ಎಸ್‌ಬಿಐ ಬ್ಯಾಂಕ್‌ನಿಂದ ಫ್ಯಾನ್ ವಿತರಣೆ

7

ಎಸ್‌ಬಿಐ ಬ್ಯಾಂಕ್‌ನಿಂದ ಫ್ಯಾನ್ ವಿತರಣೆ

Published:
Updated:

ರಾಣೆಬೆನ್ನೂರು:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7 ಮತ್ತು 8ಕ್ಕೆ 2012ನೇ ಸಾಲಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ದೇಣಿಗೆಯಾಗಿ ಶುದ್ಧ ಕುಡಿಯುವ ನೀರಿನ ಯಂತ್ರ ಹಾಗೂ ಫ್ಯಾನುಗಳನ್ನು ವಿತರಿಸಲಾಯಿತು.ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಐ.ಸಿ. ಅಣ್ಣಿಗೇರಿ ಅವರು ಶಾಲೆ ಮುಖ್ಯ ಶಿಕ್ಷಕರಿಗೆ ಶುದ್ಧ ಕುಡಿಯುವ ನೀರಿನ ಯಂತ್ರ ಹಾಗೂ ಫ್ಯಾನುಗಳನ್ನು ವಿತರಿಸಿ ಮಾತನಾಡಿ, ನಮ್ಮ ಬ್ಯಾಂಕ್‌ವಯಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತದೆ. ವಿದ್ಯಾರ್ಥಿಗಳು ಈ ಸಲಕರಣೆಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದರು.ಕ್ಷೇತ್ರಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ ಮಾತನಾಡಿ, ದಾನ ಮಾಡುವುದರಿಂದ ಗೌರವ ಬರುತ್ತದೆ. ಹಣ ಗಳಿಕೆಯಿಂದ ಏನು ಸಾಧ್ಯವಿಲ್ಲ. ದಾನ ಮಾಡುವುದರಿಂದ ಅವರ ಮಕ್ಕಳಿಗೆ ಪುಣ್ಯ ಬರುತ್ತದೆ ಎಂದರು.  ಇದೇ ಸಂದರ್ಭದಲ್ಲಿ ಈ ಶಾಲೆಯ ಹಳೇ ವಿದ್ಯಾರ್ಥಿನಿ ಲಲಿತಾ ಸುರೇಶ ಅವರು ಎರಡು ಫ್ಯಾನುಗಳನ್ನು ದೇಣಿಗೆಯಾಗಿ ನೀಡಿದರು.ನಗರಸಭೆ ಸದಸ್ಯೆ ಶಾರದಾ ಆನ್ವೇರಿ, ಸಿ.ಟಿ. ಸುರೇಶ, ಎಸ್.ಬಿ. ಸಣ್ಣಕ್ಕಿ ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಕುಬೇರಪ್ಪ ಕೊಂಡಜ್ಜಿ ಅಧ್ಯಕ್ಷತೆ ವಸಿದ್ದರು. ಜೆ.ಜಿ. ಗವ್ವೇನವರ ಸ್ವಾಗತಿಸಿದರು. ಶಿವಾನಂದ ಮೇಟಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ವೈ.ಎಸ್. ಪಾಟೀಲ ನಿರೂಸಿದರು. ಪಿ.ಎ. ಹವಳದ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry