ಎಲ್‌ಪಿಜಿ ದರ ಹೆಚ್ಚಳ ಬಿಜೆಪಿ ಪ್ರತಿಭಟನೆ

7

ಎಲ್‌ಪಿಜಿ ದರ ಹೆಚ್ಚಳ ಬಿಜೆಪಿ ಪ್ರತಿಭಟನೆ

Published:
Updated:

ವಿಜಾಪುರ: ಅಡುಗೆ ಅನಿಲ ಹಾಗೂ ಅಟೋ ಎಲ್‌ಪಿಜಿ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಮಹಿಳಾ ಘಟಕ, ಜಿಲ್ಲಾ ಆಟೊ ಚಾಲಕರ, ಮಾಲೀಕರ ಹಾಗೂ ಗ್ರಾಹಕರ ವೇದಿಕೆಯರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.ನಗರದ ಶಿವಾಜಿ ಚೌಕ್‌ನಿಂದ ಅಟೋ ರಿಕ್ಷಾಗಳೊಂದಿಗೆ ಮೆರವಣಿಗೆ ಯಲ್ಲಿ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಆಟೊ ಚಾಲಕರ, ಮಾಲೀಕರ ಹಾಗೂ ಗ್ರಾಹಕರ ವೇದಿಕೆಯ ಅಧ್ಯಕ್ಷ, ಮಹಾನಗರ ಪಾಲಿಕೆಯ ಸದಸ್ಯ ರಾಹುಲ್‌ ಜಾಧವ ಮಾತನಾಡಿ,  ಕೇಂದ್ರ ಸರ್ಕಾರ ಮತ್ತೊಮ್ಮೆ ಅಡುಗೆ ಅನಿಲ ಹಾಗೂ ಅಟೋ ಗ್ಯಾಸ್‌ ದರ ಹೆಚ್ಚಿಸಿದೆ. ಇದರಿಂದ ಅಟೋಗಳವರು ಹಾಗೂ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನುರಾಧಾ ಕಲಾಲ,  ಮೇಲಿಂದ ಮೇಲೆ ದರ ಹೆಚ್ಚಳ ಮಾಡಿದರೆ ಜನಸಾಮಾನ್ಯರ ಜೀವನ ನಿರ್ವಹಣೆ ದುಸ್ತರವಾಗುತ್ತದೆ. ಬಡವರು, ಕೂಲಿಕಾರ್ಮಿಕರು ತೊಂದರೆ ಅನುಭವಿಸಬೇಕಾಗುತ್ತದೆ. ತಕ್ಷಣವೇ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಭಾಗ ಸಹ ಪ್ರಭಾರಿ ಚಂದ್ರಶೇಖರ ಕವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟೆ, ವಿಜಯಲಕ್ಷ್ಮಿ ಹಮೀದಖಾನೆ, ಶ್ರೀದೇವಿ ಬಡಿಗೇರ, ಬಾಬು ಶಿರಶ್ಯಾಡ, ಚಿದಾ ನಂದ ಚಲವಾದಿ, ಭೀಮಾಶಂಕರ ಹದ ನೂರ, ಉಮೇಶ ಕಾರಜೋಳ, ಶರಣು ಕಾಖಂಡಕಿ, ಶಿವರುದ್ರ ಬಾಗಲಕೋಟೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಬಸವನಬಾಗೇವಾಡಿ ವರದಿ

ಕೇಂದ್ರ ಸರ್ಕಾರ ಅಡುಗೆ ಅನಿಲ ಹಾಗೂ ಆಟೋ ಗ್ಯಾಸ್‌ ಸಿಲಿಂಡರ ಬೆಲೆ ಏರಿಸಿರುವ ಕ್ರಮವನ್ನು ಖಂಡಿಸಿ ಬಿಜೆಪಿ  ವಿವಿಧ ತಾಲ್ಲೂಕು ಘಟಕದ ಕಾರ್ಯ ಕರ್ತರು ಬುಧವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಬಿಜೆಪಿ  ರಾಜ್ಯ ಘಟಕದ ಕಾರ್ಯ ದರ್ಶಿ ಶಿವಾನಂದ ಕಲ್ಲೂರ, ಮುಖಂಡ ಬಸವರಾಜ ಕುಂಬಾರ ಮಾತನಾಡಿ,  ಕೇಂದ್ರ ಸರ್ಕಾರ ಮೇಲಿಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದರಿಂದ ಮಧ್ಯಮ ಮತ್ತು ಬಡವರ್ಗದವರು ತೊಂದರೆ ಅನುಭವಿಸಬೇಕಾಗುತ್ತಿದೆ.  ಈಗ ಮತ್ತೊಮ್ಮೆ ಅನಿಲ ಬೆಲೆ ಏರಿಕೆ ಮಾಡಿ ರುವುದು ಕೇಂದ್ರದ ಅಸಮರ್ಪಕ ಆರ್ಥಿಕ ನೀತಿಯನ್ನು ಎತ್ತಿ ತೊರಿಸುತ್ತದೆ. ಸಬ್ಸಿಡಿ ಸಿಲಿಂಡರಗಳನ್ನು 9ಕ್ಕೆ ಸೀಮಿತಗೊಳಿಸಿದ್ದರಿಂದ ಸಾಮಾನ್ಯ ಜನರು ಕುಟುಂಬ ನಿರ್ವಹಣೆ ದುಸ್ತರ ವಾಗಿದೆ. ಜನರು ಸಿಲಿಂಡರ್‌ ಸಂಪರ್ಕಕ್ಕಾಗಿ ಮತ್ತು ಹೆಚ್ಚುವರಿ ಸಿಲಿಂಡರ್‌ಗಾಗಿ ಪರದಾಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಇದ್ಯಾವುದನ್ನು ಲೆಕ್ಕಿಸದೇ ಸಿಲಿಂಡರ್ ಬೆಲೆ ಏರಿಕೆ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಸಿದ್ದು ಹೂಗಾರ, ವ್ಹಿ.ಎಂ.ಪರೆಣ್ಣವರ ಮಾತನಾಡಿ,  ಅನಿಲದ ಬೆಲೆ ಏರಿಸಿ ರುವುದರಿಂದ ಈ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ ಎಂದರು.ಜಿ.ಪಂ ಸದಸ್ಯ ಶಿವಾನಂದ ಅವಟಿ, ಸಂಗಮೇಶ ವಾಡೇದ ಮಾತನಾಡಿ ದರು.ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ತಾಲ್ಲೂಕು ಘಟಕದ ಅಧ್ಯಕ್ಷೆ ಕಸ್ತೂರಿ ಮೋಕಾಶಿ, ಅಂಬೋಜಿ ಪವಾರ, ಪ್ರವೀಣ ಪವಾರ, ಶಂಕರಗೌಡ ಪಾಟೀಲ, ದಯಾನಂದ ಹೆಬ್ಬಾಳ, ಶಿವಲಿಂಗಯ್ಯ ತೆಗ್ಗಿನಮಠ, ಸಂತೋಷ ಚನಗೊಂಡ, ಶರಣು ಕೊಟ್ರಶೆಟ್ಟಿ, ಚಂದ್ರಶೇಖರ ಅಂಬಳನೂರ, ವೈ.ಎಸ್‌. ಮ್ಯಾಗೇರಿ, ಪರಸು ಜಮಖಂಡಿ, ರಮೇಶ ಗಚ್ಚಿನವರ, ರಾಜು ಚಿಕ್ಕೊಂಡ, ಸಂಗಮೇಶ ಕಲ್ಯಾಣಿ, ಡಾ.ಅಮರೇಶ ಮಿಣಜಗಿ, ಮಂಜುನಾಥ ಕುಂಟೋಜಿ, ಆನಂದ ಬಿಷ್ಟಗೊಂಡ ಇತರರು  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry