ಎಸ್‌ಕೆಎಸ್ ಮೈಕ್ರೊಫೈನಾನ್ಸ್: ಓಂಬುಡ್ಸ್‌ಮನ್ ನೇಮಕ

7

ಎಸ್‌ಕೆಎಸ್ ಮೈಕ್ರೊಫೈನಾನ್ಸ್: ಓಂಬುಡ್ಸ್‌ಮನ್ ನೇಮಕ

Published:
Updated:

ಹೈದರಾಬಾದ್ (ಪಿಟಿಐ): ಕಿರು ಹಣಕಾಸು ಸಂಸ್ಥೆ ಎಸ್‌ಕೆಎಸ್   ಮೈಕ್ರೊಫೈನಾನ್ಸ್, ಸಾಲಗಾರರ ಕುಂದುಕೊರತೆ ಆಲಿಸಲು ವರ್ಗೀಸ್ ಜಾಕೊಬ್ ಅವರನ್ನು ಓಂಬುಡ್ಸಮನ್ ಆಗಿ ನೇಮಿಸಿದೆ.ಈ ನೇಮಕವು ತಕ್ಷಣದಿಂದಲೇ ಜಾರಿಗೆ ಬಂದಿದೆ. ಗ್ರಾಹಕರ ಹಿತರಕ್ಷಣೆ ಮತ್ತು ಅವರ ಅಹವಾಲು ಆಲಿಸುವಿಕೆಯಲ್ಲಿ ವರ್ಗೀಸ್ ಅವರು ಸಂಸ್ಥೆಗೆ ನೆರವಾಗಲಿದ್ದಾರೆ. ಈ ನೇಮಕವು ಗ್ರಾಹಕರ ಹಿತರಕ್ಷಣೆಯಲ್ಲಿ ಸಂಸ್ಥೆಯು ಮುಂಚೂಣಿಯಲ್ಲಿ ಇರುವುದರ ಬದ್ಧತೆಯ ಪ್ರತೀಕವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಆರ್. ರಾವ್ ತಿಳಿಸಿದ್ದಾರೆ.  ಗ್ರಾಹಕರಿಗೆ ನೆರವಾಗಲು ಎಂಟು ಭಾಷೆಗಳಲ್ಲಿ ಕರೆ ದರ ಮುಕ್ತ ಸಹಾಯವಾಣಿಯನ್ನೂ ಆರಂಭಿಸಲಾಗಿದೆ.ಆರ್ಥಿಕ ಉದಾರೀಕರಣದ ಲಾಭವು ಗ್ರಾಮೀಣ ಪ್ರದೇಶದ ಅವಕಾಶ ವಂಚಿತ ಜನರಿಗೆ ತಲುಪುವಂತೆ ಮಾಡುವಲ್ಲಿ ಕಿರು  ಹಣಕಾಸು ವ್ಯವಸ್ಥೆಯು ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ವರ್ಗೀಸ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry