ಎಸ್‌ಎಸ್‌ಎಲ್‌ಸಿ: ವಿವಿಧ ಶಾಲೆಗಳ ಫಲಿತಾಂಶ

7

ಎಸ್‌ಎಸ್‌ಎಲ್‌ಸಿ: ವಿವಿಧ ಶಾಲೆಗಳ ಫಲಿತಾಂಶ

Published:
Updated:

ತಿ.ನರಸೀಪುರ: ತಾಲ್ಲೂಕಿನ ಬನ್ನೂರು ಹೋಬಳಿಯ ಹನುಮನಾಳು ಗ್ರಾಮದ ಶ್ರೀ ಶಾರದಾ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 87.87 ರಷ್ಟು ಫಲಿತಾಂಶ ಬಂದಿದೆ.ಶಾಲೆಯ 33 ವಿದ್ಯಾರ್ಥಿಗಳಲ್ಲಿ ಎನ್.ಬಿ.ಚೈತನ್ಯ (553), ಎಚ್.ಆರ್.ಪ್ರಕೃತಿ (549) ಹಾಗೂ ಕೆ.ರೇಷ್ಮ  (547) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ 13 ಪ್ರಥಮ, 4 ದ್ವಿತೀಯ ಹಾಗೂ 9 ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹನುಮನಾಳು ಸಿದ್ದೇಗೌಡ ತಿಳಿಸಿದ್ದಾರೆ.ಸೋಸಲೆ ಮೊರಾರ್ಜಿ ವಸತಿ ಶಾಲೆ: ತಾಲ್ಲೂಕಿನ ಸೋಸಲೆ ಗ್ರಾಮದ ಮೊರಾರ್ಜಿ ಮಾದರಿ ವಸತಿ ಶಾಲೆಗೆ ಶೇ 83.76 ರಷ್ಟು ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ 37 ಮಂದಿಯಲ್ಲಿ 10 ಪ್ರಥಮ, 9 ದ್ವಿತೀಯ ಹಾಗೂ 12 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಪಿ.ಎಂ.ಯಶ್ವಂತ್ 521 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಎಂ.ಟಿ.ಮಾನಸ ಕನ್ನಡದಲ್ಲಿ 125ಕ್ಕೆ 117 ಅಂಕ ಪಡೆದಿದ್ದಾಳೆ ಎಂದು ಶಾಲೆಯ ನಿಲಯ ಪಾಲಕ ಶಿವಲಿಂಗಮೂರ್ತಿ ತಿಳಿಸಿದ್ದಾರೆ.ವಾಸವಿ ಲಯನ್ಸ್ ವಿದ್ಯಾ ನಿಕೇತನ: ಪಟ್ಟಣದ ವಾಸವಿ ಲಯನ್ಸ್ ವಿದ್ಯಾ ನಿಕೇತನ ದಲ್ಲಿ ಪರೀಕ್ಷೆಗೆ ಹಾಜರಾದ 17 ವಿದ್ಯಾರ್ಥಿಗಳಲ್ಲಿ ಎಂ.ಎಸ್.ಚೈತನ್ಯ 534 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 9 ಪ್ರಥಮ, 2 ದ್ವತೀಯ ಹಾಗೂ ಓರ್ವ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪ್ರಕಾಶ್ ತಿಳಿಸಿದ್ದಾರೆ.ಬಾಲಕಿಯರ ಶಾಲೆಗೆ ಉತ್ತಮ ಫಲಿತಾಂಶ

ಸರಗೂರು: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ 80 ವಿದ್ಯಾರ್ಥಿನಿಯರಲ್ಲಿ 71 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ.ಉನ್ನತ ಶ್ರೇಣಿಯಲ್ಲಿ ಒಬ್ಬ, ಪ್ರಥಮ ಶ್ರೇಣಿಯಲ್ಲಿ 24, ದ್ವಿತೀಯ ಶ್ರೇಣಿಯಲ್ಲಿ 19, ತೃತೀಯ ಶ್ರೇಣಿಯಲ್ಲಿ 27 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ತನುಜಾ 541 (ಶೇ 86.56), ಕೆ.ನಂದಿನಿ 523 (ಶೇ 83.68), ಎ.ಕಾವ್ಯಶ್ರೀ 507 (ಶೇ 81.12), ಎನ್.ಕಾವ್ಯ 494 (ಶೇ 79.04), ಎಸ್.ಎಸ್. ತೇಜಶ್ವಿನಿ 485 (ಶೇ 77.06) ಅಂಕ ಪಡೆದಿದ್ದಾರೆ. ಮುಳ್ಳೂರು ಸರ್ಕಾರಿ ಪ್ರೌಢಶಾಲೆಗೆ ಶೇ 72.22 ಫಲಿತಾಂಶ ಬಂದಿದೆ. 108 ವಿದ್ಯಾರ್ಥಿಗಳಲ್ಲಿ 78 ಮಂದಿ ಪಾಸಾಗಿದ್ದಾರೆ. ವಿದ್ಯಾರ್ಥಿ ಮಧುಚಂದ್ರ 593 ಅಂಕ ಪಡೆದು ತಾಲ್ಲೂಕಿಗೆ ಮೊದಲಿಗನಾಗಿದ್ದಾನೆ. ಎಂ.ಡಿ.ಸುಶ್ಮಿತಾ 555 (ಶೇ 88) ಎಂ.ಎಸ್. ಮಣಿಕಂಠ 457 (ಶೇ 73.12) ಅಂಕ ಪಡೆದಿದ್ದಾರೆ. ಉನ್ನತ ಶ್ರೇಣಿಯಲ್ಲಿ  2, ಪ್ರಥಮ ಶ್ರೇಣಿಯಲ್ಲಿ 23, ದ್ವಿತೀಯ ಶ್ರೇಣಿಯಲ್ಲಿ 16, ತೃತೀಯ ಶ್ರೇಣಿ 37 ಮಂದಿ ಪಾಸಾಗಿದ್ದಾರೆ.ನಂಜನಗೂಡು: ವಿವಿಧ ಶಾಲೆಗಳ ಫಲಿತಾಂಶ

ನಂಜನಗೂಡು: ತಾಲ್ಲೂಕಿನ 28 ಸರ್ಕಾರಿ ಪ್ರೌಢಶಾಲೆ, 19 ಅನುದಾನ ರಹಿತ, 8 ಅನುದಾನಿತ ಶಾಲೆಗಳು ಸೇರಿ ಒಟ್ಟು 55 ಪ್ರೌಢಶಾಲೆಗಳಿಂದ ಪರೀಕ್ಷೆ ಬರೆದ 4238 ವಿದ್ಯಾರ್ಥಿಗಳ ಪೈಕಿ 3396 ಮಂದಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ  1676 ಬಾಲಕರು, 1720 ಬಾಲಕಿಯರು ಸೇರಿದ್ದು, ಶೇ 80.13 ಫಲಿತಾಂಶ ಬಂದಿದೆ. ಸರ್ಕಾರಿ ಪ್ರೌಢಶಾಲೆಗಳ ಫಲಿತಾಂಶ: 28 ಸರ್ಕಾರಿ ಪ್ರೌಢಶಾಲೆಗಳ 2275 ವಿದ್ಯಾರ್ಥಿಗಳ ಪೈಕಿ 1752 ಮಂದಿ ತೇರ್ಗಡೆ ಹೊಂದುವ ಮೂಲಕ ಶೇ 77.17 ಸಾಧನೆಯಾಗಿದೆ. ತಾಂಡವಪುರ, ಮಲ್ಲೂಪುರ ಶಾಲೆಗಳು ಮತ್ತು ಹೊಸಕೋಟೆಯ ಮೊರಾರ್ಜಿ ವಸತಿ ಶಾಲೆ ಶೇ 100 ಫಲಿತಾಂಶ ಪಡೆದಿವೆ. ಹೆಡತಲೆ ಶಾಲೆ ಶೇ 98 ಸಾಧನೆ ಮಾಡಿ ಎರಡನೇ ಸ್ಥಾನ ಪಡೆದಿದೆ. ವಿದ್ಯಾಪೀಠದ ಮೊರಾರ್ಜಿ ವಸತಿ ಶಾಲೆ ಶೇ  97 ಫಲಿತಾಂಶ ಪಡೆದು ಮೂರನೇ ಸ್ಥಾನ ಗಳಿಸಿದೆ. ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ ಮತ್ತು ಕಳಲೆ ಶಾಲೆ ಶೇ 45 ಫಲಿತಾಂಶ ಕಂಡು ಕೊನೇ ಸ್ಥಾನ ಪಡೆದಿವೆ. ಇತರೆ ಶಾಲೆಗಳು: ಹದಿನಾರು ಶಾಲೆ- ಶೇ 72, ಕಪ್ಪಸೋಗೆ- 73, ಕೂಡ್ಲಾಪುರ- 70, ಹೆಮ್ಮರಗಾಲ- 71, ಮಡುವಿನಹಳ್ಳಿ- 89, ಹರದನಹಳ್ಳಿ- 78, ನಾಗಮ್ಮ (ಬಾಲಕಿಯರು)- 71, ಮರಳೂರು- 61, ಹೊರಳವಾಡಿ- 57, ನವಿಲೂರು- 89, ಕಸುವಿನಹಳ್ಳಿ- 91, ಹುರ- 89, ದಾಸನೂರು- 95, ಹೆಗ್ಗಡಹಳ್ಳಿ- 71, ದೇವನೂರು- 82, ಕೌಲಂದೆ- 64, ಹೆಡಿಯಾಲ- 96, ಹುಲ್ಲಹಳ್ಳಿ- 68, ಎಸ್‌ಸಿ/ಎಸ್‌ಟಿ ಬಾಲಕಿಯರ ವಸತಿ ಶಾಲೆ- 88, ಮೊರಾರ್ಜಿ (ಸಿಂಧುವಳ್ಳಿ)- 89, ಪಟ್ಟಣ ಬಾಲಕಿಯರ ಪ್ರೌಢಶಾಲೆ- ಶೇ. 75.ಅನುದಾನಿತ ಶಾಲೆಗಳು: ಜನತಾ, (ತಗಡೂರು)- ಶೇ 81, ಟಿ.ಎಸ್.ಸುಬ್ಬಣ್ಣ (ಕಳಲೆ)- 92,  ಟಿ.ಎಸ್.ಸುಬ್ಬಣ್ಣ (ತಾಯೂರು)- 76,  

ಟಿ.ಎಸ್.ಸುಬ್ಬಣ್ಣ (ಹುರ)- 94, ಶಿವಯೋಗಿ (ಬದನವಾಳು)- 95, ಜೆಎಸ್‌ಎಸ್ (ಹುಲ್ಲಹಳ್ಳಿ)- 87, ಕನಕದಾಸ (ಪಟ್ಟಣ)- 72, ನಂಜುಂಡೇಶ್ವರ ವಿದ್ಯಾವರ್ಧಕ- 65.ಅನುದಾನ ರಹಿತ ಶಾಲೆಗಳು: ಜೆಎಸ್‌ಎಸ್ ಮಹದೇವನಗರ- ಶೇ 100, ಗುರುಮಲ್ಲೇಶ್ವರ (ಕಾರ್ಯ)- 100,  ಸಿಟಿಜನ್- 100.  ಕಾರ್ಮೆಲ್- 96, ಲಯನ್ಸ್ - 96,  ರೋಟರಿ- 92, ಗುರುಮಲ್ಲೇಶ್ವರ (ಹಗಿನವಾಳು)- 46, ಗುರುಮಲ್ಲೇಶ್ವರ (ಪಟ್ಟಣ)-75, ಗುರುಮಲ್ಲೇಶ್ವರ (ತಗಡೂರು)- 96, ಗುರುಮಲ್ಲೇಶ್ವರ (ಹೊಸಕೋಟೆ)- 70, ಗುರುಮಲ್ಲೇಶ್ವರ (ಹಲ್ಲರೆ)- 80,  ನಂಜುಂಡೇಶ್ವರ ವಿದ್ಯಾವರ್ಧಕ (ಆಂಗ್ಲ ಮಧ್ಯಮ)- 40, ಬಸವೇಶ್ವರ (ಸಿಂಧುವಳ್ಳಿ)- 70, ಕ್ರೈಸ್ತ (ತಾಂಡವಪುರ)- 97, ಡಿ.ಎಸ್.ಎಸ್ (ನಗರ್ಲೆ)- 45, ಗಂಗಾಧರೇಶ್ವರ (ಕೋಣನೂರು)- 70, ಜೆಎಸ್‌ಎಸ್ ಆಂಗ್ಲ ಮಾಧ್ಯಮ (ಹುಲ್ಲಹಳ್ಳಿ)- 97, ಕನಕದಾಸ (ಕೆ.ಎಸ್.ಹುಂಡಿ)- 55, ಶ್ರೀಕಂಠೇಶ್ವರ (ಹುಲ್ಲಹಳ್ಳಿ)- ಶೇ 90.ಕೃಷ್ಣರಾಜೇಂದ್ರ ಶಾಲೆಗೆ ಶೇ 80 ಫಲಿತಾಂಶ

ಕೆ.ಆರ್.ನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಶೇ 80 ರಷ್ಟು ಫಲಿತಾಂಶ ಪಡೆದಿದೆ.ಪರೀಕ್ಷೆ ಎದುರಿಸಿದ 98 ವಿದ್ಯಾರ್ಥಿಗಳಲ್ಲಿ 78 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಉನ್ನತ ಶ್ರೇಣಿಯಲ್ಲಿ 2, ಪ್ರಥಮ ದರ್ಜೆಯಲ್ಲಿ 17, ದ್ವಿತೀಯ ದರ್ಜೆಯಲ್ಲಿ 13 ಮತ್ತು ತೃತೀಯ ದರ್ಜೆಯಲ್ಲಿ 48 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅದರಂತೆ ದಿನೇಶ್ ಪವಾರ್ ಶೇ. 87.68, ಚಂದ್ರಶೇಖರ್ ಶೇ. 85.92 ರಷ್ಟು ಅಂಕ ಗಳಿಸಿ ಶಾಲೆಗೆ ಮೊದಲಿಗರಾಗಿದ್ದಾರೆ.ಕಳೆದೆರಡು ವರ್ಷಗಳ ಹಿಂದೆ ಶೇ 40 ಕ್ಕೂ ಕಡಿಮೆ ಫಲಿತಾಂಶ ಪಡೆಯುತ್ತಿದ್ದ ಈ ಶಾಲೆ ಕಳೆದ ಸಾಲಿನಲ್ಲಿ ಶೇ. 70ರಷ್ಟು ಫಲಿತಾಂಶ ಪಡೆದಿತ್ತು. ಈ ಬಾರಿ ಮತ್ತಷ್ಟು ಸುಧಾರಣೆ ಕಂಡಿದೆ.266 ವಿದ್ಯಾರ್ಥಿಗಳಲ್ಲಿ 234 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಉನ್ನತ ಶ್ರೇಣಿಯಲ್ಲಿ 3, ಪ್ರಥಮ ಸ್ಥಾನದಲ್ಲಿ 75, ದ್ವಿತೀಯ ಸ್ಥಾನದಲ್ಲಿ 62 ಮತ್ತು ತೃತೀಯ ಸ್ಥಾನದಲ್ಲಿ 94 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಅದರಂತೆ ನಿತ್ಯಶ್ರೀ ಎಂ.ಎನ್. ಶೇ. 90.40, ಶಿಲ್ಪ ಎನ್. ಶೇ. 86.52, ಅಲ್ಮಾಸ್ ಬಾನು ಶೇ.85.32 ರಷ್ಟು ಅಂಕ ಗಳಿಸಿದ್ದಾರೆ.ವಿವಿಧ ಶಾಲೆಗಳ ಫಲಿತಾಂಶ: ತಾಲ್ಲೂಕಿನ ಹೆಬ್ಸೂರು ಸರ್ಕಾರಿ ಪ್ರೌಢಶಾಲೆ ಶೇ. 97.67, ಸಿ.ವಿ.ಗುಡಿ ಸರ್ಕಾರಿ ಪ್ರೌಢಶಾಲೆ ಶೇ. 94.87, ಅಂಕನಹಳ್ಳಿ (ಸಾ.ಗ್ರಾ) ಸರ್ಕಾರಿ ಪ್ರೌಢಶಾಲೆ ಶೇ. 75, ಹೊಸೂರು ಸರ್ಕಾರಿ ಪ್ರೌಢಶಾಲೆ 89.28, ಡಿ.ಕೆ.ಕೊಪ್ಪಲು ಸರ್ಕಾರಿ ಪ್ರೌಢಶಾಲೆ 96.5, ಬಂಢಹಳ್ಳಿ ಸರ್ಕಾರಿ ಪ್ರೌಢಶಾಲೆ ಶೇ.89.47, ಕೆ.ಆರ್.ನಗರ ಬನ್ನಿಮಂಟಪ ಸರ್ಕಾರಿ ಪ್ರೌಢಶಾಲೆ ಶೇ.85, ಚುಂಚನಕಟ್ಟೆ ಬಾಲಜಗತ್ ಪ್ರೌಢಶಾಲೆ ಶೇ.100, ಹೊಸೂರು ಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆ ಶೇ. 78.04, ಕೆ.ಆರ್.ನಗರ ಲಿಲ್ಲಾ ಪ್ರೌಢಶಾಲೆ ಶೇ.91.66, ಕೆ.ಆರ್.ನಗರ ಅರ್ಕೇಶ್ವರ ಪ್ರೌಢಶಾಲೆ ಶೇ.64.28, ಸಾಲಿಗ್ರಾಮ ಮೊರಾರ್ಜಿ ವಸತಿ ಶಾಲೆ ಶೇ.94.87, ದೊಡ್ಡೇಕೊಪ್ಪಲು ಸರ್ಕಾರಿ ಪ್ರೌಢಶಾಲೆ ಶೇ.86.36, ಕೆ.ಆರ್.ನಗರ ಮಾದಪ್ಪ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿವೆ.ಕನ್ನಡದಲ್ಲಿ ಉತ್ತಮ ಸಾಧನೆ

ಸಾಲಿಗ್ರಾಮ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಪಟ್ಟಣದ ವೆಾರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ರಾಜೇಶ್ವರಿ 124, ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಟಿ.ಸಿ.ಮುತ್ತು 124 ಹಾಗೂ ಸೇಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಡಿ.ಬಿ. ಸ್ಫೂರ್ತಿ 123 ಅಂಕ ಪಡೆದ ಸಾಧನೆ ಮಾಡಿದ್ದಾರೆ.ಟಿಎನ್‌ಎನ್ ಶಾಲೆಗೆ ಶೇ 100 ಫಲಿತಾಂಶ

ಎಚ್.ಡಿ.ಕೋಟೆ: ತಾಲ್ಲೂಕಿನ ಹಂಪಾಪುರ ಜಿನ್ನಹಳ್ಳಿ ರಸ್ತೆಯಲ್ಲಿರುವ ಟಿಎನ್‌ಎನ್ ಆದರ್ಶ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿದೆ. ಎಂ.ಮೀನಾಕ್ಷಿ 525 (ಕನ್ನಡದಲ್ಲಿ-124), ಹರ್ಷಿತಾ 510, ರೇವತಿ 439, ಪಾರ್ಥ ಸಾರಥಿ 452, ಸೌಭಾಗ್ಯ 398 ಅಂಕ ಪಡೆದು ಶಾಲೆಗೆ ಮೊದಲಿಗರಾಗಿದ್ದಾರೆ.ಸ್ಫೂರ್ತಿ ತಾಲ್ಲೂಕಿಗೆ ಪ್ರಥಮ

ಪಿರಿಯಾಪಟ್ಟಣ: ಪಟ್ಟಣದ ಪುಷ್ಪ ವಿದ್ಯಾ ಸಂಸ್ಥೆ ವಿದ್ಯಾರ್ಥಿನಿ ಸ್ಫೂರ್ತಿ 10ನೇ ತರಗತಿಯ ಪರೀಕ್ಷೆಯಲ್ಲಿ 601 (ಶೇ. 96.16) ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರೇವಣ್ಣ ಅವರ ಪುತ್ರಿ ಸ್ಫೂರ್ತಿ ಈ ಸಾಧನೆ ಮಾಡಿದ್ದಾರೆ.

ತಾಲ್ಲೂಕಿನ ಯೋಗಿನಾರೆಯಣ ವಿದ್ಯಾ ಸಂಸ್ಥೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry