ಬುಧವಾರ, ಏಪ್ರಿಲ್ 14, 2021
23 °C

ಎಸ್‌ಬಿಐ ಆರ್ಥಿಕ ಅಭಿವೃದ್ಧಿಗೆ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಲಿಂಗಪುರ: ಭಾರತೀಯ ಸ್ಟೇಟ್ ಬ್ಯಾಂಕಿನ ಅಮೃತ ವರ್ಷಾಚರಣೆ ಸಂದರ್ಭದಲ್ಲಿ ಬ್ಯಾಂಕಿನ 14430ನೇ ಶಾಖೆ ಮಹಾಲಿಂಗಪುರದಲ್ಲಿ ಆರಂಭ ಗೊಂಡಿದ್ದು ಈ ಶಾಖೆ ಮಹಾಲಿಂಗಪುರ ಮತ್ತು ಸುತ್ತಲಿನ 40 ಗ್ರಾಮಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗ ಲಿದೆ ಎಂದು ಬೆಂಗಳೂರಿನ ಎಸ್‌ಬಿಐ ಪ್ರಧಾನ ವ್ಯವಸ್ಥಾಪಕ ಕೆ.ಎಂ. ತ್ರಿವೇದಿ ಹೇಳಿದರು.ಇಲ್ಲಿಯ ಎಪಿಎಂಸಿ ಮುಖ್ಯ ರಸ್ತೆಯಲ್ಲಿ ಆರಂಭಗೊಂಡ ಎಸ್‌ಬಿಐ ನೂತನ ಶಾಖೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಾಗಿ ಗ್ರಾಹಕರ ಬೇಡಿಕೆಯಿತ್ತು. ಈಗ ಈ ಭಾಗದ ಜನರ ಬೇಡಿಕೆ ಈಡೇರಿದಂತಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಸ್ವಾಗತಿಸಿದ ಹುಬ್ಬಳ್ಳಿ ಪ್ರಾದೇಶಿಕ ವ್ಯವಸ್ಥಾಪಕ ಜಿ.ಜಿ. ಪ್ರಸಾದ, ಮಹಾಲಿಂಗಪುರ ವ್ಯಾಪಾರಿ ಕೇಂದ್ರವಾಗಿ ಕೃಷಿ, ನೀರಾವರಿ, ಉದ್ದಿಮೆ, ಬೆಲ್ಲ, ಅರಿಷಿಣ ಉತ್ಪಾದನೆ ಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿಯ ಗ್ರಾಹಕರ ಸಮಸ್ಯೆಗಳಿಗೆ ಬ್ಯಾಂಕು ಸ್ಪಂದಿಸುತ್ತದೆ ಎಂದರು. ಸಮೀರವಾಡಿ ಸೋಮಯ್ಯ ಸಕ್ಕರೆ ಕಾರ್ಖಾನೆ ನಿರ್ದೇಶಕ ವಿ.ಶಿವಪ್ರಕಾಶಂ ಮಾತನಾಡಿದರು. ಸಿದ್ಧ ಸಂಸ್ಥಾನ ಮಠದ ಜಗದ್ಗುರು ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಉದ್ಘಾಟಿಸಿ ಶುಭ ಹಾರೈಸಿದರು.ಶಾಂತಾರಾಮ, ಜ್ಯೆನಾಪುರ, ಗಣ್ಯ ವ್ಯಾಪಾರಸ್ಥರಾದ ಎಫ್.ಎಚ್. ಕುಂಟೋಜಿ, ಶ್ರೀಶೈಲ ಉಳ್ಳೇಗಡ್ಡಿ ಮಾತನಾಡಿದರು. ಪುರಸಭೆ ಸದಸ್ಯರಾದ ಜಿ.ಎಸ್. ಗೊಂಬಿ, ಬಸವರಾಜ ಅವರಾದಿ, ಗುರುನಾಥ ಜಮಖಂಡಿ, ಚಂದ್ರು ಗೊಂದಿ, ಬಸವರಾಜ ವಜ್ರಮಟ್ಟಿ, ಬಸವರಾಜ ಸುಣಧೋಳಿ, ದಲಾಲ ವರ್ತಕರ ಸಂಘದ ಅಧ್ಯಕ್ಷರಾದ ಅಂಬಲಝೇರಿ, ಸಕ್ಕರೆ ಕಾರ್ಖಾನೆ ಜಿಎಂ ಅನಿಲಕುಮಾರಸಿಂಗ್ ಉಪಸ್ಥಿತರಿದ್ದರು.ಶಾಖಾ ವ್ಯವಸ್ಥಾಪಕ ರಾಜೇಂದ್ರ ಟೆಂಗಿನಕಾಯಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.