ಗುರುವಾರ , ಮೇ 26, 2022
31 °C

ಎಸ್ಟೀ ಲಾಡರ್‌ನಲ್ಲಿ ಮೇಕಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದು ಶಾಪಿಂಗ್ ಮಾಲ್‌ಗೆ ಬಂದಿದ್ದ ಯುವತಿಯರೆಲ್ಲ ಮೇಕಪ್‌ಗೆ ಮೊರೆ ಹೋಗಿದ್ದರು. ತುಟಿಗೆ ರಂಗು ರಂಗಿನ ಲಿಪ್‌ಸ್ಟಿಕ್‌ನ ಮೆರುಗು, ಉಗುರುಗಳಿಗೆ ಚೆಂದದ ನೈಲ್ ಪಾಲಿಷ್ ಹಾಕಿಸಿಕೊಳ್ಳುತ್ತಿದ್ದರು. ಸಂಚಾರ ದಟ್ಟಣೆ ಪರಿಣಾಮ ಬಾಡಿದ ಮುಖಕ್ಕೆ ಒಂದಿಷ್ಟು ಮೇಕಪ್...

ಮಲ್ಲೇಶ್ವರದ ಮಂತ್ರಿ ಮಾಲ್‌ನಲ್ಲಿ ಎಸ್ಟೀ ಲಾಡರ್ ಮೇಕಪ್ ಉತ್ಪನ್ನಗಳ ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ ಕಂಡು ಬಂದ ದೃಶ್ಯ ಇದು.ವಿಶ್ವದ ಪ್ರಮುಖ ಮೈಕಾಂತಿ, ಚರ್ಮ ರಕ್ಷಣೆ ಉತ್ಪನ್ನಗಳು ಮತ್ತು ಸುಗಂಧ ದ್ರವ್ಯಗಳ ಬ್ರಾಂಡ್ ‘ಎಸ್ಟೀ ಲಾಡರ್’ ಬೆಂಗಳೂರಿಗೆ ಕಾಲಿಟ್ಟಿದೆ. ಇಲ್ಲಿ ಡೊನ್ನಾ, ಒರಿಜಿನ್ಸ್, ಅವೆದಾ, ಮಿಸೊನಿ, ಮುಸ್ತಾಂಗ್, ಅಮೆರಿಕನ್ ಬ್ಯೂಟಿ, ಮೈಕಲ್ ಕೋರ್ಸ್‌ರ್ಸ್‌ ಹಾಗೂ ಗ್ರಾಸ್ ರೂಟ್ಸ್ ಹೀಗೆ ಹಲವಾರು ಪ್ರಖ್ಯಾತ ಬ್ರಾಂಡ್‌ಗಳ ಹೆಸರಿನಡಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲಿದೆ. ಕಣ್ಣು, ಉಗುರು, ತುಟಿ ಸೇರಿದಂತೆ ಮುಖದ ಕಾಂತಿ ಹೆಚ್ಚಿಸಿಕೊಳ್ಳುವ ಸೌಂದರ್ಯವರ್ಧಕ ಉತ್ಪನ್ನಗಳು ಇಲ್ಲಿವೆ.ಮಂತ್ರಿ ಡೆವಲಪ್‌ರ್ಸ್‌ನ ಮಾರುಕಟ್ಟೆ ನಿರ್ದೇಶಕಿ ಸ್ನೇಹಲ್ ಮಂತ್ರಿ, ಸಿಇಒ ಜೊನಾಥನ್ ಯಾಕ್, ಮಂಜುಷಾ ಮಹೇಶ್ವರಿ, ಪ್ರಿಯಾಂಕ ಮಂತ್ರಿ, ರೂಪದರ್ಶಿ ಅವಿವಾ ಬಿದ್ದಪ್ಪ ಮತ್ತಿತರರು ಹಾಜರಿದ್ದರು.      

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.