ಎಸ್‌ಎಂಎಸ್‌ ಅಲರ್ಟ್ ಗೆ ಶುಲ್ಕ: ಕೆನರಾ ಬ್ಯಾಂಕ್‌

7

ಎಸ್‌ಎಂಎಸ್‌ ಅಲರ್ಟ್ ಗೆ ಶುಲ್ಕ: ಕೆನರಾ ಬ್ಯಾಂಕ್‌

Published:
Updated:

ನವದೆಹಲಿ(ಪಿಟಿಐ): ಈವರೆಗೆ ಪ್ರತಿ ಬಾರಿಯ ನಗದು ವಹಿವಾಟು ಕುರಿತು ಉಚಿತವಾಗಿ ಎಸ್‌ಎಂಎಸ್‌ ಮಾಹಿತಿ ಪಡೆದುಕೊಳ್ಳುತ್ತಿದ್ದ ಕೆನರಾ ಬ್ಯಾಂಕ್‌ ಖಾತೆದಾರರು ಇನ್ನು ಮುಂದೆ ಈ ಸೇವೆಗಾಗಿ ವರ್ಷಕ್ಕೆ ₨60 ಶುಲ್ಕ ತೆರಬೇಕಾಗುತ್ತದೆ. ಎಸ್‌ಎಂಎಸ್‌ ಶುಲ್ಕ ಕ್ರಮ ಅಕ್ಟೋಬರ್‌ 1ರಿಂದ ಜಾರಿಗೆ ಬರಲಿದೆ.ಆದರೆ, ಹಿರಿಯ ನಾಗರಿಕರು, ಸಣ್ಣ ಪ್ರಮಾಣದ ಉಳಿತಾಯ ಮಾಡುವ ಖಾತೆದಾರರು, ಬ್ಯಾಂಕ್‌ನ ಮೂಲ ಖಾತೆದಾರರು ಮತ್ತು ವಿತ್ತೀಯ ಸೇರ್ಪಡೆ ಕಾರ್ಯಕ್ರಮದಡಿ ಉಳಿತಾಯ ಖಾತೆ ಆರಂಭಿಸಿದವರಿಗೆ ಈ ಶುಲ್ಕ ಇರುವುದಿಲ್ಲ ಎಂದು ಬ್ಯಾಂಕ್‌ ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry