ಎಳೆ ಮನಸ್ಸುಗಳ ಜಾಡು ಹಿಡಿದು...

6

ಎಳೆ ಮನಸ್ಸುಗಳ ಜಾಡು ಹಿಡಿದು...

Published:
Updated:

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಸಚಿವಾಲಯ ಆಯೋಜಿಸಿದ ಸಮೀಕ್ಷೆಯೊಂದು 2007ರಲ್ಲಿ ಸಂಗ್ರಹಿಸಿದ ಅಂಕಿ-ಅಂಶದ ವಿವರ ಹೀಗಿದೆ:*ಅಧ್ಯಯನಕ್ಕೆ ಒಳಪಟ್ಟ 13 ರಾಜ್ಯಗಳಿಂದ ದೊರೆತ ಮಾಹಿತಿಯ ಪ್ರಕಾರ ಹಿಂಸೆಗೆ ಒಳಗಾದ ಮಕ್ಕಳ ಪೈಕಿ ಶೇ 54.68 ಬಾಲಕರು.* 5-12 ವರ್ಷದ ಮಕ್ಕಳೇ ಹೆಚ್ಚಾಗಿ ವಯಸ್ಕರಿಂದ ನಾನಾ ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಾರೆ.4ಮೂರು ಮಕ್ಕಳಲ್ಲಿ ಇಬ್ಬರು ಶಾರೀರಿಕ ಹಿಂಸೆ ಅನುಭವಿಸಿರುತ್ತಾರೆ.*ದೈಹಿಕ ಹಿಂಸೆ ಕೊಟ್ಟವರಲ್ಲಿ ಶೇ 88.6 ಪೋಷಕರು.*ಶೇ 65 ಮಕ್ಕಳು ಶಾಲೆಯಲ್ಲಿ ತೀವ್ರ ರೀತಿಯ ಶಿಕ್ಷೆಗೆ ಒಳಪಟ್ಟಿರುತ್ತಾರೆ.* ಹಿಂಸೆಗೆ ಒಳಗಾದ ಮಕ್ಕಳು ಇತರರಿಗೆ ಅದರ ಬಗ್ಗೆ ಯಾರೊಂದಿಗೂ ಪ್ರಸ್ತಾಪ ಮಾಡುವುದಿಲ್ಲ.ಮಕ್ಕಳ ವರ್ತನೆಯನ್ನು ಏರುಪೇರು ಮಾಡುವಂತಹ ವಿಷಯಗಳು:* ವಿಶ್ವದ ಮಕ್ಕಳ ಪೌಷ್ಠಿಕಾಂಶದ ಕೊರತೆ ಇರುವ ಪ್ರತಿ ಮೂರರಲ್ಲಿ ಒಂದು ಮಗು ಭಾರತದ ಪ್ರಜೆ.* ಭಾರತದಲ್ಲಿ ಹುಟ್ಟುವ ಪ್ರತಿ ಎರಡನೆ ಮಗುವಿನ ಶರೀರದ ತೂಕ ತೀರ ಕಡಿಮೆ.* ವಿಶ್ವದ ಮಕ್ಕಳ ಜನಸಂಖ್ಯೆಯಲ್ಲಿ ಐದು ಮಕ್ಕಳಲ್ಲಿ ಒಂದು ಭಾರತದ ಪ್ರಜೆ.* ನಾರ್ವೆ, ಇಟಲಿ, ಸ್ಪೇನ್, ಗ್ರೀಸ್, ಐರ‌್ಲೆಂಡ್ ದೇಶಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಅತಿ ಕಡಿಮೆ.*ಮಕ್ಕಳಿಗೆ ಶಾರೀರಿಕ ಶಿಕ್ಷೆ ಕೊಡುವುದನ್ನು ನಿಷೇಧಿಸಿರುವ ರಾಷ್ಟ್ರಗಳೆಂದರೆ: ಅಸ್ಟ್ರೀಯ, ಸ್ವೀಡನ್, ಜರ್ಮನಿ, ಡೆನ್ಮಾರ್ಕ್, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್ ಮತ್ತು ನಾರ್ವೆ. *ವಿಶ್ವದಾದ್ಯಂತ ಕಾಯ್ದೆಗಳ ಮೂಲಕ ಕೇವಲ ಶೇ 2.4 ರಷ್ಟು ಮಕ್ಕಳಿಗೆ ಮಾತ್ರ ದೈಹಿಕ ಶಿಕ್ಷೆಯಿಂದ ರಕ್ಷಣೆ ಸಿಕ್ಕಿದೆ.ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಉಂಟಾಗಲು:*ಕಲಿಕೆಗೆ ಸೂಕ್ತವಾದ ವಾತಾವರಣ ಮೂಡಿಸಬೇಕು.4ಶಿಕ್ಷಿಸಬೇಕೆನ್ನುವ ಮನೋಭಾವ ಮೂಡದಂತೆ ಸದಾ ಜಾಗೃತರಾಗಿರಬೇಕು

.

* ಕಲಿಯುವುದಕ್ಕೆ ಬೇಕಾದ ಅನೌಪಚಾರಿಕ ಸಿದ್ಧತೆ ಮಾಡಿಸಬೇಕು.* ಕಲಿಕೆ ದೋಷಗಳು ಕೂಡ ಅತಿರೇಕದ ವರ್ತನೆಗಳ ಮೂಲಕ ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು. *ಸಮಸ್ಯಾತ್ಮಕ ವರ್ತನೆಯನ್ನು ಗುರುತಿಸಿದ ತಕ್ಷಣ ಪೋಷಕರೊಂದಿಗೆ ಸಂಪರ್ಕ, ವಿಚಾರ ವಿನಿಮಯ ಮಾಡಬೇಕು.* ಸಮಸ್ಯಾತ್ಮಕ ವರ್ತನೆಗಳಿರುವ ಮಕ್ಕಳನ್ನು ಎಲ್ಲರೆದುರಿನಲ್ಲಿ ನಿಂದಿಸುವುದು, ತಿಳಿವಳಿಕೆ ಹೇಳುವುದನ್ನು ಮಾಡಬಾರದು* ಇಂತಹ ಮಕ್ಕಳನ್ನು ಗುಂಪು ಚುಟವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದಲ್ಲದೆ ಉತ್ತೇಜನದ ಮಾತುಗಳನ್ನು ಗಮನಿಸುವಂತೆ, ಹೇಳುವಂತೆ ಮಾಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry