ಎಸ್‌ಬಿಎಂ, ಏರ್‌ಇಂಡಿಯಾ ತಂಡಗಳು ಮುಂದಿನ ಹಂತಕ್ಕೆ

7

ಎಸ್‌ಬಿಎಂ, ಏರ್‌ಇಂಡಿಯಾ ತಂಡಗಳು ಮುಂದಿನ ಹಂತಕ್ಕೆ

Published:
Updated:

ಕೊಲ್ಹಾರ: ಎಸ್.ಬಿ.ಎಂ. ಬೆಂಗಳೂರು ತಂಡ  ಹಾಗೂ ಮುಂಬೈಯ ಏರ್ ಇಂಡಿಯಾ ತಂಡಗಳು ಇಲ್ಲಿ ಭಾನುವಾರ ಆರಂಭಗೊಂಡ ಸ್ವಾಮಿ ವಿವೇಕಾನಂದ ಯುವಕ ಮಂಡಳಿ ಆಶ್ರಯದ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಜಯ ಸಾಧಿಸಿ ಮುಂದಿನ ಹಂತಕ್ಕೆ ಜಿಗಿದವು.ರೆಡ್ ಆರ್ಮೀ ದೆಹಲಿ ತಂಡವನ್ನು 6-3 ಪಾಯಿಂಟ್‌ಗಳಿಂದ ಎಸ್.ಬಿ.ಎಂ ಮಣಿಸಿದರೆ ಏರ್ ಇಂಡಿಯಾ, ಹೈದರಾಬಾದ್‌ನ ಆಂಧ್ರ ಬ್ಯಾಂಕ್ ತಂಡವನ್ನು 17-14 ಪಾಯಿಂಟ್‌ಗಳಿಂದ ಸದೆಬಡಿಯಿತು. ಇನ್ನೊಂದು ಭೋಪಾಲ್‌ನ ಗ್ರೀನ್ ಆರ್ಮಿ ತಂಡ ಪುಣೆಯ ಬಿ.ಇ.ಜಿ. ತಂಡವನ್ನು 36-21ಪಾಯಿಂಟ್‌ಗಳಿಂದ ಸೋಲಿಸಿತು.

ಗ್ರಾಮದಲ್ಲಿ ಕಬಡ್ಡಿ ಕಲರವ:ಕೆನೆ ಮೊಸರಿಗೆ ಖ್ಯಾತಿ ಪಡೆದಿರುವ ಕೊಲ್ಹಾರದ ಗಂಡು ಮಕ್ಕಳ ಸರಕಾರಿ ಶಾಲೆ ಆವರಣದಲ್ಲಿ ನಡೆಯುತ್ತಿರುವ ಟೂರ್ನಿ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಕಬಡ್ಡಿ ಪ್ರಿಯರು ಆಗಮಿಸುತ್ತಿದ್ದು ಆರು ಅಂತಸ್ತಿನ ಗ್ಯಾಲರಿ ಮಧ್ಯೆ ಎರಡು ಮೈದಾನಗಳಲ್ಲಿ `ಮಣ್ಣಿನ ಮಕ್ಕಳ~ ರೋಚಕ ಸೆಣಸಾಟಕ್ಕೆ ಚಪ್ಪಾಳೆ, ಶಿಳ್ಳೆಯ ಮೂಲಕ ಹುರಿದುಂಬಿಸುತ್ತಿದ್ದಾರೆ.ನೇತಾಜಿ ಸುಭಾಷಚಂದ್ರ ಭೋಸ್ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಗ್ರಾಮದೇವತೆ

ಯಲ್ಲಮ್ಮದೇವಿ ಜಾತ್ರೆಯ ಅಂಗವಾಗಿ ಟೂರ್ನಿಯನ್ನು ಆಯೋಜಿಸಲಾಗಿದೆ.`ಆಟಗಾರರಿಗೆ ಮನೆ ಆತಿಥ್ಯ~

ಕಬಡ್ಡಿ ಆಡಲು ಕೊಲ್ಹಾರಕ್ಕೆ ಬಂದಿರುವ ದೇಶದ ನಾನಾ ಭಾಗಗಳ ಆಟಗಾರರಿಗೆ ಇಲ್ಲಿನ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ವಿಶೇಷ ಆತಿಥ್ಯವನ್ನು ಕಲ್ಪಿಸಿದ್ದಾರೆ.ವಿವಿಧ ಭಾಷೆಗಳನ್ನಾಡುವ ಪ್ರದೇಶದಿಂದ ಆಟಗಾರರು ಬಂದಿದ್ದಾರೆ. ಅವರ ಭಾಷೆ ತಿಳಿಯದಿದ್ದರೂ ಊಟ, ವಸತಿ ಮತ್ತಿತರ ಸೌಕರ್ಯಗಳನ್ನು ಒದಗಿಸಿ ಕನ್ನಡಿಗರ ಅತಿಥಿ ಸತ್ಕಾರದ `ರುಚಿ~ಯನ್ನು ತೋರಿಸುತ್ತಿದ್ದಾರೆ. ಜನರ ಔದಾರ್ಯಕ್ಕೆ ಆಟಗಾರರು ಕೂಡ ಮೆಚ್ಚುಗೆ ಸೂಚಿಸಿದ್ದು ಸಂತೃಪ್ತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry