ಎಲ್‌ಇಡಿಯಿಂದ ವಿದ್ಯುತ್ ಉಳಿಕೆ

7

ಎಲ್‌ಇಡಿಯಿಂದ ವಿದ್ಯುತ್ ಉಳಿಕೆ

Published:
Updated:
ಎಲ್‌ಇಡಿಯಿಂದ ವಿದ್ಯುತ್ ಉಳಿಕೆ

ಬೆಂಗಳೂರು: `ಎಲ್‌ಇಡಿ ವಿದ್ಯುತ್ ದೀಪಗಳ ಬಳಕೆಯಿಂದ ಸಾಕಷ್ಟು ಪ್ರಮಾಣದ ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಿದೆ~ ಎಂದು ಪ್ರಾಂಪ್ಟ್ ಟೆಕ್ ರಿನಿವಬಲ್ ಎನರ್ಜಿ ಸಲ್ಯೂಷನ್ಸ್ ಸಂಸ್ಥೆಯ ನಿರ್ದೇಶಕ ಕಿರಣ್ ಮೊರಸ್ ಅಭಿಪ್ರಾಯಪಟ್ಟರು.ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯಲ್ಲಿ ಸೋಮವಾರ ನಡೆದ ಎಲ್‌ಇಡಿ ವಿದ್ಯುತ್ ದೀಪಗಳ ಬಳಕೆಯ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಎಲ್‌ಇಡಿ ವಿದ್ಯುತ್ ದೀಪಗಳ ಬಳಕೆಯಿಂದ ಶೇ 65ಕ್ಕೂ ಹೆಚ್ಚು ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಿದೆ. ಸಾಮಾನ್ಯ ವಿದ್ಯುತ್ ದೀಪಗಳು ಹೆಚ್ಚು ವಿದ್ಯುತ್ ಬಳಸಿಕೊಂಡು, ವಾತಾವರಣಕ್ಕೆ ಹೆಚ್ಚು ಉಷ್ಣಾಂಶ ಬಿಡುಗಡೆ ಮಾಡುತ್ತವೆ. ಆದರೆ, ಎಲ್‌ಇಡಿ ವಿದ್ಯುತ್ ದೀಪಗಳು ಕಡಿಮೆ ವಿದ್ಯುತ್ ಬಳಸಿಕೊಂಡು, ಕಡಿಮೆ ಉಷ್ಣಾಂಶದೊಂದಿಗೆ ಹೆಚ್ಚು ಬೆಳಕು ಬೀರುತ್ತವೆ~ ಎಂದು ಅವರು ತಿಳಿಸಿದರು.`ಒಂದು ಸಾಮಾನ್ಯ ವಿದ್ಯುತ್ ದೀಪಕ್ಕೆ ದಿನವೊಂದಕ್ಕೆ 3 ಯುನಿಟ್ ವಿದ್ಯುತ್ ಅಗತ್ಯವಿದ್ದರೆ, ಎಲ್‌ಇಡಿ ವಿದ್ಯುತ್ ದೀಪಕ್ಕೆ ಕೇವಲ ಒಂದು ಯುನಿಟ್ ವಿದ್ಯುತ್ ಸಾಕಾಗುತ್ತದೆ. ಸಾಮಾನ್ಯ ವಿದ್ಯುತ್ ದೀಪಗಳು ಒಂದರಿಂದ ಒಂದೂವರೆ ವರ್ಷ ಬಾಳಿಕೆ ಬಂದರೆ, ಎಲ್‌ಇಡಿ ವಿದ್ಯುತ್ ದೀಪಗಳು ಕನಿಷ್ಠ 10ವರ್ಷ ಬಾಳಿಕೆ ಬರುತ್ತವೆ. ಎಲ್‌ಇಡಿ ವಿದ್ಯುತ್ ದೀಪಗಳ ಬೆಲೆ ಸಾಮಾನ್ಯ ವಿದ್ಯುತ್ ದೀಪಗಳಿಗಿಂತ ಮೂರು ಪಟ್ಟು ಹೆಚ್ಚು. ಆದರೆ, ದೀರ್ಘ ಕಾಲ ಬಾಳಿಕೆ ಬರುವ ಕಾರಣ ಎಲ್‌ಇಡಿ ವಿದ್ಯುತ್ ದೀಪಗಳ ಮೇಲೆ ಹೆಚ್ಚು ಬಂಡವಾಳ ಹಾಕಿದರೂ ನಷ್ಟವೇನಿಲ್ಲ~ ಎಂದು ಅವರು ಹೇಳಿದರು.`ಸಿಎಫ್‌ಎಲ್ ಬಲ್ಬ್‌ಗಳ ಬಳಕೆಗೆ ಸರ್ಕಾರ ಹೆಚ್ಚು ಪ್ರಚಾರ ನೀಡುತ್ತಿದೆ. ಆದರೆ, ಸಿಎಫ್‌ಎಲ್ ಬಲ್ಬ್‌ಗಳಲ್ಲಿ ಪಾದರಸದ ಅಂಶವಿರುವುದರಿಂದ ಇದು ಪರಿಸರದ ಮೇಲೆ ಹಾನಿ ಉಂಟುಮಾಡುತ್ತದೆ. ಆದ್ದರಿಂದ ಪರಿಸರ ಸ್ನೇಹಿಯಾದ ಎಲ್‌ಇಡಿ ವಿದ್ಯುತ್ ದೀಪಗಳ ಬಳಕೆಯ ಬಗ್ಗೆ ಸರ್ಕಾರ ಅಗತ್ಯ ಪ್ರಚಾರ ಹಾಗೂ ಪ್ರೋತ್ಸಾಹ ನೀಡಬೇಕು. ಎಲ್‌ಇಡಿ ವಿದ್ಯುತ್ ದೀಪಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು~ ಎಂದರು.`ಒಂದು ಸಾಮಾನ್ಯ ವಿದ್ಯುತ್ ದೀಪಕ್ಕೆ ದಿನಕ್ಕೆ 3 ಯುನಿಟ್ ವಿದ್ಯುತ್ ಅಗತ್ಯವಿದ್ದರೆ, ಎಲ್‌ಇಡಿ ವಿದ್ಯುತ್ ದೀಪಕ್ಕೆ ಕೇವಲ ಒಂದು ಯುನಿಟ್ ವಿದ್ಯುತ್ ಸಾಕಾಗುತ್ತದೆ. ಸಾಮಾನ್ಯ ವಿದ್ಯುತ್ ದೀಪಗಳು ಒಂದರಿಂದ ಒಂದೂವರೆ ವರ್ಷ ಬಾಳಿಕೆ ಬಂದರೆ    ಎಲ್‌ಇಡಿ ವಿದ್ಯುತ್ ದೀ ಕನಿಷ್ಠ 10ವರ್ಷ ಬಾಳಿಕೆ ಬರುತ್ತವೆ~ಏನಿದು ಎಲ್‌ಇಡಿ?

ಎಲ್‌ಇಡಿ (Light Emiting Diodes)  ಎಂದರೆ ವಿದ್ಯುತ್ ವಾಹಕಗಳಿಂದ ಹೆಚ್ಚು ಬೆಳಕು ನೀಡುವ ದೀಪ ಎಂದರ್ಥ.  ಎಲ್‌ಇಡಿ ವಿದ್ಯುತ್ ದೀಪಗಳು ಕಡಿಮೆ ವಿದ್ಯುತ್ ಬಳಸಿಕೊಂಡು ಹೆಚ್ಚು ಬೆಳಕು ನೀಡುತ್ತವೆ. ಮುಂದುವರಿದ ದೇಶಗಳಲ್ಲಿ ಮನೆ, ಕಚೇರಿ ಹಾಗೂ ಬೀದಿ ದೀಪಗಳಿಗೂ ಎಲ್‌ಇಡಿ ಬಳಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry