ಸೋಮವಾರ, ಜೂನ್ 14, 2021
22 °C

ಎಸ್‌ಬಿಎಂ ಜೈನ್‌ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೈಫ್‌ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಎಸ್‌ಬಿಎಂ ಜೈನ್‌ ಕಾಲೇಜು ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ ಕಾಲೇಜು ಲೀಗ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ನಲ್ಲಿ ಸುಲಭ ಜಯ ದಾಖಲಿಸಿದರು.ಬುಧವಾರ ನಡೆದ ಪಂದ್ಯದಲ್ಲಿ ಜೈನ್‌ ತಂಡ 102-40 ಪಾಯಿಂಟ್‌ಗಳಿಂದ ಎಂವಿಐಟಿ ಕಾಲೇಜು ತಂಡವನ್ನು ಮಣಿಸಿತು. ಅದ್ಭುತ ಆಟ ತೋರಿದ ಕೈಫ್‌ 47 ಪಾಯಿಂಟ್‌ಗಳನ್ನು ತಂದಿತ್ತರು. ಪರ್ವೇಜ್‌ 13 ಪಾಯಿಂಟ್‌ ಗಳಿಸಿದರು.ವಿರಾಮದ ವೇಳೆಗೆ ವಿಜಯಿ ತಂಡ 60-14 ರ ಭಾರಿ ಅಂತರದ ಮುನ್ನಡೆ ಪಡೆದಿತ್ತು. ಎಂವಿಐಟಿ ಪರ ಸುನಿಲ್‌ (14) ಹಾಗೂ ಸಿದ್ಧಾರ್ಥ್‌ (13) ಮಿಂಚಿದರು. ಸುರಾನಾ ಕಾಲೇಜು ತಂಡ 88-62 ರಲ್ಲಿ ಆರ್‌ವಿಸಿಇ ವಿರುದ್ಧ ಜಯ ಸಾಧಿಸಿತು. ಕ್ಲಿಂಟನ್‌ (24) ಮತ್ತು ಗಗನ್‌ (21) ಸುರಾನಾ ತಂಡದ ಗೆಲುವಿಗೆ ಕಾರಣರಾದರು.ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ನ್ಯೂ ಹೊರೈಜನ್‌ ಎಂಜಿನಿಯರಿಂಗ್‌ ಕಾಲೇಜು 60-31 ರಲ್ಲಿ ಪಿಇಎಸ್‌ಐಟಿ ಎದುರೂ, ಬಿಎಂಎಸ್‌ಸಿಇ 36-17 ರಲ್ಲಿ ಸಿಂಧಿ ಕಾಲೇಜು ಮೇಲೂ ಜಯ ಪಡೆದವು.ಮಹಿಳೆಯರ ವಿಭಾಗದ ಪಂದ್ಯದಲ್ಲಿ ಸಾಗರಿಕಾ (29) ತೋರಿದ ಉತ್ತಮ ಆಟದ ನೆರವಿನಿಂದ ಮೌಂಟ್‌ ಕಾರ್ಮೆಲ್‌ ತಂಡ 60-54 ರಲ್ಲಿ ಸೇಂಟ್‌       ಜೋಸೆಫ್ಸ್‌ ಕಾಮರ್ಸ್‌ ಕಾಲೇಜು ತಂಡವನ್ನು ಸೋಲಿಸಿತು. ಇನ್ನೊಂದು ಪಂದ್ಯದಲ್ಲಿ ಎಸ್‌ಬಿಎಂ ಜೈನ್‌ 43-39 ರಲ್ಲಿ ಆರ್‌ವಿಸಿಇ ವಿರುದ್ಧ ಜಯ      ಸಾಧಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.