ಎಲ್ ಅಂಡ್ ಟಿ: ಲಾಭ ರೂ.863 ಕೋಟಿ

ಬುಧವಾರ, ಜೂಲೈ 17, 2019
30 °C

ಎಲ್ ಅಂಡ್ ಟಿ: ಲಾಭ ರೂ.863 ಕೋಟಿ

Published:
Updated:

ನವದೆಹಲಿ(ಪಿಟಿಐ): ಜೂನ್ 30ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿರ್ಮಾಣ ಕಾಮಗಾರಿ ಕಂಪೆನಿ ಎಲ್ ಅಂಡ್ ಟಿ (ಲಾಸರ್ನ್ ಅಂಡ್ ಟ್ಯೂಬ್ರೊ) ರೂ.863 ಕೋಟಿ ನಿವ್ವಳ ಲಾಭ ಗಳಿಸಿದೆ.2011ರ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭ ಶೇ 15.7ರಷ್ಟು ಏರಿಕೆ ಕಂಡಿದೆ. ವರಮಾನವೂ ಶೇ 26ರಷ್ಟು ಹೆಚ್ಚಳವಾಗಿದ್ದು, ರೂ.11,956 ಕೋಟಿಗಳಷ್ಟಾಗಿದೆ.ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಎಂಜಿನಿಯರಿಂಗ್ ಮತ್ತು ಕಾಮಗಾರಿ ವಿಭಾಗದಿಂದ ರೂ.10,441 ಕೋಟಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ ರೂ.723 ಕೋಟಿ ವರಮಾನ ಬಂದಿದೆ ಎಂದು ಕಂಪೆನಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry