ಬುಧವಾರ, ನವೆಂಬರ್ 20, 2019
27 °C

ಎಸ್‌ಎಐ ಬೇಸಿಗೆ ಶಿಬಿರ

Published:
Updated:

ಬೆಂಗಳೂರು: ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಕೇಂದ್ರದ ವತಿಯಿಂದ ಮೇ 2ರಿಂದ 31ರವರೆಗೆ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಟೆನಿಸ್ ಮತ್ತು ಈಜಿನಲ್ಲಿ ತರಬೇತಿ ಪಡೆಯ ಬಯಸುವ ಆಸಕ್ತರು ಏಪ್ರಿಲ್ 27 ಮತ್ತು 28ರಂದು ಎಸ್‌ಎಐ ಕಚೇರಿ ಸಮಯದಲ್ಲಿ ಹೆಸರು ನೊಂದಾಯಿಸಬಹುದು. ಪಾಲ್ಗೊಳ್ಳುವ ಮಕ್ಕಳ ಎರಡು ಫೋಟೊ, ವೈದ್ಯರಿಂದ ಪಡೆದ ಅರ್ಹತಾ ಪತ್ರ, ಜನ್ಮದಿನಾಂಕ ದೃಢೀಕರಣ ಪತ್ರ, ಗುರುತು ಚೀಟಿಗಳನ್ನು ನೊಂದಾವಣೆ ಸಮಯದಲ್ಲಿ ಹಾಜರು ಪಡಿಸಬೇಕು.ಆಸಕ್ತರು ದೂರವಾಣಿ ಸಂಖ್ಯೆ 080-23215647 ಅಥವಾ 23213120 ಗೆ ಕರೆ ಮಾಡಿ 304 ಅಥವಾ 522 ಎಕ್ಸ್‌ಟೆನ್‌ಷನ್‌ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಭಾರತ ಕ್ರೀಡಾ ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)