ಎಸ್ಎಂಎಸ್ ಮೂಲಕ ಬಾನುಲಿ ಸುದ್ದಿ

7

ಎಸ್ಎಂಎಸ್ ಮೂಲಕ ಬಾನುಲಿ ಸುದ್ದಿ

Published:
Updated:

ನವದೆಹಲಿ (ಪಿಟಿಐ): ಆಕಾಶವಾಣಿ ಇನ್ನು ಮುಂದೆ ಎಸ್ಎಂಎಸ್‌ ಸೇವೆಯ ಮೂಲಕ ಗ್ರಾಹಕರಿಗೆ ಪ್ರಮುಖ ಹಾಗೂ ಹೊಸ ಸುದ್ದಿಗಳನ್ನು ನೀಡಲಿದೆ. ಮಾಹಿತಿ ಮತ್ತು ವಾರ್ತಾ ಸಚಿವ ಮನೀಷ್‌ ತಿವಾರಿ ಅವರು ಸೋಮವಾರ ಈ ಸೇವೆಗೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಅವರು ಭಾರತ್‌ ನಿರ್ಮಾಣ್‌ ಅಭಿಯಾನದ ವೆಬ್‌­ಸೈಟ್‌ನ್ನೂ ಉದ್ಘಾಟಿಸಿದರು. ಈ ಸೇವೆಯನ್ನು ಪಡೆಯಲು ಗ್ರಾಹಕರು AIRNEWS ಎಂದು ಟೈಪ್‌ ಮಾಡಿ, ಹೆಸರನ್ನು ಬರೆದು 08082080820 ಸಂಖ್ಯೆಗೆ ಎಸ್‌ಎಂಎಸ್‌ ಮಾಡಬೇಕು. ಅಥವಾ ಇದೇ ಸಂಖ್ಯೆಗೆ ಮಿಸ್ಡ್ ಕಾಲ್‌ ಕೂಡ ಕೊಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry