ಎಸ್‌ಬಿಎಂ: ರೂ. 337 ಕೋಟಿ ನಿವ್ವಳ ಲಾಭ

7

ಎಸ್‌ಬಿಎಂ: ರೂ. 337 ಕೋಟಿ ನಿವ್ವಳ ಲಾಭ

Published:
Updated:

ಬೆಂಗಳೂರು: ಡಿಸೆಂಬರ್ ತಿಂಗಳಾಂತ್ಯಕ್ಕೆ ಕೊನೆಗೊಂಡ ಒಂಬತ್ತು ತಿಂಗಳ  ಅವಧಿಗೆ,  ಸ್ಟೇಟ್ ಬ್ಯಾಂಕ್ ಆಫ್ ಮೈಸೂರು  (ಎಸ್‌ಬಿಎಂ) ರೂ. 336.79 ಕೋಟಿಗಳಷ್ಟು ನಿವ್ವಳ ಲಾಭ   ಘೋಷಿಸಿದೆ.

ಹಿಂದಿನ ವರ್ಷ ಇದೇ ಅವಧಿಯ  ರೂ. 322.14 ಕೋಟಿಗಳಷ್ಟು ನಿವ್ವಳ ಲಾಭಕ್ಕೆ ಹೋಲಿಸಿದರೆ, ಇದು ಶೇ  4ರಷ್ಟು ಬೆಳವಣಿಗೆ  ದಾಖಲಿಸಿದೆ. ಮೂರನೆಯ ತ್ರೈಮಾಸಿಕ  ಅಂತ್ಯದ ನಿರ್ವಹಣಾ ಲಾಭವು  ರೂ. 869  ಕೋಟಿಗಳಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯ ನಿರ್ವಹಣಾ ಲಾಭಕ್ಕಿಂತ  ರೂ. 223 ಕೋಟಿ ಗಳಷ್ಟು ಹೆಚ್ಚಳವಾಗಿ  ಶೇ 34 ರಷ್ಟು ವೃದ್ಧಿ ಕಂಡಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಮಾವಿನಕುರ್ವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಬಡ್ಡಿ ವರಮಾನ ವೃದ್ಧಿಯು ಶೇ 14ಕ್ಕಿಂತ ಹೆಚ್ಚಳಗೊಂಡಿದೆ. ಬ್ಯಾಂಕಿನ ಠೇವಣಿಗಳು ರೂ. 39,575 ಕೋಟಿಗಳಷ್ಟಾಗಿದ್ದು,   ವರ್ಷದಿಂದ ವರ್ಷಕ್ಕೆ ಶೇ 10ರಷ್ಟು ಬೆಳವಣಿಗೆ ಕಂಡಿದ್ದರೆ,  ಒಟ್ಟು ಮುಂಗಡಗಳು ರೂ. 32532 ಕೋಟಿಗಳಿಗೆ ತಲುಪಿ, ಶೇ 16ರಷ್ಟು ಹೆಚ್ಚಳ ದಾಖಲಿಸಿದೆ. ಈ ಅವಧಿಯಲ್ಲಿ 12 ಹೊಸ ಶಾಖೆಗಳನ್ನು ಆರಂಭಿಸಲಾಗಿದೆ. ಬ್ಯಾಂಕ್‌ನ ಒಟ್ಟು ಶಾಖೆಗಳ ಸಂಖ್ಯೆ 701ಕ್ಕೆ ತಲುಪಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry