ಶುಕ್ರವಾರ, ಮೇ 20, 2022
23 °C

ಎಳನೀರು ಹರಾಜಿಗೆ ರೈತ ಸಂಘ ವಿರೋಧ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಇಲ್ಲಿನ ಪುರಸಭೆ ಫೆ. 22ರಂದು ಎಳನೀರು ಮಾರಾಟ ಮಾಡುವ ಬಗ್ಗೆ ಹರಾಜು ಹಾಕುವುದಾಗಿ ಕರಪತ್ರ ಹೊರಡಿಸಿದ್ದು, ತಕ್ಷಣ ಎಳನೀರು ಮಾರಾಟದ ಹರಾಜನ್ನು ರದ್ದು ಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆದಿವಾಲ ಗ್ರಾಮ ಘಟಕದ ಮುಖಂಡರು ಒತ್ತಾಯಿಸಿದ್ದಾರೆ.ಕಳೆದ ವರ್ಷ ರೈತರು ಹಾಗೂ ನಾಗರಿಕರ ಒತ್ತಾಯದ ಮೇರೆಗೆ ಎಳನೀರು ಹರಾಜು ಹಾಕುವುದನ್ನು ರದ್ದುಪಡಿಸಲಾಗಿತ್ತು. ಹೀಗಾಗಿ,` 10-12ಕ್ಕೆ ಮಾರಾಟವಾಗುತ್ತಿದ್ದ ಎಳನೀರು ಗ್ರಾಹಕರಿಗೆ ಕೇವಲ ` 8ಕ್ಕೆ ಸಿಗುತ್ತಿತ್ತು. ನೇರವಾಗಿ ಬೆಳೆಗಾರರು ನಗರಕ್ಕೆ ಎಳನೀರು ತಂದು ಮಾರಾಟ ಮಾಡುತ್ತಿದ್ದ ಕಾರಣ ಅವರಿಗೂ ಲಾಭ ಆಗುತ್ತಿತ್ತು ಎಂದು ರೈತರು ಹೇಳಿದ್ದಾರೆ.ಈಗ ಮತ್ತೆ ಎಳನೀರು ಮಾರಾಟವನ್ನು ಹರಾಜು ಮೂಲಕ ನಿರ್ಧರಿಸಿದರೆ, ಗ್ರಾಹಕರು ಹಾಗೂ ಮಾರಾಟಗಾರರನ್ನು ಶೋಷಣೆ ಮಾಡಿದಂತಾಗುತ್ತದೆ.  ಪುರಸಭೆ ತಕ್ಷಣ ಎಳನೀರು ಹರಾಜು ರದ್ದುಪಡಿಸಬೇಕು. ಇಲ್ಲವಾದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ನಗರದ ಇತರೆ ಸಂಘ-ಸಂಸ್ಥೆಗಳ ಜತೆ ಸೇರಿ ತೀವ್ರ ಹೋರಾಟ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್. ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.ನೆಲವಳಿ ಶುಲ್ಕ ವಸೂಲಿಗೆ ವಿರೋಧ: ರೈತರು ಬೆಳೆದ ತರಕಾರಿ, ಹಣ್ಣು ಹಾಗೂ ಇನ್ನಿತರ ವಸ್ತುಗಳನ್ನು ನಗರಕ್ಕೆ ತಂದು ಮಾರಾಟ ಮಾಡುವಾಗ ಕೆಲ ಗುತ್ತಿಗೆದಾರರು ಬಲವಂತವಾಗಿ ನೆಲವಳಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಎ. ಕೃಷ್ಣಸ್ವಾಮಿ ಆರೋಪಿಸಿದ್ದಾರೆ. ರೈತರು ಬೆಳೆದು ತರುವ ವಸ್ತುಗಳನ್ನು ಮಾರಾಟ ಮಾಡಲು ನಗರದಲ್ಲಿ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ಜಿಲ್ಲಾಧಿಕಾರಿ  ತಕ್ಷಣ ಮಧ್ಯ ಪ್ರವೇಶಿಸಿ ಪುರಸಭೆಗೆ ಈ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.