ಮಂಗಳವಾರ, ಅಕ್ಟೋಬರ್ 15, 2019
26 °C

ಎಸ್ಕಲೇಟರ್‌ಗೆ ಸಿಕ್ಕಿ ಮಗುವಿನ ಕೈಗೆ ಗಾಯ

Published:
Updated:

ಬೆಂಗಳೂರು: ಪೋಷಕರೊಂದಿಗೆ ನಗರದ ಮಹದೇವಪುರದಲ್ಲಿರುವ ಫಿನಿಕ್ಸ್ ಮಾಲ್‌ಗೆ ಹೋಗಿದ್ದ ಮಗುವೊಂದರ ಎಡಗೈ ಎಸ್ಕಲೇಟರ್‌ಗೆ ಸಿಲುಕಿಕೊಂಡಿದ್ದರಿಂದ ಭಾನುವಾರ ಕ್ಷಣ ಕಾಲ ಆತಂಕ ನಿರ್ಮಾಣವಾಗಿತ್ತು.   ನಾಗೇಶ್‌ಬಾಬು (5) ಎಂಬ ಮಗು ಪೋಷಕರೊಂದಿಗೆ ಎಸ್ಕಲೇಟರ್‌ನಲ್ಲಿ ತೆರಳುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಅನಿರೀಕ್ಷಿತವಾಗಿ ತನ್ನ ಎಡಗೈಯನ್ನು ಎಸ್ಕಲೇಟರ್‌ಗೆ ಕೊಟ್ಟಿದ್ದರಿಂದ ಮಗುವಿನ ಬೆರಳುಗಳಿಗೆ ತೀವ್ರ ಗಾಯಗಳಾಗಿವೆ.

 

ಇದರಿಂದ ಎಸ್ಕಲೇಟರ್ ಸೇವೆಯನ್ನು ಮೂವತ್ತು ನಿಮಿಷಗಳವರೆಗೆ ಸ್ಥಗಿತಗೊಳಿಸಲಾಗಿತ್ತು. ಆನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಎಸ್ಕಲೇಟರ್ ಸರಿಯಾಗಿ ನಿರ್ವಹಣೆ ಮಾಡದ ಆರೋಪದ ಮೇರೆಗೆ ಮಹದೇವಪುರ ಪೊಲೀಸರು ಮಾಲ್ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.  

 

Post Comments (+)