ಎಸ್‌ಬಿಐ-ಕ್ರೆಡಾಯ್ ರಿಯಾಲ್ಟಿ ಮೇಳ

7

ಎಸ್‌ಬಿಐ-ಕ್ರೆಡಾಯ್ ರಿಯಾಲ್ಟಿ ಮೇಳ

Published:
Updated:

ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮತ್ತು ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಮಹಾಸಂಘ  (ಕ್ರೆಡಾಯ್) ಜಂಟಿಯಾಗಿ ಇಲ್ಲಿ ಮೂರು ದಿನಗಳ `ರಿಯಾಲ್ಟಿ ಮೇಳ~ ಆಯೋಜಿಸಿವೆ.ಮೇಳಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಗಿದ್ದು ಫೆಬ್ರುವರಿ, 25 ಮತ್ತು 26ರಂದು ನಡೆಯಲಿದೆ.  `ಕ್ರೆಡಾಯ್~ ಸದಸ್ಯತ್ವ ಹೊಂದಿರುವ ಸುಮಾರು 40 ರಿಯಲ್ ಎಸ್ಟೇಟ್ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ.ಬೆಂಗಳೂರಿನಲ್ಲಿ ನಿವೇಶನ, ಅಪಾರ್ಟ್‌ಮೆಂಟ್, ವಿಲ್ಲಾಗಳನ್ನು  ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ಒಂದೇ ಸೂರಿನಡಿ ಸಮಗ್ರ ಮಾಹಿತಿ ಲಭ್ಯವಾಗಲಿದೆ ಎಂದು  ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ `ಎಸ್‌ಬಿಐ~ ಚೀಫ್ ಜನರಲ್ ಮ್ಯಾನೇಜರ್ ಅಶ್ವಿನಿ ಮೆಹ್ರಾ ತಿಳಿಸಿದರು.ಮೇಳದ ವಿಶೇಷ ಕೊಡುಗೆಯಾಗಿ ಗೃಹ ಸಾಲ ಬಡ್ಡಿ ದರದಲ್ಲಿ ಬ್ಯಾಂಕ್  ಶೇ 0.25ರಷ್ಟು ಮತ್ತು ಪರಿಷ್ಕರಣಾ ಶುಲ್ಕದಲ್ಲಿ ಶೇ 50ರಷ್ಟು ರಿಯಾಯ್ತಿ ಕಲ್ಪಿಸಿದೆ. ಸಾಲ ಮರುಪಾವತಿ ಅವಧಿ ಗರಿಷ್ಠ 30 ವರ್ಷಗಳಾಗಿದ್ದು, ಪೂರ್ವ ಪಾವತಿ ಆಯ್ಕೆಯೂ ಲಭ್ಯವಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry