ಎಲ್‌ಪಿಜಿ ಮಿತಿ ಏರಿಕೆ ಸನ್ನಿಹಿತ?

7

ಎಲ್‌ಪಿಜಿ ಮಿತಿ ಏರಿಕೆ ಸನ್ನಿಹಿತ?

Published:
Updated:

ನವದೆಹಲಿ(ಪಿಟಿಐ): ಸಹಾಯಧನದ ಗೃಹ­ಬಳಕೆ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಮಿತಿಯನ್ನು ಏರಿಸುವ ಸಂಬಂಧ ಸರ್ಕಾರ ಗಂಭೀರ ಚಿಂತನೆ ನಡೆ­ಸಿದೆ ಎಂದು ಕೇಂದ್ರ ಪೆಟ್ರೋಲಿಯಂ  ಸಚಿ­ವ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.ಸದ್ಯ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ವಾರ್ಷಿಕ ಮಿತಿ ಒಂಬತ್ತು. ಇದನ್ನು ಏರಿಸುವ ಯಾವುದೇ ಪ್ರಸ್ತಾಪ ಸರ್ಕಾ­ರದ ಮುಂದಿಲ್ಲ ಎಂದು ಕಳೆದ ವಾರ ಮೊಯಿಲಿ ಹೇಳಿದ್ದರು. ಇದೀಗ ಪಕ್ಷದ ಒತ್ತಡಕ್ಕೆ ಮಣಿದು ಸಿಲಿಂಡರ್‌ ಮಿತಿ ಏರಿಕೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.ಸಿಲಿಂಡರ್‌ ಮಿತಿ ಏರಿಕೆ ಕುರಿತು ಹಣ­ಕಾಸು ಸಚಿವ ಪಿ.ಚಿದಂಬರಂ ಅವರೊಂದಿಗೆ ಚರ್ಚೆ ನಡೆಸಿದ್ದು, ರಾಜಕೀಯ ವ್ಯವ­ಹಾರಗಳ ಸಂಪುಟ ಸಮಿತಿಗೆ ಪ್ರಸ್ತಾಪ­ವನ್ನು ಕಳುಹಿಸಿ­ಕೊಡಲಾಗಿದೆ ಎಂದು ಹೇಳಿದ್ದಾರೆ.ವರ್ಷವೊಂದಕ್ಕೆ ಸಹಾಯಧನ ಗೃಹ ಬಳಕೆ ಅನಿಲ ಸಿಲಿಂಡರ್‌ಗಳನ್ನು 9ರಿಂದ 12ಕ್ಕೆ ಏರಿಸಬೇಕು ಎಂಬ ಮನವಿಯನ್ನು ಕಾಂಗ್ರೆಸ್‌ ಸಂಸದರಾದ ಸಂಜಯ್‌ ನಿರುಪಮ್‌, ಪಿ.ಸಿ.ಚಾಕೊ ಹಾಗೂ ಮಹಾಬಲ ಮಿಶ್ರಾ ಅವರು ಮೊಯಿಲಿ ಅವರಿಗೆ ಸಲ್ಲಿಸಿದ್ದರು.ರಾಹುಲ್‌ ಒತ್ತಾಯ: ಸಹಾಯಧನದ ಗೃಹ­ಬಳಕೆ ಅಡುಗೆ ಅನಿಲ ಸಿಲಿಂಡರ್‌  ಮಿತಿಯನ್ನು ಏರಿಸ­ಬೇಕೆಂದು ರಾಹುಲ್‌ ಗಾಂಧಿ ಅವರು ಪ್ರದಾನಿ ಮನಮೋಹನ್‌ ಸಿಂಗ್‌ ಅವರನ್ನು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry