ಎಸ್‌ಡಿಎ ನೇಮಕಾತಿ: ಸಂದರ್ಶನ ಅವಶ್ಯವೇ?

7

ಎಸ್‌ಡಿಎ ನೇಮಕಾತಿ: ಸಂದರ್ಶನ ಅವಶ್ಯವೇ?

Published:
Updated:

ಕರ್ನಾಟಕ ಲೋಕಸೇವಾ ಆಯೋಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು, ಗ್ರಾಮ ಪಂಚಾಯತ್‌ಗಳಲ್ಲಿ ಖಾಲಿ ಇರುವ 1750 ಎಸ್‌ಡಿಎ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡುತ್ತಿರುವುದು ಸಾವಿರಾರು ನಿರುದ್ಯೋಗ ಯುವಕರಿಗೆ ಸಂತೋಷದ ಸಂಗತಿ.

ಆದರೆ ನೇಮಕಾತಿಗೆ 400 ಅಂಕಗಳ ಲಿಖಿತ ಪರೀಕ್ಷೆ ಹಾಗೂ 50 ಅಂಕಗಳ ಸಂದರ್ಶನವನ್ನು ನಿಗದಿಪಡಿಸಲಾಗಿದೆ.ಈ ಹಿಂದೆ ಕೆಪಿಎಸ್‌ಸಿಯೇ ನೇಮಕ ಮಾಡಿದ ಸಾಮಾನ್ಯ ಎಸ್‌ಡಿಎ, ಎಫ್‌ಡಿಎ ಹಾಗೂ ಪಿಡಿಒ. ದಂತಹ ಅಧಿಕಾರಿ ಹುದ್ದೆಗಳನ್ನು ಸಂದರ್ಶನ ರಹಿತವಾಗಿ,

ಪಾರದರ್ಶಕತೆಯಿಂದ ನೇಮಕಾತಿ ಮಾಡಿದ್ದು ಈ ಎಸ್‌ಡಿಎ ಹುದ್ದೆ ನೇಮಕಾತಿಗೆ ಸಂದರ್ಶನ ಅವಶ್ಯಕವೇ? ಎಂಬ ಅನುಮಾನಾಸ್ಪದ ಪ್ರಶ್ನೆ ಸಾವಿರಾರು ಉದ್ಯೋಗ ಆಕಾಂಕ್ಷಿಗಳದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry