ಎಸ್‌ಬಿಎಂ: ರೂ. 155 ಕೋಟಿ ಲಾಭ

7

ಎಸ್‌ಬಿಎಂ: ರೂ. 155 ಕೋಟಿ ಲಾಭ

Published:
Updated:
ಎಸ್‌ಬಿಎಂ: ರೂ. 155 ಕೋಟಿ ಲಾಭ

ಬೆಂಗಳೂರು: ಡಿಸೆಂಬರ್ 31ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೂರನೆಯ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂ    ಬರ್)  ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ರೂ155 ಕೋಟಿ ನಿವ್ವಳ ಲಾಭ ದಾಖಲಿಸಿದೆ.ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ರೂ111 ಕೋಟಿ ನಿವ್ವಳ ಲಾಭ ದಾಖಲಾಗಿತ್ತು. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಲಾಭಾಂಶದಲ್ಲಿ ಶೇ 40  ಮತ್ತು ವಾರ್ಷಿಕವಾಗಿ ಶೇ 34ರಷ್ಟು ಪ್ರಗತಿ ಕಂಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶರದ್ ಶರ್ಮಾ ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ವರಮಾನ ಶೇ 13.19ರಷ್ಟು ಹೆಚ್ಚಿದ್ದು, ರೂ1,616 ಕೋಟಿಗಳಷ್ಟಾಗಿದೆ. ನಿವ್ವಳ ಬಡ್ಡಿ ವರಮಾನ (ಎನ್‌ಐಐ) ಶೇ 11ರಷ್ಟು ಹೆಚ್ಚಿದ್ದು  ರೂ461 ಕೋಟಿಗಳಷ್ಟಾಗಿದೆ. ನಿವ್ವಳ ಬಡ್ಡಿ ಲಾಭ (ಎನ್‌ಐಎಂ) ಶೇ 3.27ರಷ್ಟು ಏರಿಕೆ ಕಂಡಿದೆ.ಪ್ರಮುಖವಾಗಿ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ)  ಶೇ 4.67 ರಿಂದ 3.99ಕ್ಕೆ ತಗ್ಗಿದೆ ಎಂದು ಶರ್ಮಾ ಹೇಳಿದರು.  ಪರಿಷ್ಕೃತ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ) ಯೋಜನೆಯಡಿ ಇದುವರೆಗೆ 37483 ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ರೂ1320 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry