ಬುಧವಾರ, ಏಪ್ರಿಲ್ 21, 2021
23 °C

ಎಲ್‌ಪಿಜಿ ಬೆಲೆ ಏರಿಕೆ ನಿರ್ಧಾರ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್‌ಪಿಜಿ ಬೆಲೆ ಏರಿಕೆ ನಿರ್ಧಾರ ಹಿಂದಕ್ಕೆ

ನವದೆಹಲಿ (ಪಿಟಿಐ): ಆರು ಸಬ್ಸಿಡಿ ಸಿಲಿಂಡರ್‌ಗಳ ಮಿತಿಯ ಹೊರತಾಗಿ ಗ್ರಾಹಕರು ಖರೀದಿಸುವ ಹೆಚ್ಚುವರಿ ಅಡುಗೆ ಅನಿಲ ಸಿಲಿಂಡರ್‌ಗಳ ದರವನ್ನು ರೂ 26.5 ರಷ್ಟು ಏರಿಸಿ ತೈಲ ಕಂಪೆನಿಗಳ ಕೈಗೊಂಡಿದ್ದ ನಿರ್ಧಾರವನ್ನು ಸರ್ಕಾರ ಗುರುವಾರ ತಡರಾತ್ರಿ  ತಡೆಹಿಡಿದಿದೆ.ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಬೆಲೆ ಏರಿಕೆ ನಿರ್ಧಾರಕ್ಕೆ ತಡೆಯೊಡ್ಡಿದೆ ಎಂದು ತಿಳಿದು ಬಂದಿದ್ದು, ಇದನ್ನು ತೈಲ ಕಂಪೆನಿ ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ನಿರ್ದಿಷ್ಟವಾದ ಕಾರಣವನ್ನು ಮಾತ್ರ ಅವರು ಸ್ಪಷ್ಟಪಡಿಸಿಲ್ಲ. ಸರ್ಕಾರ ಬೆಲೆ ಏರಿಕೆ ತಡೆ ಹಿಡಿದ ಕಾರಣ ಪರಿಷ್ಕೃತ ದರಗಳು ಇನ್ನೂ ಜಾರಿಯಾಗಿಲ್ಲ. ಹೀಗಾಗಿ ಗ್ರಾಹಕರು ಹಳೆಯ ದರದಲ್ಲಿಯೇ ಸಬ್ಸಿಡಿ ರಹಿತ ಸಿಲಿಂಡರ್‌ಗಳನ್ನು ಖರೀದಿಸಬಹದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಸರ್ಕಾರದ ಈ ನಿರ್ಧಾರ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳಿಗ ಮಾತ್ರ ಅನ್ವಯವಾಗುತ್ತದೆಯೇ ಹೊರತು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತೈಲ ಕಂಪನಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿಯ ಕಚ್ಚಾ ತೈಲದ ಬೆಲೆ ಏರಿಕೆಗೆ ಅನುಗುಣವಾಗಿ ಗುರುವಾರ ಬೆಳಿಗ್ಗೆ ತೈಲ ಕಂಪೆನಿಗಳು ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 26.50 ರೂಪಾಯಿಗೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದವು. ಒಂದು ವೇಳೆ ಈ ನಿರ್ಧಾರ ಜಾರಿಯಾಗಿದ್ದರೆ ಗ್ರಾಹಕರು ಪ್ರತಿ ಸಬ್ಸಿಡಿ ರಹಿತ ಸಿಲಿಂಡರ್‌ಗೆ 922 ರೂಪಾಯಿ ತೆರಬೇಕಾಗಿತ್ತು.ಪ್ರತಿ ಗ್ರಾಹಕರಿಗೆ ಒಂದು ವರ್ಷಕ್ಕೆ ಆರು ಸಿಲಿಂಡರ್‌ಗಳನ್ನು ಮಾತ್ರ ಮಿತಿ ಗೊಳಿಸಿ ಕೇಂದ್ರ ಇದೇ ಸೆಪ್ಟೆಂಬರ್‌ನಲ್ಲಿ ಆದೇಶ ಹೊರಡಿಸಿತ್ತು. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಒಂದರಿಂದ ಅನ್ವಯವಾಗುವಂತೆ ಪರಿಷ್ಕ ರಿಸುವ ಸ್ವಾತಂತ್ರ್ಯವನ್ನು ತೈಲ ಕಂಪೆನಿಗಳಿಗೆ ನೀಡಿತ್ತು. ಆಮದು ವೆಚ್ಚ, ಡಾಲರ್ ಎದುರು ರೂಪಾಯಿ ಮೌಲ್ಯ ಹಾಗೂ ಜಾಗತಿಕ ಪೇಟೆಯಲ್ಲಿ ತೈಲ ಬೆಲೆ ಇತ್ಯಾದಿ ಆಧರಿಸಿ ತೈಲ ಕಂಪೆನಿಗಳು ಪ್ರತಿ ತಿಂಗಳ ಬೆಲೆ ನಿಗದಿ ಮಾಡುತ್ತವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.