ಎಲ್‌ಪಿಜಿ ಮಿತಿ ಹೆಚ್ಚಳ ಸದ್ಯ ಅಸಾಧ್ಯ?

7

ಎಲ್‌ಪಿಜಿ ಮಿತಿ ಹೆಚ್ಚಳ ಸದ್ಯ ಅಸಾಧ್ಯ?

Published:
Updated:
ಎಲ್‌ಪಿಜಿ ಮಿತಿ ಹೆಚ್ಚಳ ಸದ್ಯ ಅಸಾಧ್ಯ?

ನವದೆಹಲಿ: ಗ್ರಾಹಕರಿಗೆ ಪೂರೈಕೆಯಾಗುವ ಸಬ್ಸಿಡಿ ದರದ ಅಡುಗೆ ಅನಿಲ ಸಿಲಿಂಡರುಗಳ ಸಂಖ್ಯೆಯನ್ನು 6ರಿಂದ 9ಕ್ಕೆ ಹೆಚ್ಚಿಸುವ ಚಿಂತನೆ ನಡೆದಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಪದೇಪದೇ ಹೇಳುತ್ತಿದ್ದರೂ ಅದು ಈ ಹಣಕಾಸು ವರ್ಷದಲ್ಲಿ ಜಾರಿಗೆ ಬರುವ ಸಾಧ್ಯತೆ ಕಂಡುಬರುತ್ತಿಲ್ಲ.

ಆರ್ಥಿಕ ಕೊರತೆ ಬಗ್ಗೆ ಚಿಂತಿತವಾಗಿರುವ ಹಣಕಾಸು ಇಲಾಖೆಯು ಸಬ್ಸಿಡಿ ಸಿಲಿಂಡರುಗಳ ಮಿತಿಯನ್ನು ಹೆಚ್ಚಿಸುವುದಕ್ಕೆ ಗಂಭೀರ ಅಪಸ್ವರ ಎತ್ತಿರುವುದೇ ಇದಕ್ಕೆ ಕಾರಣ. `ಸಬ್ಸಿಡಿ ಎಲ್‌ಪಿಜಿ ಸಿಲಿಂಡರುಗಳ ಮಿತಿಯನ್ನು 6ರಿಂದ 9ಕ್ಕೆ ಏರಿಸಿದರೆ ಸರ್ಕಾರಕ್ಕೆ ಹೆಚ್ಚುವರಿಯಾಗಿ 3000 ಕೋಟಿ ರೂಪಾಯಿ ಬೇಕಾಗುತ್ತದೆ.

ಆದರೆ ವಿತ್ತೀಯ ಕೊರತೆ ಎದುರಿಸುತ್ತಿರುವ ಹಣಕಾಸು ಇಲಾಖೆಯು ಹೆಚ್ಚಿನ ಹೊರೆ ಹೊರಲು ಸಿದ್ಧವಿಲ್ಲ. ಇದೇ ಕಾರಣಕ್ಕೆ, ಪೆಟ್ರೋಲಿಯಂ ಸಚಿವಾಲಯವು ಈವರೆಗೆ ಎಲ್‌ಪಿಜಿ ಸಿಲಿಂಡರ್ ಮಿತಿ ಏರಿಸುವ ಸಂಬಂಧವಾಗಿ ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸುವ ಗೋಜಿಗೆ ಹೋಗಿಲ್ಲ' ಎನ್ನುತ್ತಾರೆ ಹಣಕಾಸು ಸಚಿವಾಲಯದ ಒಬ್ಬ ಹಿರಿಯ ಅಧಿಕಾರಿ.

​ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಕಳೆದ ತಿಂಗಳು ಗುಜರಾತ್ ಚುನಾವಣೆಗೆ ಮುನ್ನ ಸಿಲಿಂಡರ್ ಪೂರೈಕೆ ಮಿತಿಯನ್ನು 9ಕ್ಕೆ ಹೆಚ್ಚಿಸುವ ಚಿಂತನೆ ನಡೆದಿದೆ ಎಂದು ಹೇಳಿಕೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry