ಎಸ್‌ಬಿಐ: ಗೃಹ ಸಾಲ ರಿಯಾಯ್ತಿ

ಭಾನುವಾರ, ಮೇ 26, 2019
28 °C

ಎಸ್‌ಬಿಐ: ಗೃಹ ಸಾಲ ರಿಯಾಯ್ತಿ

Published:
Updated:

ಮುಂಬೈ (ಪಿಟಿಐ): ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ತನ್ನ ಗೃಹ ಸಾಲಗಳ ಮೇಲಿನ  ಬಡ್ಡಿ ದರಗಳಲ್ಲಿ ಶೇ 0.25ರಷ್ಟು ರಿಯಾಯ್ತಿ ಪ್ರಕಟಿಸಿದೆ.ಪ್ರತಿಸ್ಪರ್ಧಿ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರಗಳ ಆಮಿಷ ಒಡ್ಡಿರುವ ಹಿನ್ನೆಲೆಯಲ್ಲಿ, ಎಸ್‌ಬಿಐ ಕೂಡ ತನ್ನ ಬದಲಾಗುವ ಬಡ್ಡಿ ದರಗಳಲ್ಲಿ ಈ ರಿಯಾಯ್ತಿ ನೀಡಲು ಮುಂದಾಗಿದೆ.  ಅಕ್ಟೋಬರ್ 31ರವರೆಗೆ ಇದ್ದ ಈ ಯೋಜನೆಯನ್ನು ಈಗ ಡಿಸೆಂಬರ್ ತಿಂಗಳಾಂತ್ಯದವರೆಗೆ ಮುಂದುವರೆಸಿದೆ. ಸದ್ಯಕ್ಕೆ ಜಾರಿಯಲ್ಲಿ ಇರುವ ವಿಶೇಷ ಗೃಹ ಸಾಲ ಪ್ರಚಾರ ಆಂದೋಲನವು ಈ ವರ್ಷಾಂತ್ಯದವರೆಗೆ ಇರಲಿದೆ ಎಂದು ಬ್ಯಾಂಕ್ ಪ್ರಕಟಿಸಿದೆ. ರೂ. 30 ಲಕ್ಷವರೆಗಿನ ಗೃಹ ಸಾಲಕ್ಕೆ ಈ ಮೊದಲಿನ ಶೇ 10.75ರ ಬದಲಿಗೆ ಶೇ 10.50ರಷ್ಟು ಬಡ್ಡಿ ವಿಧಿಸಲಾಗುವುದು, ಆದರೆ, ರೂ. 30 ಲಕ್ಷಕ್ಕಿಂತ ಹೆಚ್ಚಿನ ಮತ್ತು 75 ಲಕ್ಷದವರೆಗಿನ ಸಾಲಕ್ಕೆ ಶೇ 10.75ರಷ್ಟು ಬಡ್ಡಿ ವಿಧಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry