ಎಸ್‌ಐಎ–ಟಾಟಾ ‘ವಿಮಾನಯಾನ’ ಮೈತ್ರಿ

7

ಎಸ್‌ಐಎ–ಟಾಟಾ ‘ವಿಮಾನಯಾನ’ ಮೈತ್ರಿ

Published:
Updated:

ನವದೆಹಲಿ (ಪಿಟಿಐ): ಹದಿನೆಂಟು ವರ್ಷಗಳ ಹಿಂದೆ ವಿಮಾನಯಾನ ಸಂಸ್ಥೆ ಆರಂಭಿಸಲು ಯತ್ನಿಸಿ ವಿಫಲವಾಗಿದ್ದ ಟಾಟಾ ಸಮೂಹ, ಆ ಕನಸನ್ನು ಕಡೆಗೂ ನನಸು ಮಾಡಿಕೊಳ್ಳಲು ಸಿದ್ಧವಾಗಿದೆ. ಭಾರತದಲ್ಲಿ ವಿಮಾನಯಾನ ಸಂಸ್ಥೆ ಸ್ಥಾಪನೆಗಾಗಿ ಟಾಟಾ ಸಮೂಹ ಸಿಂಗಪುರ ಏರ್‌ಲೈನ್ಸ್‌ ಕಂಪೆನಿ (ಎಸ್‌ಐಎ) ಜತೆ ಕೈಜೋಡಿಸಿದ್ದು, 10 ಕೋಟಿ ಅಮೆರಿಕನ್‌ ಡಾಲರ್‌ (ಈಗಿನ ಲೆಕ್ಕದಲ್ಲಿ ರೂ.618 ಕೋಟಿ) ಬಂಡವಾಳ ತೊಡಗಿ ಸಲು ಸಜ್ಜಾಗಿದೆ.ಉಪ್ಪು–ಉಕ್ಕು ತಯಾರಿಕೆಯಿಂದ ಹಿಡಿದು ಸಾಫ್ಟ್‌ವೇರ್‌ ಕಂಪೆನಿವರೆಗೂ ತೊಡಗಿಸಿಕೊಂಡಿರುವ ಟಾಟಾ ಸಮೂಹ, ಇದೀಗ ವಿಮಾನಯಾನ ಉದ್ಯಮಕ್ಕೂ ಕಾಲಿಡಲಿದೆ. ನೂತನ ವಿಮಾನಯಾನ ಕಂಪೆನಿಯಲ್ಲಿ ಟಾಟಾ ಸಮೂಹ ಶೇ 51ರಷ್ಟು ಮತ್ತು ಸಿಂಗಪುರ ಏರ್‌ಲೈನ್ಸ್‌ ಶೇ 49ರಷ್ಟು ಷೇರುಪಾಲು ಹೊಂದಿರಲಿವೆ. ಎರಡೂ ಸಂಸ್ಥೆಗಳು ಆರಂಭಿಕ ಬಂಡವಾಳವಾಗಿ 10 ಕೋಟಿ ಡಾಲರ್‌ ತೊಡಗಿಸುತ್ತಿದ್ದು, ಮುಂದಿನ ವರ್ಷ ಕಂಪೆನಿಯ ವಿಮಾನ ಹಾರಾಟ ಆರಂಬಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry