ಎಸ್‌ಡಿಎಂಸಿಯಲ್ಲಿ ಅಧಿಕಾರಿಗಳ ಮೇಲಾಟ: ಅಸಮಾಧಾನ

ಶುಕ್ರವಾರ, ಜೂಲೈ 19, 2019
22 °C

ಎಸ್‌ಡಿಎಂಸಿಯಲ್ಲಿ ಅಧಿಕಾರಿಗಳ ಮೇಲಾಟ: ಅಸಮಾಧಾನ

Published:
Updated:

ಕೋಲಾರ: ಜಿಲ್ಲೆಯ ಹಲವು ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ರಚಿಸದೆ ಮುಖ್ಯ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದನ್ನು ನಿಯಂತ್ರಿಸುವಲ್ಲಿ ಡಿಡಿಪಿಐ ವಿಫಲರಾಗಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ದೂರಿದ ಘಟನೆ ಗುರುವಾರ ನಡೆಯಿತು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ತೊಗಲಘಟ್ಟದ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರನ್ನು ಅವಧಿಗೆ ಮುಂಚೆಯೇ ಸ್ಥಾನದಿಂದ ತೆಗೆಯಲಾಗಿದೆ. ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಮುಖ್ಯ ಶಿಕ್ಷಕರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.ವಕ್ಕಲೇರಿ ಸರ್ಕಾರಿ ಶಾಲೆಯ ಎಸ್‌ಡಿಎಂಸಿಗೆ ಅನರ್ಹರನ್ನು ಅಧ್ಯಕ್ಷರನ್ನಾಗಿ ಮಾಡಿರುವ ವಿವಾದವು ಕೂಡ ಅಂತ್ಯ ಕಾಣದೇ ಉಳಿದಿದೆ. ಎಸ್‌ಡಿಎಂಸಿಗಳ ನಿರ್ವಹಣೆ ಇಲ್ಲದೆ ಶಾಲೆಗಳು ಮುಖ್ಯ ಶಿಕ್ಷಕರ ಮತ್ತು ಅಧಿಕಾರಿಗಳ ಹಿಡಿತದಲ್ಲಿ ನಲುಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ಆರೋಪಕ್ಕೆ ಉತ್ತರಿಸಿದ ಬ್ಲಾಕ್ ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ್, ವಕ್ಕಲೇರಿಯ ಶಾಲೆಯಲ್ಲಿ ಸಮಿತಿಯ ಸಭೆ ಕರೆದ ಸಂದರ್ಭದಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲಿಲ್ಲ. ಹೀಗಾಗಿ ಅಲ್ಲಿ ಸಮಿತಿ ರಚನೆಯ ಕೆಲಸ ನೆನಗುದಿಗೆ ಬಿದ್ದಿದೆ ಎಂದರು.ಶಾಲೆಗಳಲ್ಲಿ ಮಕ್ಕಳಿಗೆ ಕರಾಟೆ ಕಲಿಸಬೇಕಾಗಿದೆ ಎಂದು ಪ್ರಸ್ತಾಪಿಸಿದ ಸಮಿತಿ ಅಧ್ಯಕ್ಷೆ ಸಿಮೋಲ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್, ಕರಾಟೆ ಕಲಿಸುವ ಸಂದರ್ಭದಲ್ಲಿ ಮಕ್ಕಳು ಏಟು ತಿಂದರೆ ಪೋಷಕರ ಕೋಪಕ್ಕೆ ಶಿಕ್ಷಕರು ಗುರಿಯಾಗಬೇಕಾಗುತ್ತದೆ. ಹೀಗಾಗಿ ಕರಾಟೆ ಕಲಿಸುವುದು ಕಷ್ಟವಾಗುತ್ತದೆ ಎಂದರು.ಹಾಸ್ಟೆಲ್ ವಾರ್ಡನ್‌ಗಳಾಗಿ ನಿಯೋಜನೆಗೊಂಡಿರುವ ಶಿಕ್ಷಕರನ್ನು ಹಿಂದಕ್ಕೆ ಪಡೆಯುವ ಬಗ್ಗೆ, ನಾಗಾರ್ಜುನ ಕನ್‌ಸ್ಟ್ರಕ್ಷನ್ ಸಂಸ್ಥೆ ವತಿಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಜಿಪಂ ಉಪಾಧ್ಯಕ್ಷೆ ರತ್ನಮ್ಮ, ಉಪಕಾರ್ಯದರ್ಶಿ ಬದನೂರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry