ಎಸ್‌ಬಿಐ: ರಿಯಾಯ್ತಿ ಬಡ್ಡಿ ದರ

7

ಎಸ್‌ಬಿಐ: ರಿಯಾಯ್ತಿ ಬಡ್ಡಿ ದರ

Published:
Updated:

ಮುಂಬೈ (ಪಿಟಿಐ): ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಹೈನೋದ್ಯಮ, ಕೋಳಿ ಸಾಕಾಣಿಕೆ ಮತ್ತು ತೋಟಗಾರಿಕೆ ವಲಯಕ್ಕೆ ರಿಯಾಯ್ತಿ ಬಡ್ಡಿ ದರದ ಸಾಲ ನೀಡುವುದಾಗಿ ಪ್ರಕಟಿಸಿದೆ.ಗರಿಷ್ಠ ಮೊತ್ತದ ಹೈನೋದ್ಯಮ ಯೋಜನೆಗಳು ಮತ್ತು 10ಕ್ಕಿಂತ ಹೆಚ್ಚು ಹಸುಗಳನ್ನು ಸಾಕಿರುವ ಸಣ್ಣ ಪ್ರಮಾಣದ ಹೈನುಗಾರಿಕೆ ನಡೆಸುವವರಿಗೆ ಶೇ 10ರ ಬಡ್ಡಿ

ದರಗಳಲ್ಲಿ ಸಾಲ ನೀಡಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.ಕೋಳಿ ಸಾಕಾಣಿಕೆಗೆ ಅಗತ್ಯವಾದ  ರೂ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಲವನ್ನು ಶೇ 10.50ರ ಬಡ್ಡಿ ದರದಲ್ಲಿ ನೀಡಲಾಗುವುದು.ಸದ್ಯಕ್ಕೆ ಈ ವಲಯಗಳಿಗೆ ಶೇ 12.10ರಿಂದ ಶೇ 14.85ರಷ್ಟು ಬಡ್ಡಿ ದರಗಳಲ್ಲಿ ಸಾಲ ನೀಡಲಾಗುತ್ತಿದೆ. ಈ ಹೊಸ ರಿಯಾಯ್ತಿ ದರದ ಬಡ್ಡಿ ದರಗಳನ್ನು 2011ರ ಮಾರ್ಚ್ ತಿಂಗಳ ಅಂತ್ಯದವರೆಗೆ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry