ಎಸಿಎಫ್ ಹತ್ಯೆ: ಮೂವರ ಅಮಾನತು

7

ಎಸಿಎಫ್ ಹತ್ಯೆ: ಮೂವರ ಅಮಾನತು

Published:
Updated:

ಕಾರವಾರ: ದಾಂಡೇಲಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮದನ ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಇಬ್ಬರು ಸರ್ಕಾರಿ ನೌಕರರು ಸೇರಿದಂತೆ ಒಟ್ಟು ಮೂವರು ಅಮಾನತುಗೊಂಡಿದ್ದಾರೆ.ಆರೋಪಿಗಳಾದ ಬೆಳಗಾವಿ ಜಿಲ್ಲೆ ರಾಮದುರ್ಗ ಹೆಸ್ಕಾಂ ಉಪ ವಿಭಾಗದ ಎಇಇ ಆನಂದರೂಪಸಿಂಗ್ ನಾಯ್ಕ, ದಾಂಡೇಲಿ ನಗರಸಭೆಯ ಸಮುದಾಯ ಸಂಘಟನಾ ಅಧಿಕಾರಿ ಅರವಿಂದಬಾಬು ಚವ್ಹಾಣ ಮತ್ತು ಅವರ ಪತ್ನಿ, ಹಳಿಯಾಳ ತಾಲ್ಲೂಕು ಭಾಗವತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಶೈಲಜಾ ಚವ್ಹಾಣ ಅವರನ್ನು ಅಮಾನತುಗೊಳಿಸಲಾಗಿದೆ.ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ಹಲವು ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಮೂವರನ್ನು ಅಮಾನತು ಮಾಡಲಾಗಿದೆ.ಸರ್ಕಾರಕ್ಕೆ ವರದಿ: ಪ್ರಕರಣಕ್ಕೆ ಸಂಬಂಧಿಸಿದ ವಿವರವಾದ ವರದಿಯನ್ನು ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಕೌಶಿಕ ಮುಖರ್ಜಿ ಅವರಿಗೆ ಜಿಲ್ಲಾಡಳಿತ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.ಸಿಐಡಿ ಡಿಐಜಿ ಭೇಟಿ: ಸಿಐಡಿ ಅಧಿಕಾರಿಗಳು ತನಿಖೆ  ಮುಂದುವರಿಸಿದ್ದಾರೆ. ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ಪಡೆಯಲು ಸಿಐಡಿ ಡಿಐಜಿ ಬಿ.ಎ. ಪದ್ಮನಯನ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.                      

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry