ಎಸ್‌ಎಫ್‌ಐ ಮುಖಂಡನ ಸಾವು ದುರಾದೃಷ್ಟಕರ : ಮಮತಾ

7

ಎಸ್‌ಎಫ್‌ಐ ಮುಖಂಡನ ಸಾವು ದುರಾದೃಷ್ಟಕರ : ಮಮತಾ

Published:
Updated:

ಕೋಲ್ಕತ್ತಾ (ಪಿಟಿಐ): ಎಸ್‌ಎಫ್‌ಐ ವಿದ್ಯಾರ್ಥಿ ಘಟಕದ ಮುಖಂಡನ ಸಾವು ದುರಾದೃಷ್ಟಕರ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.ಎಲ್ಲಾ ಸಾವುಗಳು ಕೂಡ ದುರಾದೃಷ್ಟಕರ ಹಾಗೆಯೇ ಈ ಸಾವು ಸಹ ದುರಾದೃಷ್ಟಕರ ಎಂದು ಮಮತಾ ತಿಳಿಸಿದ್ದಾರೆ. ಈ ಘಟನೆ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಮಮತಾ ಈ ಬಗ್ಗೆ ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ ಎಂದರು.ಎಸ್‌ಎಫ್‌ಐ ಮುಖಂಡ ಸುದೀಪ್ ಗುಪ್ತ ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಪೊಲೀಸರು ಇದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.ಪೊಲೀಸರು ಸುದೀಪ್ ಗುಪ್ತನನ್ನು ಕೊಂದುಹಾಕಿದ್ದಾರೆ ಎಂದು ವಿರೋಧ ಪಕ್ಷ ಸಿಪಿಐ(ಎಂ) ಆರೋಪಿಸಿದೆ. ಈ ಸಂಬಂಧ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅದು ಆಗ್ರಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry