದೆ. ಶಿಕ್ಷಾವರ್ಗದಲ್ಲಿ ವಿಜಾಪುರ ಜಿಲ್ಲೆಯಾದ್ಯಂತ ಒಟ್ಟು 146 ಶಿಬಿರಾರ್ಥಿಗಳು, 50 ಜನ ಪ್ರಬಂಧಕರು ಪಾಲ್ಗೊಂಡಿದ್ದಾರೆ ಎಂದು ಸಂಘದ ಪ್ರಮುಖರಾದ ದೇವೇಂದ್ರ ಬಳಮಕರ, ಶಂಕರಗೌಡ ಪಾಟೀಲ, ಸುರೇಶ ಕೂಚಬಾಳ ತಿಳಿಸಿದ್ದಾರೆ.ಗಣ್ಯರ ಭೇಟಿ: ಗೊಳಸಂಗಿಯಲ್ಲಿ ನಡೆಯುತ್ತಿರುವ ಪ್ರಾಥಮಿಕ ಶಿಕ್ಷಾವರ್ಗಕ್ಕೆ ಸಚಿವ ಮುರಗೇಶ ನಿರಾಣಿ, ಶಾಸಕ ಎಸ್.ಕೆ. ಬೆಳ್ಳುಬ್ಬಿ, ಜಿ.ಪಂ. ಸದಸ್ಯ ಶಿವಾನಂದ ಅವಟಿ, ಬಿಜೆಪಿ ಮುಖಂಡರಾದ ಶಿವಾನಂದ ಕಲ್ಲೂರ, ಚಂದ್ರಶೇಖರ ಕವಟಗಿ ಮೊದಲಾದವರು ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.