ಮಂಗಳವಾರ, ನವೆಂಬರ್ 19, 2019
27 °C

ಎಲ್‌ಇಡಿ ದೀಪ ಬೇಡಿಕೆ ಅಧಿಕ: ಎವರೆಡಿ ಇಂಡಿಯ

Published:
Updated:

ಬೆಂಗಳೂರು: ಇತ್ತೀಚೆಗೆ `ಲೈಟ್ ಎಮಿಟಿಂಗ್ ಡಯೋಡ್'(ಎಲ್‌ಇಡಿ) ದೀಪಗಳ ಬಳಕೆ ಹೆಚ್ಚುತ್ತಿದ್ದು, `ಎವರೆಡಿ ಇಂಡಸ್ಟ್ರೀಸ್ ಇಂಡಿಯ'ಗೆ 2012ರಲ್ಲಿ 2.5 ಕೋಟಿ `ಎಲ್‌ಇಡಿ' ಉತ್ಪನ್ನಗಳನ್ನು ಮಾರಲು ಸಾಧ್ಯವಾಗಿದೆ ಎಂದು ಕಂಪೆನಿಯ ಮಾರಾಟ ವಿಭಾಗ ಉಪಾಧ್ಯಕ್ಷ ಪಾರ್ಥ ಬಿಸ್ವಾಸ್ ಹೇಳಿದರು.ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಲ್‌ಇಡಿ ದೀಪ-ಫ್ಯಾನ್ ಒಂದರಲ್ಲೇ ಇರುವ ವಿಶೇಷ ಸಾಧನ(ಬೆಲೆ ್ಙ2500) ಸೇರಿದಂತೆ ರೀಚಾರ್ಜಬಲ್ ಬ್ಯಾಟರಿಯ 8ಮಾದರಿಗಳನ್ನು ರಾಜ್ಯದ ಮಾರುಕಟ್ಟೆಗೆ ಅವರು ಪರಿಚಯಿಸಿದರು.ವಿದ್ಯುತ್ ಕಡಿತ ಹೆಚ್ಚಳ ಮತ್ತು ಶಾಲಾ-ಕಾಲೇಜು ಪರೀಕ್ಷೆಯ ಈ ಸಂದರ್ಭದಲ್ಲಿ ಕಡಿಮೆ ಬ್ಯಾಟರಿ ಶಕ್ತಿ ಬಳಸಿಕೊಂಡು ಹೆಚ್ಚು ಕಾಲ ಉರಿಯಬಲ್ಲ ಎಲ್‌ಇಡಿ ದೀಪ ಮತ್ತು ರೀಚಾರ್ಜಿಂಗ್ ಬ್ಯಾಟರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪರಿಣಾಮ ಈ ವಿಭಾಗದಲ್ಲಿ ದೇಶದ ಸಂಘಟಿತ ವಲಯದ ಮಾರುಕಟ್ಟೆಯಲ್ಲಿ ಎವರೆಡಿ ಶೇ 70ರಷ್ಟು ದೊಡ್ಡ ಪಾಲು ಹೊಂದಲು ಸಾಧ್ಯವಾಗಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)