ಎಳ್ಳಮಾವಾಸ್ಯೆ: ಮುದ ನೀಡಿದ ವಿವಿಧ ಸ್ಪರ್ಧೆ

7

ಎಳ್ಳಮಾವಾಸ್ಯೆ: ಮುದ ನೀಡಿದ ವಿವಿಧ ಸ್ಪರ್ಧೆ

Published:
Updated:

ಗುಲ್ಬರ್ಗ: ನಗರದ ವಿದ್ಯಾನಗರ ಕಾಲೊನಿ ವೆಲ್‌ಫೇರ್‌ ಸೊಸೈಟಿ ವತಿಯಿಂದ ಎಳ್ಳಮಾವಾಸ್ಯೆ ನಿಮಿತ್ತ ಮಲ್ಲಿಕಾರ್ಜುನ ದೇವಾಲಯ ಉದ್ಯಾನದಲ್ಲಿ ಮಹಿಳೆಯರಿಗಾಗಿ ವಿವಿಧ ಮನೋರಂಜನೆಯ ಸ್ಪರ್ಧೆ ಗಳನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.ಸೀರೆ ಮಡುಚುವುದು, ಸ್ಕೇಲ್‌ಮೇಲೆ ಬಿಸ್ಕೆಟ್‌ ಇಡು ವುದು, ಲೆಮನ್‌ ಸ್ಪೂನ್‌, ವುಲನ್‌ ಸ್ಟಿಕ್, ಕಣ್ಣು ಮುಚ್ಚಿ ಬಿಂದಿ ಹಚ್ಚುವುದು ಸೇರಿದಂತೆ ವಿವಿಧ ಸ್ಪರ್ಧೆ ಗಳಲ್ಲಿ ಮಹಿಳೆಯರು ಭಾಗವಹಿಸಿದ್ದರು. ವಿಜೇತರಿಗೆ ರೇಣುಕಾ ಬಿರಾದಾರ ಬಹುಮಾನ ವಿತರಿ ಸಿದರು. ಸರೋಜಾಬಾಯಿ, ಶರಣಮ್ಮ, ಲಲಿತಾ ಬಾಯಿ, ಸುಮಂಗಲಾ ಬಹುಮಾನ ವಿತರಣೆ ಸಮಾರಂಭ ದಲ್ಲಿ ಇದ್ದರು. ತೀರ್ಪುಗಾರ ರಾಗಿ ಆಶಾ, ಮಧು, ದಮಯಂತಿ, ರತ್ನಮ್ಮ ಕಾರ್ಯ ನಿರ್ವಹಿಸಿದರು.ಬಹುಮಾನ ವಿಜೇತರು: ಬಸಮ್ಮ , ಜಗದೇವಿ, ನಾಗರತ್ನ, ದೀಪಾ, ಶರಣಮ್ಮ, ರೇಖಾ, ಶಶಿಕಲಾ, ದೀಪಾ, ಶ್ರೇಯಾ (ಪ್ರಥಮ), ಶ್ರೀದೇವಿ, ಮಂಜುಳಾ, ಕಲ್ಪನಾ, ಶ್ರೇಯಾ (ದ್ವಿತೀಯ), ಅನುಷಾ, ನಿಹಾರಿಕಾ (ತೃತೀಯ) ಬಹುಮಾನ ಪಡೆದರು.ವೆಲ್‌ಫೇರ್‌ ಸೊಸೈಟಿ ಅಧ್ಯಕ್ಷ ಬಸವರಾಜ ಪುಣ್ಯಶೆಟ್ಟಿ, ಉಪಾಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಸದಸ್ಯರಾದ ಎಸ್‌.ಎಸ್‌. ಪಾಟೀಲ ರಾಯಕೋಡ, ಗುರುಲಿಂಗಯ್ಯ ಮಠಪತಿ, ಶಾಂತಯ್ಯ ಬೀದಿಮನಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಆದಪ್ಪ ಸಿಕ್ಕೇದ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry