ಎಸ್.ಎಂ.ಪಂಡಿತ ರಂಗಮಂದಿರ: ಸುಸಜ್ಜಿತ ಆದರೆ ದುಬಾರಿ

7

ಎಸ್.ಎಂ.ಪಂಡಿತ ರಂಗಮಂದಿರ: ಸುಸಜ್ಜಿತ ಆದರೆ ದುಬಾರಿ

Published:
Updated:

ಗುಲ್ಬರ್ಗ: ಜಿಲ್ಲೆಯ ಕಲಾವಿದರ ಬಹುಕಾಲದ ಬೇಡಿಕೆಯ ಫಲವಾಗಿ ನಗರದಲ್ಲಿ ಎಸ್.ಎಂ. ಪಂಡಿತ ರಂಗ­ಮಂದಿರ ನಿರ್ಮಾಣಗೊಂಡಿದೆ. ಪ್ರಸಿದ್ಧ ಕಲಾವಿದ ಎಸ್. ಎಂ. ಪಂಡಿತರ ಹೆಸರಿನ­ಲ್ಲಿರುವ ಈ ರಂಗಮಂದಿರ ಇಲ್ಲಿನ ಏಕೈಕ ಸುಸಜ್ಜಿತ ರಂಗ-­ಮಂದಿರವೂ ಹೌದು.ಆದರೆ ಇದರ ಬಾಡಿಗೆ ದುಬಾರಿ ಎಂಬುದು ರಂಗಕರ್ಮಿಗಳ ಅಳಲು. ಇದರಿಂದಾಗಿ ದೊಡ್ಡ ಮಟ್ಟದ ಕಾರ್ಯಕ್ರಮಗಳಿಗಷ್ಟೆ ಇದು ಸೀಮಿತಗೊಂಡಿದೆ.‘ರಂಗಮಂದಿರ ಎಂಬ ಹೆಸರಿದ್ದರೂ ಇಲ್ಲಿ ರಂಗ ಚಟುವಟಿಕೆಗಳಿಂತಲೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯ­ಕ್ರಮಗಳು, ರಾಜಕೀಯ ಸಮಾವೇಶಗಳೇ ಹೆಚ್ಚು ನಡೆಯುತ್ತಿವೆ’ ಎನ್ನುವುದು ರಂಗ ಕಲಾವಿದರ ಗುರುತರ ಆರೋಪ.ಸಂಪೂರ್ಣ ಹವಾನಿಂಯತ್ರಿತ ಸಭಾಂಗಣದಲ್ಲಿ ಬಾಲ್ಕನಿ ವ್ಯವಸ್ಥೆ ಇದೆ. ರಂಗ ಚಟುವಟಿಕೆಗಳಿಗೆ ಪೂರಕವಾಗಿ ಉತ್ತಮ ಬೆಳಕು, ಧ್ವನಿ ಆಸನ ವ್ಯವಸ್ಥೆ, ಶೌಚಾಲಯ, ಗ್ರೀನ್ ರೂಂ ಹೀಗೆ ಎಲ್ಲ ಸೌಲಭ್ಯವೂ ಇದೆ. ಬಾಲ್ಕನಿ ಸೇರಿದಂತೆ 900 ಮಂದಿ ಕುಳಿತುಕೊಳ್ಳಬಹುದು.2009 ಜನವರಿ 7ರಂದು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಇದರ ಉದ್ಘಾಟನೆ ನೆರವೇರಿಸಿದ್ದರು. ಜಿಲ್ಲಾ­ಡಳಿತದ ಅಧೀನದಲ್ಲಿರುವ ಈ ರಂಗ­ಮಂದಿರದ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದು್ದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಕಾರ್ಯದರ್ಶಿಯಾಗಿರುತಾ್ತರೆ. ಇಲ್ಲಿ ಕಾರ್ಯಕ್ರಮ ನಡೆಸಬೇಕಾದರೆ 15 ದಿನಗಳ ಮೊದಲು ಮುಂಗಡವಾಗಿ ರೂ. 10,000 ನೀಡಿ ಕಾಯಿ್ದರಿಸ­ಬೇಕು.‘ದಿನವೊಂದಕ್ಕೆ ರೂ. 24,485 ಬಾಡಿಗೆ ಇದೆ ( ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ). ಅರ್ಧ ದಿನಕ್ಕೆ (ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಅಥವಾ ಮಧ್ಯಾಹ್ನ 2ರಿಂದ ರಾತ್ರಿ 9ರ ವರೆಗೆ) ಬಾಡಿಗೆ ರೂ. 13, 860. ಭದ್ರತಾ ಠೇವಣಿಯನ್ನು ಕಾರ್ಯಕ್ರಮದ ಬಳಿಕ ಹಿಂದಿರುಗಿಸಲಾಗುವುದು.  ವಿದ್ಯುತ್ ದರ ಯೂನಿಟ್ ಲೆಕ್ಕದಲ್ಲಿ  ಪಾವತಿಸ­ಬೇಕು’ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ.‘ಎಸ್.ಎಂ.ಪಂಡಿತ ರಂಗಮಂದಿರ­ದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಒಟ್ಟು 10 ಸಿಬ್ಬಂದಿಯನ್ನು ನೇಮಿಸಲಾಗಿದೆ. ಕಾವಲುಗಾರ, ಎಲೆಕ್ಟ್ರಿಷಿಯನ್, ಧ್ವನಿ, ಬೆಳಕು ಆಪರೇಟರ್ ಹಾಗೂ ಸ್ವಚ್ಛತಾ ಸಿಬ್ಬಂದಿ ಇದ್ದಾರೆ. ಕಾರ್ಯಕ್ರಮಗಳು ನಡೆಯುವಾಗ ಆಪರೇಟರ್‌ಗಳು ಸಹಕರಿಸು­ತ್ತಾರೆ’ ಎಂದೂ ಅವರು ತಿಳಿಸುತ್ತಾರೆ.‘ಎಸ್.ಎಂ. ರಂಗಮಂದಿರ ಆರಂಭ­ವಾಗು­ವಾಗ ನಾವೆಲ್ಲ ತುಂಬಾ ಖುಷಿ­ಪಟ್ಟಿದ್ದೆವು.

ಆದರೆ ಕೆಲವೇ ತಿಂಗಳಲ್ಲಿ ನಮಗೆ ಭ್ರಮನಿರಸನ­ವಾಯಿತು.ಅತಿಯಾದ ಬಾಡಿಗೆಯಿಂದ ರಂಗಭೂಮಿ ಕಲಾವಿದರಿಗೆ ಇಲ್ಲಿ ನಾಟಕ ಪ್ರದರ್ಶನ ನೀಡುವುದು ಗಗನ ಕುಸುಮವಾಗಿದೆ. ಬೀದರ್, ರಾಯಚೂರು ಮೊದಲಾದ ಜಿಲ್ಲೆಗಳ ರಂಗ ಮಂದಿರಗಳಲ್ಲಿ ಇಲ್ಲಿಯಷ್ಟು ಬಾಡಿಗೆ ಪಡೆಯುವುದಿಲ್ಲ. ನಮಗೆ ಎಸಿ ಬೇಡ. ಸಾಮಾನ್ಯ ರೀತಿಯಲ್ಲಿ ಬಾಡಿಗೆ ಪಡೆಯಿರಿ ಎಂದು ಹಲವು ಬಾರಿ  ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎನು್ನತಾ್ತರೆ ರಂಗಕರ್ಮಿ ಶಂಕರಯ್ಯ ಘಂಟಿ.‘ಎಸ್.ಎಂ.ಪಂಡಿತ ರಂಗಮಂದಿರ­ದಲ್ಲಿ ಕಡಿಮೆ ಬಾಡಿಗೆ ಪಡೆದರೆ ಹೆಚ್ಚು, ಹೆಚ್ಚು ಕಾರ್ಯಕ್ರಮಗಳು ನಡೆಯ­ಬಹುದು. ಇದರಿಂದ ಜಿಲ್ಲಾಡಳಿತಕ್ಕೂ ಲಾಭ. ಈ ಕುರಿತು ಸಂಬಂಧಿತರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಕಾರ್ಯದರ್ಶಿ ಬಿ. ಎಂ. ರಾವೂರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry