ಎಸ್‌ಡಬ್ಲ್ಯುಆರ್‌ಗೆ ಜಯ

7

ಎಸ್‌ಡಬ್ಲ್ಯುಆರ್‌ಗೆ ಜಯ

Published:
Updated:

ಬೆಂಗಳೂರು: ಎಸ್‌ಡಬ್ಲ್ಯುಆರ್ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಸಾಧಿಸಿದರು.ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಸ್‌ಡಬ್ಲ್ಯುಆರ್ 29-31, 25-18, 28-26, 25-22 ರಲ್ಲಿ ಬಿಎಸ್‌ಎನ್‌ಎಲ್ ತಂಡವನ್ನು ಮಣಿಸಿತು.ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ಎಸ್‌ಡಬ್ಲ್ಯುಆರ್ ತಂಡದವರು ತಿರುಗೇಟು ನೀಡಿದರು. 95 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಚಿಸ್ತಿ ಮತ್ತು ಇಮ್ತಿಯಾಜ್ ಅಹ್ಮದ್ ವಿಜಯಿ ತಂಡದ ಪರ ಪ್ರಭಾವಿ ಪ್ರದರ್ಶನ ನೀಡಿದರು.ಶುಕ್ರವಾರ ನಡೆಯುವ ಪಂದ್ಯದಲ್ಲಿ ಕೆಎಸ್‌ಪಿ ಮತ್ತು ಪೋಸ್ಟಲ್ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry