ಎಲ್‌ಐಸಿ ತಂಡಕ್ಕೆ ಜಯ

7

ಎಲ್‌ಐಸಿ ತಂಡಕ್ಕೆ ಜಯ

Published:
Updated:

ಬೆಂಗಳೂರು: ಎಲ್‌ಐಸಿ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಲ್‌ಐಸಿ 25-22, 25-20, 18-25, 25-10ರಲ್ಲಿ ಪೋಸ್ಟಲ್ ತಂಡವನ್ನು ಮಣಿಸಿತು. 90 ನಿಮಿಷ ನಡೆದ ಈ ಹೋರಾಟದಲ್ಲಿ ವಿಜಯಿ ತಂಡದ ಪವನ್ ಹಾಗೂ ವಿಕ್ರಮ್ ಗಮನ ಸೆಳೆದರು.ಎಳನಾಡುವಿನಲ್ಲಿ ರಾಜ್ಯ ಮಟ್ಟದ ವಾಲಿಬಾಲ್: ತುಮಕೂರು ಜಿಲ್ಲೆಯ ಎಳನಾಡುವಿನಲ್ಲಿ ಫ್ರೆಂಡ್ಸ್ ಯೂತ್ ಸಂಸ್ಥೆ ಆಶ್ರಯದಲ್ಲಿ ಅ.28ರಿಂದ 30ರವರೆಗೆ ರಾಜ್ಯ ಮಟ್ಟದ ಆಹ್ವಾನಿತ ವಾಲಿಬಾಲ್ ಟೂರ್ನಿ ನಡೆಯಲಿದೆ. ಕ್ವಾರ್ಟರ್ ಫೈನಲ್‌ಗೆ ಭಾರತ: ಭಾರತ ತಂಡ ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ 9ನೇ ಏಷ್ಯಾ ಬಾಲಕಿಯರ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಚೀನಾ ಎದುರು ಆಡಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry