ಗುರುವಾರ , ಅಕ್ಟೋಬರ್ 17, 2019
22 °C

ಎಲ್‌ಪಿಜಿ ಸಗಟು ಸಾಗಾಟದಾರರ ಮುಷ್ಕರ ಆರಂಭ

Published:
Updated:

ಚೆನ್ನೈ (ಪಿಟಿಐ): ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಡುಗೆ ಅನಿಲ (ಎಲ್‌ಪಿಜಿ ) ಸಗಟು ಸಾಗಾಟದಾರರು  ಗುರುವಾರ ರಾತ್ರಿಯಿಂದ `ಅನಿರ್ದಿಷ್ಟ ಮುಷ್ಕರ~ ಕೈಗೊಂಡಿದ್ದಾರೆ.

ಮುಷ್ಕರದಿಂದಾಗಿ ಅನಿಲ ಪೂರೈಸುವ 4000 ಟ್ಯಾಂಕರ್‌ಗಳನ್ನು ಸೇವೆ ಸ್ಥಗೀತಗೊಳಿಸಿದ್ದು ಇದರ ಬಿಸಿ ದಕ್ಷಿಣದ ಮೂರು ರಾಜ್ಯಗಳಾದ ತಮಿಳುನಾಡು, ಕೆರಳ ಹಾಗೂ ಕರ್ನಾಟಕಕ್ಕೆ ತಟ್ಟಲಿದೆ.

 

ದಕ್ಷಿಣ ವಲಯ ಎಲ್‌ಪಿಜಿ ಟ್ಯಾಂಕರ್ ಮಾಲಿಕರ ಸಂಘವು ತೈಲ ಮಾರಾಟ ಕಂಪೆನಿಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾದ ನಂತರ ಗುರುವಾರ ಮಧ್ಯರಾತ್ರಿಯಿಂದ ಸಂಘದ ಸದಸ್ಯರು ಮುಷ್ಕರ ಆರಂಭಿಸಿದ್ದಾರೆ.ಟೆಂಡರ್ ನವೀಕರಣ ಸೇರಿದಂತೆ ಹಲವು ಬೇಡಿಕೆಗಳನ್ನು ಸಾಗಾಟದಾರರು ತೈಲ ಮಾರಾಟ ಕಂಪೆನಿಗಳ ಮುಂದಿಟ್ಟಿದ್ದಾರೆ. ಮುಷ್ಕರದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Post Comments (+)