ಎಸ್‌ಬಿಎಂ ಶತಮಾನೋತ್ಸವ ನಡಿಗೆ

7

ಎಸ್‌ಬಿಎಂ ಶತಮಾನೋತ್ಸವ ನಡಿಗೆ

Published:
Updated:

ಬಳ್ಳಾರಿ: ಸ್ಟೇಟ್ ಬ್ಯಾಂಕ್ ಮೈಸೂರು (ಎಸ್‌ಬಿಎಂ) ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಮಂಗಳವಾರ ಬ್ಯಾಂಕ್‌ನ ಸಿಬ್ಬಂದಿ ಮತ್ತು ಅಧಿಕಾರಿ ಗಳಿಂದ `ಶತಮಾನೋತ್ಸವ ನಡಿಗೆ~ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ನಗರದಲ್ಲಿನ ಎಸ್‌ಬಿಎಂ ಪ್ರಧಾನ ಶಾಖೆಯಿಂದ ಆರಂಭವಾದ ನಡಿಗೆ, ಗಡಗಿ ಚನ್ನಪ್ಪ ವೃತ್ತದ ಮೂಲಕ ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ಪೊಲೀಸ್ ಠಾಣೆ ವೃತ್ತ, ಬಸವೇಶ್ವರ ವೃತ್ತದ ಮೂಲಕ ಪುನಃ ಪ್ರಧಾನ ಶಾಖಾಯ ಆವರಣ ತಲುಪಿತು.ನೂರು ವರ್ಷಗಳ ಹಿಂದೆ ಆರಂಭವಾಗಿರುವ ಬ್ಯಾಂಕ್, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ, ರೈತರಿಗೆ ಅಗತ್ಯ ಸಾಲ ಮತ್ತಿತರ ಸೌಲಭ್ಯ ನೀಡುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದೆ.ಸಾರ್ವಜನಿಕರಲ್ಲಿ ಉಳಿತಾಯ ಮನೋಭಾವ ಮೂಡಿಸುವ ಮಹತ್ವದ ಕೆಲಸ ಮಾಡಿದೆ ಎಂದು ಎಸ್‌ಬಿಎಂನ ಸಹಾಯಕ ಮುಖ್ಯ ವ್ಯವಸ್ಥಾಪಕ ಚಂದ್ರಶೇಖರಯ್ಯ ಹಾಗೂ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಕೆ.ಚೆನ್ನಬಸವಣ್ಣ ತಿಳಿಸಿದರು.ಗ್ರಾಹಕರ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿ ಹೊಂದಿ, ತನ್ನ ಸೇವಾ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಸಾಧ್ಯ ವಾಗಿದೆ. ಮುಂದೆಯೂ ಬ್ಯಾಂಕ್ ತನ್ನ ಸೇವೆ ಮುಂದುವರಿಸಲಿದೆ ಎಂದು ಅವರು ಹೇಳಿದರು.ಬಳ್ಳಾರಿ ಬ್ಯಾಂಕ್ ನೌಕರರ ಒಕ್ಕೂಟದ ಕಾರ್ಯದರ್ಶಿ ಜೆ. ಯೋಗೇಂದ್ರ, ಮುಖ್ಯ ವ್ಯವಸ್ಥಾಪಕ ಶಿವಾನಂದ ನಾಯಕ್, ಅನಂತ ಪೈ ಮತ್ತಿತರರು ಬ್ಯಾಂಕ್‌ನ ತ್ವರಿತ ಸೇವೆ ಹಾಗೂ ಜನಪರ ಕಾರ್ಯ ಚಟುವಟಿಕೆ ಗಳು ಶ್ಲಾಘನೀಯ ಎಂದರು.ಬ್ಯಾಂಕ್ ಯೂನಿಯನ್‌ನ ಹಂಪಯ್ಯ, ನಾಗರಾಜ ನಾಯಕ್, ಮೋದಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದಾಗಿ ನೌಕರರು ಪ್ರತಿಜ್ಞೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry