ಎಸ್‌ಬಿಎಂ ಶತಮಾನೋತ್ಸವ ಕೊಡುಗೆ

7

ಎಸ್‌ಬಿಎಂ ಶತಮಾನೋತ್ಸವ ಕೊಡುಗೆ

Published:
Updated:
ಎಸ್‌ಬಿಎಂ ಶತಮಾನೋತ್ಸವ ಕೊಡುಗೆ

ಬೆಂಗಳೂರು: ಶತಮಾನೋತ್ಸವ ಆಚರಣೆ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ಅ. 3ರಿಂದ ಜಾರಿಗೆ ಬರುವಂತೆ ಸಾಲದ ಮೇಲಿನ ಮೂಲ ಬಡ್ಡಿ ದರವನ್ನು ಶೇ 0.25ರಷ್ಟು (10.50ರಿಂದ ಶೇ 10.25ಕ್ಕೆ) ತಗ್ಗಿಸಿದೆ.ಇದರಿಂದ ವೈಯಕ್ತಿಕ, ವಾಹನ, ಗೃಹ, ಚಿನ್ನದ ಮೇಲಿನ ಸಾಲದ ಬಡ್ಡಿ ದರ ತುಸು ಇಳಿಯಲಿವೆ. ಜತೆಗೆ `ಮೈಬ್ಯಾಂಕ್-100~ ಎಂಬ 100 ವಾರಗಳ ವಿಶೇಷ ಠೇವಣಿ ಯೋಜನೆ ಆರಂಭಿಸಲಾಗುತ್ತಿದ್ದು, ಗ್ರಾಹಕರಿಗೆ ಶೇ 9.50ರಷ್ಟು ಬಡ್ಡಿ ದರ (ಹಿರಿಯರಿಗೆ ಶೇ 0.50ರಷ್ಟು ಹೆಚ್ಚುವರಿ) ಲಭಿಸಲಿದೆ. ಇದು ಸೀಮಿತ ಕೊಡುಗೆ. ಅ.3 ರಿಂದ 9 ರವರೆಗೆ ಮಾತ್ರ ಲಭ್ಯ  ಎಂದು `ಎಸ್‌ಬಿಎಂ~ ವ್ಯವಸ್ಥಾಪಕ ನಿರ್ದೇಶಕ ಶರದ್ ಶರ್ಮಾ ತಿಳಿಸಿದ್ದಾರೆ.ಬರ ಹಿನ್ನಲೆಯಲ್ಲಿ ಬ್ಯಾಂಕ್ ಕೃಷಿ ಸಾಲದ ಬಡ್ಡಿ ದರವನ್ನು ಶೇ 7ಕ್ಕೆ ತಗ್ಗಿಸಿದೆ. ಸಾಲ ಮರುಪಾವತಿಗೆ ಹೆಚ್ಚುವರಿಯಾಗಿ ರೈತರಿಗೆ 3ರಿಂದ 5 ವರ್ಷ ಅವಕಾಶ ನೀಡಲಾಗಿದೆ ಎಂದರು. ಶತಮಾನೋತ್ಸವ ಆಚರಣೆಗೆ ಚಾಲನೆ ನೀಡಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ `ಶತಮಾನದ ವಿಶೇಷ ಲಾಂಛನ~ ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry