ಎಸ್ಸೆಸ್ಸೆಲ್ಸಿ: ಜಿಲ್ಲೆಗೆ 17ನೇ ಸ್ಥಾನ ಪ್ರಾಪ್ತಿ

6

ಎಸ್ಸೆಸ್ಸೆಲ್ಸಿ: ಜಿಲ್ಲೆಗೆ 17ನೇ ಸ್ಥಾನ ಪ್ರಾಪ್ತಿ

Published:
Updated:
ಎಸ್ಸೆಸ್ಸೆಲ್ಸಿ: ಜಿಲ್ಲೆಗೆ 17ನೇ ಸ್ಥಾನ ಪ್ರಾಪ್ತಿ

ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಗೆ 17ನೇ ಸ್ಥಾನ ಪ್ರಾಪ್ತವಾಗಿದೆ. ರಾಜ್ಯದ ಫಲಿತಾಂಶ ಪಟ್ಟಿಯ ಪ್ರಕಾರ 17ನೇ ಸ್ಥಾನವಾದರೂ ಜಿಲ್ಲೆಯ ಫಲಿತಾಂಶ ಶೇ. 81.37 ಬಂದಿದ್ದು, ಕಳೆದ ಬಾರಿಗಿಂತ (ಕಳೆದ ಬಾರಿ ಶೇ. 80.01 ಫಲಿತಾಂಶ ಬಂದಿತ್ತು 14ನೇ ಸ್ಥಾನ .) ಶೇ. 1.36ರಷ್ಟು ಫಲಿತಾಂಶ ಪ್ರಮಾಣ ಸುಧಾರಣೆಯಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.23,797 ವಿದ್ಯಾರ್ಥಿಗಳ ಪೈಕಿ 19,363 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 11,747 ಬಾಲಕರ ಪೈಕಿ  9,307 ಮಂದಿ ಉತ್ತೀರ್ಣರಾಗಿದ್ದಾರೆ. 12,050 ಬಾಲಕಿಯರ ಪೈಕಿ 10,056 ಮಂದಿ ಉತ್ತೀರ್ಣರಾಗಿದ್ದಾರೆ.  900 ಮಂದಿ ಉನ್ನತ ಶ್ರೇಣಿಯಲ್ಲಿ, 7,237 ಮಂದಿ ಪ್ರಥಮ, 4,694 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 6,474 ಮಂದಿ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಶೇ 100 ಫಲಿತಾಂಶ

ಜಿಲ್ಲೆಯಲ್ಲಿ ಒಟ್ಟು 49 ಶಾಲೆಗಳು ಶೇ. 100 ಫಲಿತಾಂಶ ಸಾಧಿಸಿವೆ. 15 ಸರ್ಕಾರಿ, 4 ಅನುದಾನಿತ, 30 ಅನುದಾನರಹಿತ ಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ. ಕಳೆದ ವರ್ಷ 16 ಸರ್ಕಾರಿ ಶಾಲೆಗಳು, 6 ಅನುದಾನಿತ, 27 ಅನುದಾನ ರಹಿತ ಶಾಲೆಗಳು ಶೇ. 100 ಫಲಿತಾಂಶ ಪಡೆದಿದ್ದವು.ಗ್ರಾಮೀಣರೇ ಮೇಲುಗೈ

ನಗರ ಪ್ರದೇಶದಿಂದ ಪರೀಕ್ಷೆಗೆ ಹಾಜರಾದ 4,343 ಬಾಲಕರ ಪೈಕಿ 3,319(ಶೇ. 76.42) ಮಂದಿ ಉತ್ತೀರ್ಣರಾಗಿದ್ದಾರೆ. 4,419 ಬಾಲಕಿಯರ ಪೈಕಿ 3,643 (ಶೇ. 82.44) ಮಂದಿ ತೇರ್ಗಡೆ ಹೊಂದಿದ್ದಾರೆ. ಗ್ರಾಮೀಣ ಪ್ರದೇಶದ 7,404 ಬಾಲಕರ ಪೈಕಿ 5,988 (ಶೇ. 80.88), 7,631 ಬಾಲಕಿಯರ ಪೈಕಿ 6,413(ಶೇ. 84.04) ಮಂದಿ ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳು: ಪುನರ್ ಪರೀಕ್ಷೆ ಬರೆದ  2,416 ವಿದ್ಯಾರ್ಥಿಗಳ ಪೈಕಿ 799 ಮಂದಿ ತೇರ್ಗಡೆಯಾಗಿದ್ದು, ಶೇ 33.07 ಫಲಿತಾಂಶ ದಾಖಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎ. ರಾಜಶೇಖರ ತಿಳಿಸಿದ್ದಾರೆ.ಶೇ. 100 ಸಾಧನೆಯ ಶಾಲೆಗಳು

ತರಳಬಾಳು ಶಾಲೆ:
ನಗರದ ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಗೆ ಶೇ. 100 ಫಲಿತಾಂಶ ಬಂದಿದೆ. ಸತತ ಮೂರು ವರ್ಷಗಳಿಂದ ಈ ಸಂಸ್ಥೆಗೆ ಶೇ. 100 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಎಲ್ಲ 260 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 126 ಡಿಸ್ಟಿಂಕ್ಷನ್, 128 ಪ್ರಥಮದರ್ಜೆ, 6 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಎ.ಟಿ. ಪ್ರೇರಣಾ 612 (ಶೇ. 97.92) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಸ್ವಾಮಿ ವಿವೇಕಾನಂದ ವಸತಿ ಶಾಲೆ:
ನಗರದ ವಿದ್ಯಾನಗರದ ಬನಶಂಕರಿ ಬಡಾವಣೆಯ ಸ್ವಾಮಿ ವಿವೇಕಾನಂದ ವಸತಿ ಶಾಲೆಗೆ ಶೇ. 100 ಫಲಿತಾಂಶ ಲಭ್ಯವಾಗಿದೆ. ಪರೀಕ್ಷೆ ಬರೆದ 46 ವಿದ್ಯಾರ್ಥಿಗಳ ಪೈಕಿ 20 ಮಂದಿ ಡಿಸ್ಟಿಂಕ್ಷನ್ ಮತ್ತು 26 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎಂ.ಬಿ. ಓಂಕಾರಾಚಾರ್ ಶೇ. 95.63 ಅಂಕ ಗಳಿಸಿದ್ದಾರೆ ಎಂದು ಶಾಲೆಯ ಗೌರವ ಕಾರ್ಯದರ್ಶಿ ಎಸ್. ಮರುಳಸಿದ್ಧಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾಗನೂರು ಬಸಪ್ಪ ಪ್ರೌಢಶಾಲೆ: ನಗರದ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಪ್ರೌಢಶಾಲೆಗೆ ಶೇ. 100 ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ ಎಲ್ಲ 106 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 79 ಮಂದಿ ಪ್ರಥಮದರ್ಜೆ, 11 ಮಂದಿ ದ್ವಿತೀಯ ದರ್ಜೆ, ಒಬ್ಬ ವಿದ್ಯಾರ್ಥಿ ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಶಾಲೆಯ ಬಿ.ಎಂ. ಭಾವನಾ 615 (ಶೇ. 98.40), ಎಸ್.ಎನ್. ಸಹನಾ 604 (96.64), ಪಿ.ಕೆ. ಮೃದುಲಾ 597( ಶೇ. 95.52), ಎ.ಇ. ಶ್ರೀನಿಧಿ 592( ಶೇ. 94.72), ಎಸ್.ಪಿ. ಹಾಲೇಶ್ 592 (ಶೇ. 94.72) ಎಚ್.ಪಿ. ಯುವರಾಜ್ 587 (ಶೇ. 93.92), ಎಂ.ವಿ. ಅನುಷಾ  584 (ಶೇ. 93.44) ಟಿ. ಸೌಮ್ಯಾ 581( ಶೇ. 92.96), ಎಲ್. ಎಚ್. ಅಶ್ವಿನಿ 573 (ಶೇ. 91.68).ಆಂಜನೇಯ ಪ್ರೌಢಶಾಲೆ ತುರ್ಚಘಟ್ಟ:
ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟದ ಆಂಜನೇಯ ಸರ್ಕಾರಿ ಪ್ರೌಢಶಾಲೆಗೆ  ಶೇ.100 ಫಲಿತಾಂಶ ಲಭಿಸಿದೆ. 4 ಡಿಸ್ಟಿಂಕ್ಷನ್, 29 ಪ್ರಥಮದರ್ಜೆ, 23 ದ್ವಿತೀಯದರ್ಜೆ ಹಾಗೂ 19 ವಿದ್ಯಾರ್ಥಿಗಳು ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ರಂಗನಾಥ ಪ್ರೌಢಶಾಲೆ ಆಲೂರಹಟ್ಟಿ: ಆಲೂರಹಟ್ಟಿಯ ರಂಗನಾಥ ಪ್ರೌಢಶಾಲೆಗೆ ಶೇ. 100 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ಎಲ್ಲ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 20 ಮಂದಿ ಪ್ರಥಮದರ್ಜೆ, 5 ಮಂದಿ ದ್ವಿತೀಯ ದರ್ಜೆ ಹಾಗೂ 12 ಮಂದಿ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಸಿದ್ಧಗಂಗಾ ಶಾಲೆಗೆ ಶೇ. 99: ನಗರದ ಸಿದ್ಧಗಂಗಾ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 99 ಫಲಿತಾಂಶ ಲಭಿಸಿದೆ. 286 ವಿದ್ಯಾರ್ಥಿಗಳ ಪೈಕಿ 284 ಮಂದಿ ತೇರ್ಗಡೆಯಾಗಿದ್ದಾರೆ. 45 ಮಂದಿ ಡಿಸ್ಟಿಂಕ್ಷನ್ 191 ಮಂದಿ ಪ್ರಥಮದರ್ಜೆ  31 ಮಂದಿ ದ್ವಿತೀಯ ಶ್ರೇಣಿ, 17 ಮಂದಿ ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಎಂ. ಸೌಮ್ಯಾ 602 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ. ಶಿವಣ್ಣ ಅಭಿನಂದಿಸಿದ್ದಾರೆ.ಅತ್ತಿಗೆರೆ ಪ್ರೌಢಶಾಲೆಗೆ ಶೇ. 95.65: ದಾವಣಗೆರೆ ತಾಲ್ಲೂಕು ಅತ್ತಿಗೆರೆಯ ಪಟೇಲ್ ನಂದ್ಯಪ್ಪ ಹೊರಟ್ಟಿಗೌಡ್ರ ಕಲ್ಲಪ್ಪ ಪ್ರೌಢಶಾಲೆಗೆ ಶೇ. 95.65 ಫಲಿತಾಂಶ ಬಂದಿದೆ. ಶಾಲೆಯಲ್ಲಿ ಪರೀಕ್ಷೆ ತೆಗೆದುಕೊಂಡ 46 ವಿದ್ಯಾರ್ಥಿಗಳಲ್ಲಿ 2 (ಡಿಸ್ಟಿಂಕ್ಷನ್), 12 (ಪ್ರಥಮ), 12 (ದ್ವಿತೀಯ) ಹಾಗೂ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿ.ಕೆ. ಕಾವ್ಯಾ 576 ಅಂಕ (ಶೇ.92.16) ಮತ್ತು ಎಂ.ಪಿ. ಸುಫಿಯಾಬಾನು 555 ಅಂಕ (ಶೇ.88.8) ಪಡೆದಿದ್ದಾರೆ.ಜೆ.ಎಂ. ಇಮಾಂ ಶಾಲೆ

 ಜಗಳೂರು: 
ಪಟ್ಟಣದ ಜೆ.ಎಂ. ಇಮಾಂ ಸ್ಮಾರಕ ಪ್ರೌಢಶಾಲೆಯಲ್ಲಿ ಶೇ. 100ರಷ್ಟು ಫಲಿತಾಂಶ ಲಭಿಸಿದೆ.

ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇಬ್ಬರು ಉನ್ನತ ಶ್ರೇಣಿಯಲ್ಲಿ, ಪ್ರಥಮ ದರ್ಜೆಯಲ್ಲಿ 14 ಹಾಗೂ ಒಬ್ಬರು ದ್ವಿತೀಯ ದರ್ಜೆಯಲ್ಲಿ ಮತ್ತು ಐವರು ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಜೆ.ಕೆ. ಹುಸೇನ್ ಮಿಯಾ ಸಾಬ್ ಹಾಗೂ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.ಶೇ. ನೂರರಷ್ಟು ಫಲಿತಾಂಶ

ಹೊನ್ನಾಳಿ:
ಪಟ್ಟಣದ ಜನತಾ ಉರ್ದು ಪ್ರೌಢಶಾಲೆ ಮತ್ತು ಗೊಲ್ಲರಹಳ್ಳಿಯ ವೆಂಕಟೇಶ್ವರ ವಿದ್ಯಾ ಸಂಸ್ಥೆ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ. ನೂರರಷ್ಟು ಫಲಿತಾಂಶ ಗಳಿಸಿವೆ.ಪರೀಕ್ಷೆಗೆ ಹಾಜರಾದ ಜನತಾ ಉರ್ದು ಪ್ರೌಢಶಾಲೆಯ 35 ವಿದ್ಯಾರ್ಥಿಗಳಲ್ಲಿ 8 ಪ್ರಥಮ, 9 ದ್ವಿತೀಯ ಮತ್ತು 18 ವಿದ್ಯಾರ್ಥಿಗಳು ತೃತೀಯ ಶ್ರೇಣಿ ಪಡೆದಿದ್ದಾರೆ. ರೈನಾ ಖಾನಂ 519 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಶಿಕ್ಷಕ ಶಕೀಲ್ ಅಹಮ್ಮದ್ ತಿಳಿಸಿದ್ದಾರೆ.ಪರೀಕ್ಷೆಗೆ ಹಾಜರಾದ ವೆಂಕಟೇಶ್ವರ ವಿದ್ಯಾ ಸಂಸ್ಥೆಯ 15 ವಿದ್ಯಾರ್ಥಿಗಳಲ್ಲಿ 11 ಪ್ರಥಮ, 1 ದ್ವಿತೀಯ ಮತ್ತು 3 ವಿದ್ಯಾರ್ಥಿಗಳು ತೃತೀಯ ಶ್ರೇಣಿ ಪಡೆದಿದ್ದಾರೆ. ಆಕಾಶ್ 519 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಪಿ. ಹರೀಶ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry