ಭಾನುವಾರ, ಡಿಸೆಂಬರ್ 8, 2019
25 °C

ಎಸ್‌ಬಿಎಂ: ಎರಡು ಹೊಸ ಸೇವೆ

Published:
Updated:
ಎಸ್‌ಬಿಎಂ: ಎರಡು ಹೊಸ ಸೇವೆ

ಬೆಂಗಳೂರು: ಬ್ಯಾಂಕಿನ 98ನೇ ಸಂಸ್ಥಾಪನಾ ದಿನಾಚರಣೆ ಮತ್ತು ಗಾಂಧಿ ಜಯಂತಿಯ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ಎರಡು ಹೊಸ ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಿದೆ.

ಎಸ್‌ಎಂಎಸ್ ಅನ್‌ಹ್ಯಾಪಿ: ಬ್ಯಾಂಕಿನ ಯಾವುದೇ ಸೇವೆಗಳ ಬಗ್ಗೆ ದೂರುಗಳಿದ್ದಲ್ಲಿ, ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ `ಅನ್‌ಹ್ಯಾಪಿ (್ಠ್ಞ) ಎಂದು ಟೈಪ್ ಮಾಡಿ 9900020002 ಸಂಖ್ಯೆಗೆ ಕಳುಹಿಸಬಹುದು.ಈ ದೂರುಗಳು ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿರುವ ಬ್ಯಾಂಕಿನ ವಿಶೇಷ ನಿಯಂತ್ರಣಾ ಕೊಠಡಿ `ಹ್ಯಾಪಿ ರೂಂ~ನಲ್ಲಿ ದಾಖಲಾಗುತ್ತವೆ. ತಕ್ಷಣವೇ ಈ ದೂರನ್ನು ಸಂಬಂಧಪಟ್ಟ ಶಾಖೆಗಳಿಗೆ ವರ್ಗಾಯಿಸಲಾಗುತ್ತದೆ. ಅಲ್ಲದೆ, ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ದೂರು ಸ್ವೀಕೃತಿ ಸಂದೇಶ ಕಳುಹಿಸಲಾಗುತ್ತದೆ ಹಾಗೂ ನಿಯಂತ್ರಣ ಕೊಠಡಿಯಿಂದ ಕರೆ ಮಾಡಿ ದೂರಿನ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುತ್ತದೆ.ಆನ್‌ಲೈನ್ ಸಾಲದ ಅರ್ಜಿ:  ಬ್ಯಾಂಕಿನ ಗ್ರಾಹಕರು ಗೃಹ, ವಿದ್ಯಾಭ್ಯಾಸ, ಕಾರು ಮತ್ತು `ಎಂಎಸ್‌ಎಂಇ~ ಸಾಲಗಳಿಗಾಗಿ ಇನ್ನು ಮುಂದೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಬ್ಯಾಂಕಿನ ಅಧಿಕೃತ ವೆಬ್‌ತಾಣ ಡಿಡಿಡಿ.ಠಿಠಿಛಿಚಿಚ್ಞಟ್ಛಞಟ್ಟಛಿ.್ಚಟ.ಜ್ಞಿಗೆ ಲಾಗಿನ್ ಆಗುವ ಮೂಲಕ ಸಾಲ ಪಡೆಯಬೇಕಿರುವ ಶಾಖೆಗಳನ್ನು ಆಯ್ದುಕೊಂಡು ಸಾಲದ ಅರ್ಜಿಯನ್ನು ಭರ್ತಿ ಮಾಡಬಹುದು.ಇವರೆಡು ಯೋಜನೆಗಳು ಅಕ್ಟೋಬರ್ 2 ರಿಂದ ಅಧಿಕೃತವಾಗಿ ಜಾರಿಯಾಗಲಿದೆ. ಗ್ರಾಹಕರ ಕುಂದುಕೊರತೆಗಳನ್ನು ಕಾಗದ ರಹಿತ `ಹಸಿರು ವ್ಯವಸ್ಥೆ~ ಮೂಲಕ ದಾಖಲಿಸುವ ಈ ಸೌಲಭ್ಯವು ಪರಿಸರ ಸ್ನೇಹಿ ಮತ್ತು ಗ್ರಾಹಕ ಸ್ನೇಹಿ ಎಂದು `ಎಸ್‌ಬಿಎಂ~ನ ಪ್ರಧಾನ ವ್ಯವಸ್ಥಾಪಕ ದಿಲೀಪ್ ಮಾವಿನ ಕುರ್ವೆ ಶನಿವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)