ಎಲ್‌ಪಿಜಿ ಕಡಿತ ವಿರೋಧಿಸಿ ಪ್ರತಿಭಟನೆ

7

ಎಲ್‌ಪಿಜಿ ಕಡಿತ ವಿರೋಧಿಸಿ ಪ್ರತಿಭಟನೆ

Published:
Updated:

ನೆಲಮಂಗಲ: ಅಡುಗೆ ಅನಿಲ ಸಿಲಿಂಡರ್ ಪೂರೈಕೆಯನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ನೆಲಮಂಗಲದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಮ್ಮ ಪ್ರಕಾಶ್ ಮಾತನಾಡಿ, `ತಿಂಗಳಿಗೆ ಒಂದು ಸಿಲಿಂಡರ್ ಬಳಕೆ ಮಾಡುವ ಶೇ 70 ಕುಟುಂಬಗಳು ದೇಶದಲ್ಲಿವೆ. ತಕ್ಷಣವೇ ಅಡುಗೆ ಅನಿಲ ಪೂರೈಕೆಯನ್ನು 10ಕ್ಕೆ ಏರಿಸಬೇಕು~ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷೆ ಪುಷ್ಪಾ ಶಿವಶಂಕರ್, ಕಾರ್ಯದರ್ಶಿ ಸೌಮ್ಯಾ ಗೋಪಾಲಕೃಷ್ಣ, ಉಪಾಧ್ಯಕ್ಷೆ ಅನಿತಾ ರಾಮಣ್ಣ, ನೀಲಾ ನಾಗರಾಜು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry