ಎಸ್‌ಎಂಇ: ಸಾಲದ ಮೇಲಿನ ಬಡ್ಡಿ ತುಟ್ಟಿ

ಶನಿವಾರ, ಮೇ 25, 2019
23 °C

ಎಸ್‌ಎಂಇ: ಸಾಲದ ಮೇಲಿನ ಬಡ್ಡಿ ತುಟ್ಟಿ

Published:
Updated:

ನವದೆಹಲಿ (ಪಿಟಿಐ): ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದಿಂದ (ಎನ್‌ಎಸ್‌ಐಸಿ) ದೊರೆಯುವ ಸಾಲವು ಇನ್ನು ಮುಂದೆ ಇನ್ನಷ್ಟು ತುಟ್ಟಿಯಾಗಲಿದೆ.ಆರ್‌ಬಿಐನ ಅಲ್ಪಾವಧಿ ಬಡ್ಡಿ ದರ ಹೆಚ್ಚಳದ ಹೊರೆಯನ್ನು ನಿಗಮವು ಸಾಲಗಾರರಿಗೆ ವರ್ಗಾಯಿಸಲು ನಿರ್ಧರಿಸಿರುವುದರಿಂದ ಸಣ್ಣ ಕೈಗಾರಿಕೆದಾರರು ಹೆಚ್ಚುವರಿ ಹೊರೆ ಹೊರಬೇಕಾಗಿದೆ.ಸಾಲ ನೀಡಿಕೆಯ ವೆಚ್ಚ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತೇವೆ ಎಂದು `ಎನ್‌ಎಸ್‌ಐಸಿ~ ಅಧ್ಯಕ್ಷ ಎಚ್. ಪಿ. ಕುಮಾರ್ ಹೇಳಿದ್ದಾರೆ. ಸಾಲಗಳ ಮೇಲಿನ ಬಡ್ಡಿ ದರಗಳು  ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಂಕಷ್ಟ ತಂದೊಡ್ಡಿರುವುದು ನಿಜ ಎಂದೂ ಅವರು ಒಪ್ಪಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry